ಚಾಮುಂಡಿಬೆಟ್ಟ ಉಳಿಸಿ
ಮೈಸೂರು

ಚಾಮುಂಡಿಬೆಟ್ಟ ಉಳಿಸಿ

November 23, 2021

ಮೈಸೂರು,ನ.22(ಆರ್‍ಕೆಬಿ)- ಚಾಮುಂಡಿ ಬೆಟ್ಟ ಉಳಿಸಲು ವಿವಿಧ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳಲು ಸೋಮವಾರ ಮೈಸೂರು ಗ್ರಾಹಕರ ಪರಿಷತ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಚಾಮುಂಡಿ ಬೆಟ್ಟ ಉಳಿಸಿ ಹೋರಾಟದ ಅಂಗವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪರಿಸರವಾದಿಗಳು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಚಾಮುಂಡಿ ಬೆಟ್ಟ ಉಳಿಸುವ ಕುರಿತಂತೆ ಸಲಹೆಗಳನ್ನು ನೀಡಿದರು. ಎಲ್ಲರ ಸಲಹೆಗಳ ಬಳಿಕ ಸಭೆ ಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳ ಲಾಯಿತು. ಚಾಮುಂಡಿಬೆಟ್ಟ ಉಳಿವಿಗಾಗಿ ಜನವರಿ ತಿಂಗಳಿಂದ ಸತ್ಯಾಗ್ರಹ ಆರಂಭಿ ಸುವುದು, ಈ ವೇಳೆ ಮಾನವ ಸರಪಳಿ, ಶಾಲಾ ಕಾಲೇಜುಗಳಲ್ಲಿ ಸಹಿ ಸಂಗ್ರಹ ಅಭಿ ಯಾನ, ಕರಪತ್ರ ಹಂಚುವ ಮೂಲಕ ಜನಜಾಗೃತಿ ಉಂಟು ಮಾಡುವ ನಿರ್ಣಯ ಕೈಗೊಂಡರು. ಸತ್ಯಾಗ್ರಹ ಯಾರನ್ನೂ ಬಲ ವಂತಪಡಿಸುವಂತಿರಬಾರದು. ಅಂದು ಪ್ರತಿಯೊಬ್ಬರೂ ತಮ್ಮ ಮನೆಯಲ್ಲೇ ಸ್ವಯಂ ಲಾಕ್‍ಡೌನ್ ಆಗುವಂತೆ ಮಾಡುವುದು. ಬೆಟ್ಟದಲ್ಲಿ ಖಾಸಗಿ ಚಟುವಟಿಕೆಗಳನ್ನು ಉತ್ತೇ ಜಿಸದಂತೆ ನೋಡಿಕೊಳ್ಳುವುದು. ಇದಕ್ಕೆ ಜನ ಬೆಂಬಲ ಪಡೆಯಲು ಮೈಸೂರಿನಲ್ಲಿ ಸಹಿ ಸಂಗ್ರಹ, ಭಿತ್ತಿಪತ್ರ, ಕರಪತ್ರ ಹಂಚುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು ವಂತೆ ಸಭೆಯಲ್ಲಿ
ಸಲಹೆಗಳು ಕೇಳಿಬಂದವು. ಅಭಿಯಾನದಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸು ವಂತೆ ಮಾಡಬೇಕು ಎಂದು ವಿದ್ಯಾವಿಕಾಸ್ ಕಾಲೇಜು ವಿದ್ಯಾರ್ಥಿ ಯಶವಂತ್ ಸಲಹೆ ನೀಡಿದರು. ಇದಕ್ಕೆ ಸ್ಪಂದಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚೆನ್ನೇಗೌಡ ಆ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಚಾಮುಂಡಿಬೆಟ್ಟದ ಏಕೆ ಉಳಿಯಬೇಕು? ನಾವೇನು ಮಾಡಬೇಕು? ಎಂಬ ಜನಜಾಗೃತಿಗಾಗಿ ಕರಪತ್ರ ಕರಡು ರಚನಾ ಸಮಿತಿ (ಕುಸುಮಾ ಆಯರಹಳ್ಳಿ, ಮಾಳವಿಕಾ ಗುಬ್ಬಿವಾಣಿ, ಶೈಲಜೇಶ), ಶಾಲಾ ಕಾಲೇಜುಗಳಲ್ಲಿ ಸಹಿ ಸಂಗ್ರಹ ಅಭಿಯಾನ ಸಮಿತಿ (ವಿದ್ಯಾರ್ಥಿ ಯಶವಂತ್, ಕಾಳಚನ್ನೇಗೌಡ), ಸಾರ್ವಜನಿಕರಿಂದ ವಿವಿಧೆಡೆ ಸಹಿ ಸಂಗ್ರಹ ಅಭಿಯಾನ ಸಮಿತಿ (ಲೀಲಾ, ನಂಜುಂಡ, ಪ್ರವೀಣ್, ಗೀತಾ) ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಲವರು, ಚಾಮುಂಡಿಬೆಟ್ಟವನ್ನು ಸಂರಕ್ಷಿತ ಪ್ರದೇಶ, ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಿಸಬೇಕು. ಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳಿಗೆ ಕಡಿವಾಣ ಹಾಕಬೇಕು. ಖಾಸಗಿ ವಾಹನಗಳ ಪ್ರವೇಶ ಸಂಪೂರ್ಣ ನಿರ್ಬಂಧಿಸಬೇಕು. ಬೆಟ್ಟದ ಆಡಳಿತವನ್ನು ಮೊದಲಿಗೆ ಗ್ರಾಮ ಪಂಚಾಯಿತಿಯಿಂದ ಜಿಲ್ಲಾಡಳಿತದ ಸುರ್ಪರ್ದಿಗೆ ಪಡೆಯುವಂತಾಗಬೇಕು. ಬೆಟ್ಟದಲ್ಲಿರುವ ನಿವಾಸಿಗಳನ್ನು ಸ್ಥಳಾಂತರಗೊಳಿಸಬೇಕು ಎಂದು ಸಲಹೆ ನೀಡಿದರು.

