ಮೈಸೂರು, ನ. 22(ಎಲ್‍ಎನ್‍ವೈ)- ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿ ಷತ್‍ಗೆ ಡಿಸೆಂಬರ್ 10ರಂದು ನಡೆಯ ಲಿರುವ ಚುನಾವಣೆಗೆ ಮೈಸೂರು ದ್ವಿಸದಸ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸಿ.ಎನ್.ಮಂಜೇಗೌಡ ಅವರನ್ನು ಘೋಷಿಸಲಾಗಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಅಲ್ಲಿ ಟಿಕೆಟ್ ಕೈತಪ್ಪುವ ಸೂಚನೆ ದೊರೆ ಯುತ್ತಿದ್ದಂತೆಯೇ ಜೆಡಿಎಸ್ ಸಂಪರ್ಕ ಬೆಳೆಸಿದ್ದ ಮಂಜೇಗೌಡರು ಇಂದು ಸಂಜೆ ತಾನೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದು, ರಾತ್ರಿ ಖಾಸಗಿ ಹೋಟೆಲ್ ನಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಮಂಜೇಗೌಡರನ್ನು ಜೆಡಿಎಸ್ ಅಭ್ಯರ್ಥಿ ಯಾಗಿ ಆಯ್ಕೆ ಮಾಡಲಾಯಿತು.
ಮಂಜೇಗೌಡರ ಪಕ್ಷ ಸೇರ್ಪಡೆ ಕಾರ್ಯ ಕ್ರಮದ ನಂತರ ಕುಮಾರಸ್ವಾಮಿಯವರು ಕಾರ್ಯಕರ್ತರ ಸಭೆ ನಡೆಸಿ, ಟಿಕೆಟ್ ಆಕಾಂಕ್ಷಿಗಳಾಗಿರುವ ಜಿಪಂ ಮಾಜಿ ಸದಸ್ಯ ಬೀರಿಹುಂಡಿ ಬಸವಣ್ಣ, ಬೆಳವಾಡಿ ಗ್ರಾಪಂ. ಮಾಜಿ ಅಧ್ಯಕ್ಷ ಶಿವಮೂರ್ತಿ, ಮಾಜಿ ಮೇಯರ್ ಆರ್. ಲಿಂಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಮತ್ತು ಇಂದು ಪಕ್ಷಕ್ಕೆ ಸೇರ್ಪಡೆಯಾದ ಮಂಜೇಗೌಡ ಇವರಲ್ಲಿ ಒಬ್ಬರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವಂತೆ ಶಾಸಕರಾದ ಸಾ.ರಾ.ಮಹೇಶ್, ಕೆ. ಮಹ ದೇವ್, ಅಶ್ವಿನ್‍ಕುಮಾರ್, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಅಧ್ಯಕ್ಷರೂ ಹಾಗೂ ಮುಖಂಡರಿಗೆ ಕುಮಾರಸ್ವಾಮಿ ಜವಾಬ್ದಾರಿ ವಹಿಸಿದ್ದರು. ಪಕ್ಷದ ಮುಖಂಡರ ಸಭೆಯಲ್ಲಿ ಸಿ.ಎನ್.ಮಂಜೇಗೌಡರನ್ನು ಅಭ್ಯರ್ಥಿಯಾಗಿ ಒಮ್ಮತದಿಂದ ಆಯ್ಕೆ ಮಾಡಲಾ ಗಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ತಿಳಿಸಿದರು.
ಇದಕ್ಕೂ ಮುನ್ನಾ ರಾಮಕೃಷ್ಣನಗರದಲ್ಲಿರುವ ಮೈಮುಲ್ ಮಾಜಿ ಅಧ್ಯಕ್ಷರೂ ಆದ ಜೆಡಿಎಸ್ ಮುಖಂಡ ಮಾವಿನಹಳ್ಳಿ ಸಿದ್ದೇಗೌಡ ಅವರ ನಿವಾಸಕ್ಕೆ ಕುಮಾರಸ್ವಾಮಿ ಊಟಕ್ಕೆ ಬಂದಾಗ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರೂ ಆಗಮಿಸಿದರು. ಮಾಂಸಾಹಾರ ಇದ್ದ ಕಾರಣ ಸೋಮವಾರ ತಾವು ಮಾಂಸಾಹಾರ ಸೇವಿಸುವುದಿಲ್ಲ ಎಂದ ಸಂದೇಶ್ ನಾಗರಾಜ್, ಕುಮಾರಸ್ವಾಮಿ ಮತ್ತು ಶಾಸಕ ಸಾ.ರಾ. ಮಹೇಶ್ ಊಟ ಮಾಡುತ್ತಿದ್ದಾಗ ಅವರ ಬಳಿಯೇ ಕುರಿತು, ಔಪಚಾರಿಕ ಮಾತುಕತೆಯಲ್ಲಿ ತೊಡಗಿದರು. ಈ ವೇಳೆ ಕುಮಾರಸ್ವಾಮಿ ಮತ್ತು ಸಾ.ರಾ. ಮಹೇಶ್ ಅವರೊಂದಿಗೆ ಸಂದೇಶ್ ನಾಗರಾಜ್ ಕುಶಲೋಪರಿ ನಡೆಸಿದರು.
ನಂತರ ಕುಮಾರಸ್ವಾಮಿ ಮತ್ತು ಸಾ.ರಾ.ಮಹೇಶ್ ವಿಜಯನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದರೆ, ಸಂದೇಶ್ ನಾಗರಾಜ್ ತಮ್ಮ ನಿವಾಸಕ್ಕೆ ಹೋದರು. ರಾತ್ರಿ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, ರಾಜಕಾರಣ ಏನೇ ಇರಲಿ ಸಂದೇಶ್ ನಾಗರಾಜ್ ಸ್ನೇಹಿತರಾಗಿದ್ದು, ಪಕ್ಷದ ಮುಖಂಡರ ಮನೆಗೆ ಊಟಕ್ಕೆ ಹೋಗಿದ್ದಾಗ ಅವರೂ ಬಂದಿದ್ದರು. ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು ಎಂದರು. ಸಂದೇಶ್ ನಾಗರಾಜರು ಹಾಲಿ ಜೆಡಿಎಸ್‍ನ ವಿಧಾನಪರಿ ಷತ್ ಸದಸ್ಯರಾಗಿದ್ದು, ಅವರ ಅಧಿಕಾರದ ಅವಧಿ ಜನವರಿ 5ಕ್ಕೆ ಅಂತ್ಯಗೊಳ್ಳಲಿದೆ.