ಹಿಂದುಳಿದ ಬ್ರಾಹ್ಮಣ ಕುಟುಂಬಗಳಿಗೆ ‘ಆಹಾರ ಕಿಟ್’ ವಿತರಣೆ
ಮೈಸೂರು

ಹಿಂದುಳಿದ ಬ್ರಾಹ್ಮಣ ಕುಟುಂಬಗಳಿಗೆ ‘ಆಹಾರ ಕಿಟ್’ ವಿತರಣೆ

April 7, 2020

ಮೈಸೂರು,ಏ.6-ಅರ್ಚಕರು, ಪುರೋ ಹಿತರು ಸೇರಿದಂತೆ 300ಕ್ಕೂ ಹೆಚ್ಚು ಆರ್ಥಿಕ ವಾಗಿ ಹಿಂದುಳಿದ ಬ್ರಾಹ್ಮಣರ ಕುಟುಂಬ ಗಳಿಗೆ ದಿನನಿತ್ಯದ ಅಡುಗೆ ಪದಾರ್ಥಗಳ ಒಳಗೊಂಡ ‘ಆಹಾರ ಕಿಟ್’ಗಳನ್ನು ಕರ್ನಾ ಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ನಿಗ ಮದ ಅಧ್ಯಕ್ಷ ಹೆಚ್.ಎಸ್ ಸಚ್ಚಿದಾನಂದ ಮೂರ್ತಿ ಸೋಮವಾರ ವಿತರಿಸಿದರು.

ಕೊರೊನಾ ಸೋಂಕು ತಡೆಗಟ್ಟಲು ಇಡೀ ದೇಶವೇ ಲಾಕ್‍ಡೌನ್ ಆಗಿರುವುದರಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಮೈಸೂರು ನಗರ ಬ್ರಾಹ್ಮಣ ಸಂಘದ ವತಿಯಿಂದ ಕೃಷ್ಣಮೂರ್ತಿಪುರಂ ಶ್ರೀರಾಮ ಮಂದಿರದಲ್ಲಿ ಅರ್ಚಕರು, ಪುರೋಹಿತರು ಸೇರಿದಂತೆ 300ಕ್ಕೂ ಹೆಚ್ಚು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರ ಕುಟುಂಬಗಳಿಗೆ ದಿನ ನಿತ್ಯದ ಅಡುಗೆ ಪದಾರ್ಥಗಳ ‘ಆಹಾರ ಕಿಟ್’ ವಿತರಿಸಲಾಯಿತು.

ಹೆಚ್.ಎಸ್.ಸಚ್ಚಿದಾನಂದಮೂರ್ತಿ ಮಾತ ನಾಡಿ, ಕರ್ನಾಟಕದಲ್ಲಿ 7 ಲಕ್ಷಕ್ಕೂ ಹೆಚ್ಚು ಬಡ ಬ್ರಾಹ್ಮಣ ಕುಟುಂಬಗಳ ಆರ್ಥಿಕ ಪರಿ ಸ್ಥಿತಿ ತುಂಬಾ ಕಷ್ಟದಲ್ಲಿದೆ. ಇಂದಿನ ಕೊರೊನಾ ಸೊಂಕು ತೊಲಗಲಿ ಎಂದು ಪುರೋಹಿತರು, ಅರ್ಚಕರು ರಾಜ್ಯದ ಎಲ್ಲಾ ಮಠ-ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ. ವಿಪ್ರರು ಸ್ವಾಭಿಮಾನಿಗಳು. ಸಹಾಯ ಪಡೆಯಲು ಹಿಂಜರಿಯುತ್ತಾರೆ. ಆದರೆ ಬಡ ಬ್ರಾಹ್ಮಣ ರನ್ನು ರಕ್ಷಿಸುವುದು ವಿಪ್ರ ಸಂಘ ಸಂಸ್ಥೆಗಳ ಕರ್ತವ್ಯ. ಹಾಗಾಗಿ ಗ್ರಾಮ ಮಟ್ಟದಲ್ಲಿ ವಿಪ್ರರ ಮನೆಗಳಿಗೆ ದಿನನಿತ್ಯ ಅಡುಗೆ ಪದಾರ್ಥ ಗಳ ಒಳಗೊಂಡ ಆಹಾರ ಕಿಟ್ ಮತ್ತು ಹಿರಿಯ ನಾಗರಿಕರಿಗಾಗಿ ಔಷಧಿ ನೆರವಿನ ಮೆಡಿಕಲ್ ಕಿಟ್ ನೀಡಲು ಮುಂದಾಗಿ ದ್ದೇವೆ. ಈಗಾಗಲೇ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದಿಂದಲೂ ವಿಪ್ರ ಮುಖಂ ಡರು ನೆರವು ನೀಡುತ್ತಿದ್ದಾರೆ. ಮೈಸೂರು ಇಸ್ಕಾನ್ ಸೇರಿದಂತೆ ಹಲವರ ನೆರವಿನಿಂದ 10 ಸಾವಿರ ಮನೆಗಳಿಗೆ ನೆರವು ನೀಡಲು ಯೋಜನೆ ರೂಪಿಸಲಾಗಿದೆ ಎಂದರು,