ಪರಿಸರವಾದಿ ಪರಶುರಾಮೇಗೌಡ ಮಾತನಾಡಿ, ಏಕಾ-ಏಕಿ ಬೆಟ್ಟದ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗದು. ಮೊದಲು ಚಾಮುಂಡಿಬೆಟ್ಟ ಉಳಿಸಿ ಅಭಿಯಾನವನ್ನು ಮೈಸೂರಿನ ನಾಗರಿಕರಿಗೆ ಜಾಗೃತಿ ಮೂಡಿಸಲು ಮೈಸೂರಿನ ವಿವಿಧ ಬಡಾವಣೆಗಳಲ್ಲಿ ನಿರಂತರ ಸಹಿ ಸಂಗ್ರಹ ಅಭಿಯಾನ ನಡೆಸಬೇಕು. ಕನಿಷ್ಠ ಮೂರು ತಿಂಗಳ ಕಾಲ ಸತತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪರಿಸರದೊಂದಿಗೆ ಜೀವ ವೈವಿಧ್ಯತೆಯೂ ಸಂರಕ್ಷಣೆ ಯಾಗಬೇಕು. ಅದಕ್ಕಾಗಿ ಅಲ್ಲಿ ರಸ್ತೆ ಅಪಘಾತಗಳ ಸಂಖ್ಯೆ, ಅಪಘಾತಗಳಿಂದ ಮೃತಪಟ್ಟ ಪ್ರಾಣಿಗಳ ಸಂಖ್ಯೆಗಳನ್ನು ಕುರಿತ ವರದಿ ಸಿದ್ದಪಡಿಸಿ, ಸರ್ಕಾರಕ್ಕೆ ಎಚ್ಚರಿಕೆಯ ಮಾಹಿತಿ ನೀಡುವಂತಾಗಬೇಕು ಎಂದು ಆಗ್ರಹಿಸಿದರು. ಮೈಸೂರು ಗ್ರಾಹಕರ ಪರಿಷತ್ತಿನ ‘ಭಾಮಿ ವಿ.ಶೆಣೈ, ಪರಿಸರವಾದಿಗಳಾದ ಮಾಳವಿಕ ಗುಬ್ಬಿವಾಣಿ, ಶೈಲಜೇಶ, ಕುಸುಮಾ ಆಯರ ಹಳ್ಳಿ, ವಿದ್ಯಾರ್ಥಿ ಯಶವಂತ್, ಪೆÇ್ರ.ಕಾಳಚನ್ನೇಗೌಡ, ಲೀಲಾ, ನಂಜುಂಡ, ಪ್ರವೀಣ್, ಗೀತಾ, ಆದರ್ಶ್, ಟೀಂ ಮೈಸೂರಿನ ಹರೀಶ್ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »