ಮೈಸೂರಿನ ಕೋವಿಡ್ ಆಸ್ಪತ್ರೆ ವೈದ್ಯರಿಗೆ ನಿತ್ಯ ಶುಚಿ-ರುಚಿಯಾದ ಆಹಾರ ವ್ಯವಸ್ಥೆ
ಮೈಸೂರು

ಮೈಸೂರಿನ ಕೋವಿಡ್ ಆಸ್ಪತ್ರೆ ವೈದ್ಯರಿಗೆ ನಿತ್ಯ ಶುಚಿ-ರುಚಿಯಾದ ಆಹಾರ ವ್ಯವಸ್ಥೆ

April 7, 2020

ಮೈಸೂರು, ಏ.6 (ಪಿಎಂ)- `ಕೊರೊನಾ’ ವೈರಾಣು ಸಾಂಕ್ರಾಮಿಕ ಕಾಯಿಲೆಗಳ ಪೈಕಿ ಅತ್ಯಂತ ಭಯಾನಕ. ಪ್ರಸ್ತುತ ಇಡೀ ಜಗತ್ತೇ ಇದರಿಂದ ತತ್ತರಿಸಿದ್ದು, ಮೈಸೂ ರಿನಲ್ಲೂ ಈ ವೈರಾಣು ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆ (ಕೋವಿಡ್ ಆಸ್ಪತ್ರೆ) ವ್ಯವಸ್ಥೆ ಮಾಡಲಾಗಿದೆ.

ಮೈಸೂರು ಜಿಲ್ಲಾಸ್ಪತ್ರೆ ಕಟ್ಟಡವನ್ನೇ ಇದೀಗ ಕೋವಿಡ್ ಆಸ್ಪತ್ರೆಯಾಗಿ ಪರಿ ವರ್ತಿಸಿದ್ದು, ಇಲ್ಲಿ ಪ್ರಸ್ತುತ ಸುಮಾರು 50 ಮಂದಿ ವೈದ್ಯರು ಕೊರೊನಾ ವಿರುದ್ಧ ಸೆಣ ಸಾಡುತ್ತಿದ್ದಾರೆ. ಇಲ್ಲಿ ಚಿಕಿತ್ಸೆ ನೀಡುವುದು ವೈದ್ಯರಿಗೆ ದೊಡ್ಡ ಸವಾಲೇ ಎದುರಾಗಿದೆ. ವೈದ್ಯರು ಎಚ್ಚರ ತಪ್ಪಿದರೆ ಅವರೂ ಈ ಸೋಂಕಿಗೆ ತುತ್ತಾಗಬೇಕಾಗುತ್ತದೆ.

ಇಂತಹ ಕಠಿಣ ವ್ಯವಸ್ಥೆಯಲ್ಲಿ ಸೇವೆ ಸಲ್ಲಿ ಸುತ್ತಿರುವ ವೈದ್ಯರಿಗೆ ನಿತ್ಯ ಅನ್ನ ದಾಸೋಹ ನೀಡುತ್ತಿದ್ದಾರೆ ಮತ್ತೊಬ್ಬ ವೈದ್ಯರು. ಜೀವದ ಹಂಗು ತೊರೆದು ವೈದ್ಯಕೀಯ ಸೇವೆ ನೀಡು ತ್ತಿರುವ ಕೋವಿಡ್ ಆಸ್ಪತ್ರೆ (ಜಿಲ್ಲಾಸ್ಪತ್ರೆ) ವೈದ್ಯರಿಗೆ ನಿತ್ಯ ದಾಸೋಹ ನೀಡುವ ಮೂಲಕ ಸಾರ್ಥಕತೆ ಮೆರೆಯುತ್ತಿದ್ದಾರೆ ವೈದ್ಯರೂ ಆದ ರೋಟರಿ ಸಂಸ್ಥೆ ಮೈಸೂರು ವಲಯ-8ರ ಲೆಫ್ಟಿನೆಂಟ್ ಡಾ.ದಿಲೀಪ್.

ಮೈಸೂರಿನ ಎಲ್ಲಾ ರೋಟರಿ ಕ್ಲಬ್‍ಗಳ ಸಹಕಾರದೊಂದಿಗೆ ಡಾ.ದಿಲೀಪ್ ನೇತೃತ್ವ ದಲ್ಲಿ ಕೋವಿಡ್ ಆಸ್ಪತ್ರೆಯ ವೈದ್ಯರಿಗೆ ಬೆಳ ಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟ ನಿತ್ಯ ಪೂರೈಕೆಯಾಗುತ್ತಿದೆ. ಈಗಾ ಗಲೇ ಏಪ್ರಿಲ್ ತಿಂಗಳು ಪೂರ್ತಿ 200 ಮಂದಿಗೆ ವೈದ್ಯರಿಗೆ ಅನ್ನ ದಾಸೋಹ ನೀಡುವ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಂಡಿ ದ್ದಾರೆ ಡಾ.ದಿಲೀಪ್. ಇವರ ಈ ಕಾರ್ಯಕ್ಕೆ ಸಹಕಾರವಾಗಿ ನಿಂತಿದ್ದಾರೆ ರೋಟರಿ ಸಹಾಯಕ ಗೌರ್ನರ್ ಸುಬ್ಬುರಾಯ್.