ಇದೇ ವೇಳೆ ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತ ನಾಡಿ, ಮೈಸೂರಿನಲ್ಲಿ ಈಗಾಗಲೇ ವಿವಿಧ ಬಡಾವಣೆಗಳಲ್ಲಿ ಬ್ರಾಹ್ಮಣ ಸಂಘದಿಂದ 500ಬಡ ಬ್ರಾಹ್ಮಣರ ಕುಟುಂಬವನ್ನು ಗುರುತಿಸಿದ್ದು, ಆಯಾ ಮೊಹಲ್ಲಾ ದೇವ ಸ್ಥಾನದ ಪುರೋಹಿತರ ಮೂಲಕ ಮನೆಬಾಗಿ ಲಿಗೆ ಅಗತ್ಯ ವಸ್ತು ತಲುಪಿಸಲು ಪರಶು ರಾಮ ಟಾಸ್ಕ್ ಪೆÇೀರ್ಸ್ ರಚಿಸಲಾಗಿದೆ. ಇದರ ಮಾಹಿತಿಗಾಗಿ ಪುರೋಹಿತರು ಮೊಬೈಲ್ 7829067769 ಸಂಪರ್ಕಿಸಬಹುದು. ಕೊರೊನಾ ಮುಕ್ತ ಮೈಸೂರಿಗಾಗಿ ಪ್ರತಿನಿತ್ಯ ಮೈಸೂರಿನ ಹಳೆಅಗ್ರಹಾರ ವಠಾರಗಳಲ್ಲಿ ವಿಷ್ಣುಸಹಸ್ರನಾಮ ಪಾರಾಯಣ ನಡೆಯು ತ್ತಿದೆ. ಹಿರಿಯ ನಾಗರಿಕರಿಗೆ ಮತ್ತು ಸಣ್ಣ ಪುಟ್ಟ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರ ಆರೋಗ್ಯ ಕಾಪಾಡುವಲ್ಲಿ ನಾವೆಲ್ಲರೂ ಮುಂಜಾ ಗ್ರತಾ ಕ್ರಮ ಕೈಗೊಳ್ಳಬೇಕಿದೆ ಎಂದರು.

ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಡಾ.ಭಾನುಪ್ರಕಾಶ್ ಶರ್ಮ, ಅಖಿಲ ಕರ್ನಾ ಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಕೆ.ರಘುರಾಂ ವಾಜಪೇಯಿ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ, ವೇಣುಗೋಪಾಲ್, ನಂ.ಶ್ರೀಕಂಠಕುಮಾರ್, ಅಪೂರ್ವ ಸುರೇಶ್, ಯುವ ಮುಖಂಡರಾದ ವಿಕ್ರಂ ಅಯ್ಯಂ ಗಾರ್, ಅಜಯ್ ಶಾಸ್ತ್ರಿ, ಕೆ.ಎಂ ನಿಶಾಂತ್, ಸುಚೀಂದ್ರ, ಪ್ರಶಾಂತ್ ಪಚ್ಚಿ, ಅಮೋಘ್ ನಾಗರಾಜ್, ಹರೀಶ್ ಭಾರದ್ವಾಜ್, ವಿಜಯ ಕುಮಾರ್, ಮುರಳಿ ಇತರರಿದ್ದರು.

Translate »