ಕೆನರಾ ಬ್ಯಾಂಕ್‍ನ ಸಂಚಾರಿ ಲಘು ಎಟಿಎಂಗೆ ಚಾಲನೆ
ಮೈಸೂರು

ಕೆನರಾ ಬ್ಯಾಂಕ್‍ನ ಸಂಚಾರಿ ಲಘು ಎಟಿಎಂಗೆ ಚಾಲನೆ

April 7, 2020

ಮೈಸೂರು,ಏ.6-ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ, ಮೈಸೂರು ಹಾಗೂ ಚಾಮ ರಾಜನಗರ ಜಿಲ್ಲೆಯ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಬ್ಯಾಂಕ್ ಮಿತ್ರರ ಸಹಯೋಗದೊಂದಿಗೆ ಸಂಚಾರಿ ಲಘು ಎಟಿಎಂ ವ್ಯವಸ್ಥೆ ಕಲ್ಪಿಸಿದ್ದು, ಇದಕ್ಕೆ ಮೈಸೂರಿನ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮುಖ್ಯಸ್ಥೆ ಶ್ರೀಮತಿ ಕೆ.ಬಿ.ಗೀತಾ ಚಾಲನೆ ನೀಡಿದರು. ಈ ಸಂಚಾರಿ ಲಘು ಎಟಿಎಂಗಳು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಹಳ್ಳಿಗಳು ಹಾಗೂ ನಗರ ಪ್ರದೇಶದ ವಾರ್ಡ್ ಗಳಲ್ಲಿ ಸಂಚರಿಸಲಿದ್ದು, ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಮಹಿಳಾ ಹಾಗೂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೈತ ಫಲಾನುಭವಿಗಳು ಮನೆಯಲ್ಲಿ ಉಳಿದುಕೊಂಡು ಬ್ಯಾಂಕಿನ ವಹಿವಾಟು ಮಾಡುವುದಕ್ಕೆ ಅನುಕೂಲವಾಗಲಿದೆ. ಮಹಾಮಾರಿ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಈ ವ್ಯವಸ್ಥೆಯೂ ಸಹಾಯಕವಾಗಲಿದೆ.

Translate »