ಬೆಳಗಿನ ತಿಂಡಿಗೆ ಇಡ್ಲಿ-ವಡೆ, ದೋಸೆ, ಖಾರಬಾತ್, ಬೀಸಿಬೇಳೆ ಬಾತ್ ಸೇರಿ ದಂತೆ ವಿವಿಧ ರೀತಿಯ ಉಪಾಹಾರ ನೀಡ ಲಾಗುತ್ತಿದೆ. ಮಧ್ಯಾಹ್ನದ ಊಟಕ್ಕಾಗಿ ಅನ್ನ- ಸಾಂಬಾರ್ ಜೊತೆಗೆ ಚಪಾತಿ, ಪೂರಿ, ರಾಗಿ ರೊಟ್ಟಿ, ಅಕ್ಕಿ ರೊಟ್ಟಿ ಹಾಗೂ ಒಂದು ಕಪ್ ಮೊಸರು ವ್ಯವಸ್ಥೆ ಮಾಡುತ್ತಿದ್ದರೆ, ರಾತ್ರಿ ಊಟಕ್ಕೆ ಪಲಾವ್, ವೆಜ್ ಬಿರಿಯಾನಿ ಸೇರಿ ದಂತೆ ವಿವಿಧ ಬಗೆಯ ರೈಸ್‍ನೊಂದಿಗೆ ಒಂದು ಮೊಟ್ಟೆ ನೀಡಲಾಗುತ್ತಿದೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೇಳೆ ವೈದ್ಯರು ಹೆಚ್ಚು ಜಾಗರೂಕತೆ ವಹಿಸಬೇಕು. ಇಲ್ಲವಾದರೆ ಅವರಿಗೂ ಸೋಂಕು ತಗುಲಲಿದೆ. ಇದೇ ಹಿನ್ನೆಲೆಯಲ್ಲಿ ವಾರ ಕಾಲ ಸೇವೆ ಸಲ್ಲಿಸಿದ ವೈದ್ಯರೂ 14 ದಿನಗಳು ಮನೆಗೆ ತೆರಳದೇ ಪ್ರತ್ಯೇಕ ವಸತಿ ವ್ಯವಸ್ಥೆಯಲ್ಲಿ ಕ್ವಾರಂಟೈನ್‍ನಲ್ಲಿ ಇರಬೇಕಾ ಗುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಇವರಿಗೆ ನೀಡುವ ಆಹಾರದ ಬಗ್ಗೆ ಹೆಚ್ಚು ಸುರಕ್ಷತೆ ವಹಿಸುವುದು ಅತ್ಯಗತ್ಯ.

ಈ ಸಂಬಂಧ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಡಾ.ದಿಲೀಪ್, ಕೋವಿಡ್ ಆಸ್ಪತ್ರೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ 50 ಮಂದಿ ವೈದ್ಯರಿಗೆ ನಿತ್ಯ ಆಹಾರದ ವ್ಯವಸ್ಥೆ ಮಾಡಲಾಗಿದೆ. ಏ.1 ರಿಂದ ಈ ಸೇವೆ ಒದಗಿಸುತ್ತಿದ್ದೇವೆ. ಏಪ್ರಿಲ್ ತಿಂಗಳು ಪೂರ್ತಿ ಆಹಾರ ಒದಗಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಆಸ್ಪತ್ರೆಯಲ್ಲಿ ಮೊದಲ ಬ್ಯಾಚ್ ಏ.7ಕ್ಕೆ ತಮ್ಮ ಕರ್ತವ್ಯ ಪೂರ್ಣಗೊಳಿಸಲಿದೆ. ಹೀಗೆ 4 ಬ್ಯಾಚ್‍ಗಳಲ್ಲಿ 200 ಮಂದಿ ವೈದ್ಯರು ಕರ್ತವ್ಯಕ್ಕೆ ನಿಯೋಜನೆಯಾಗಿದ್ದಾರೆ ಎಂದರು.

ಒಂದು ಬ್ಯಾಚ್‍ನಲ್ಲಿ ವೈದ್ಯರು ಕರ್ತವ್ಯ ಪೂರ್ಣಗೊಳಿಸಿದರೂ ಅವರು ಮನೆಗೆ ಹೋಗುವಂತಿಲ್ಲ. ಅವರಿಗೂ ಪ್ರತ್ಯೇಕ ವಸತಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಲಿದೆ. 1 ತಿಂಗಳಿಗೆ ಒಟ್ಟು 200 ಮಂದಿ ವೈದ್ಯರು ಕರ್ತವ್ಯ ನಿರ್ವಹಿಸಲಿದ್ದಾರೆ. ಅವರೆಲ್ಲರಿಗೂ ಆಹಾರ ಒದಗಿಸಲು ಎಲ್ಲಾ ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ. ತಿಂಗಳ ಬಳಿಕ ಸನ್ನಿವೇಶ ನೋಡಿಕೊಂಡು ಮುಂದಿನ ಯೋಜನೆ ರೂಪಿಸಲಿದ್ದೇವೆ. ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನಮ್ಮದೇ `ದಿ ಮೈಸೂರ್ ಸ್ಟೇ’ ಹೋಟೆಲ್ ಇದ್ದು, ಇಲ್ಲಿ ಕೋವಿಡ್ ಆಸ್ಪತ್ರೆ ವೈದ್ಯರಿಗೆ ಅಗತ್ಯವಿರುವ ಆಹಾರ ತಯಾರಿ ಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಇಲ್ಲಿ ಪ್ರತಿ ನಿತ್ಯ 20 ಅಡುಗೆ ಸಿಬ್ಬಂದಿ ಆಹಾರ ತಯಾರಿ ಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದರು.

Translate »