ಸಂಕಷ್ಟ ಎದುರಾದಾಗ ನಕಾರಾತ್ಮಕ ಚಿಂತನೆಗೆ ಒಳಗಾಗಬಾರದು
ಮೈಸೂರು

ಸಂಕಷ್ಟ ಎದುರಾದಾಗ ನಕಾರಾತ್ಮಕ ಚಿಂತನೆಗೆ ಒಳಗಾಗಬಾರದು

April 7, 2020

ಮೈಸೂರು,ಏ.6(ಪಿಎಂ)-ಸಂಕಷ್ಟ ಹಾಗೂ ಸಮಸ್ಯೆ ಗಳು ಎದುರಾದಾಗ ನಕಾರಾತ್ಮಕ ಚಿಂತನೆಗಳಿಗೆ ಒಳ ಗಾಗುವ ಹತಾಶೆ ಮನೋಭಾವನೆ ಬೆಳೆಸಿಕೊಳ್ಳಬಾರದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮ ನ್ವಯ ಅಧಿಕಾರಿ ಎಸ್.ಸಿದ್ದರಾಮಪ್ಪ ಸಲಹೆ ನೀಡಿದರು.

ಮೈಸೂರು ಜಿಲ್ಲಾಡಳಿತದ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್ ಬುಕ್ ಪೇಜ್‍ನಲ್ಲಿ ಆಯೋಜಿಸಿರುವ ವಾಗ್ಮಿಗಳು ಹಾಗೂ ಪರಿಣತರ ಭಾಷಣದ ನೇರ ಪ್ರಸಾರದ ಮೊದಲ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.

ಸಂಕಷ್ಟ ಬಂದಾಗ ಬಹುತೇಕರು ನಕಾರಾತ್ಮಕ ಚಿಂತ ನೆಗೆ ಒಳಗಾಗುತ್ತಾರೆ. ಆದರೆ ಏನೇ ತೊಂದರೆ ಬಂದರೂ ಸಕಾರಾತ್ಮಕ ಚಿಂತನೆಯಿಂದ ಬದುಕು ಕಟ್ಟಿಕೊಳ್ಳ ಬಹುದು. ನಕಾರಾತ್ಮಕ ಆಲೋಚನೆಗಳಿಂದ ಮನಸ್ಸು ದುರ್ಬಲಗೊಳ್ಳುತ್ತದೆ. ಜೀವನದ ಪ್ರತಿ ಹಂತದ ಲ್ಲಿಯೂ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಜೀವನೋತ್ಸಾಹ ಮೆರೆಯಬೇಕು ಎಂದು ತಿಳಿಸಿದರು.

ರಾತ್ರಿ ನಿದ್ರಿಸುವ ಮುನ್ನ ಕನಿಷ್ಠ 10 ನಿಮಿಷ ಧನಾ ತ್ಮಕ ಚಿಂತನೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಯಾವುದೇ ಕೆಲಸಕ್ಕೆ ಕೈ ಹಾಕುವಾಗ ಅದರಿಂದಾಗುವ ಸರಿ ಮತ್ತು ತಪ್ಪುಗಳ ಬಗ್ಗೆ ಅವಲೋಕನ ಮಾಡಿ ಕೊಳ್ಳಬೇಕು. ಯೋಶೋ ಗಾಥೆಗಳನ್ನು ಓದಿ ಪ್ರೇರಣೆ ಪಡೆದುಕೊಳ್ಳ ಬೇಕು ಎಂದರು.

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲೇ ಇರುವಂತಾಗಿದ್ದು, ಮನೆ ಯಲ್ಲಿ ಸಮಯ ಕಳೆ ಯುವುದೇ ಬಹು ದೊಡ್ಡ ಸಮಸ್ಯೆಯಾಗಿದೆ ಎನ್ನಿ ಸಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವು ಕ್ಷೇತ್ರಗಳ ವಿಷಯಗಳನ್ನು ತಿಳಿದುಕೊಳ್ಳಲು ಅವಕಾಶವಾಗಲಿದೆ. ಜೊತೆಗೆ ಆನ್‍ಲೈನ್ ಕೋರ್ಸ್ ಗಳನ್ನು ಮಾಡಿಕೊಳ್ಳಲು ಇದು ಒಳ್ಳೆಯ ಸಮಯ ಎಂದು ಅವರು ತಿಳಿಸಿದರು.

ಈ ಹಿಂದೆ ದೈಹಿಕ ಮತ್ತು ಮಾನಸಿಕ ಒತ್ತಡದಿಂದ ನಮ್ಮ ಕುಟುಂಬಕ್ಕೆ ಸಮಯ ಮೀಸಲಿಡುವುದು ತೀರಾ ಕಡಿಮೆ ಇರಬಹುದು. ಇದೀಗ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ಸಮಯ ಇದ್ದು, ಇದನ್ನು ಈಗ ಸದುಪಯೋಗ ಮಾಡಿಕೊಳ್ಳಬಹುದು. ಜೊತೆಗೆ ಹೆಚ್ಚು ಪುಸ್ತಕಗಳನ್ನು ಓದಬಹುದು. ದಿನಪತ್ರಿಕೆಗಳನ್ನು ಮೊದಲಿನಂತೆ ಕೇವಲ ತಲೆ ಬರಹ ಓದುವ ಬದಲು ಆಳವಾಗಿ ಓದಿ ತಿಳಿದುಕೊಳ್ಳಬಹುದು ಎಂದರು.

ಕವನ, ಕಾದಂಬರಿ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿ ದ್ದರೆ ಈ ಸಮಯದಲ್ಲಿ ಅವುಗಳಲ್ಲಿ ತೊಡಗಿಸಿಕೊಳ್ಳ ಬಹುದು. ದೂರವಾಣಿ ಮೂಲಕ ಹಳೆಯ ಸ್ನೇಹಿತ ರೊಂದಿಗೆ ಕಷ್ಟ ಸುಖ ಹಂಚಿಕೊಳ್ಳಬಹುದು. ಈ ಮುಂಚೆ ಯಾಂತ್ರಿಕ ಜೀವನ ಶೈಲಿಯಿಂದ ಅದೇಷ್ಟೋ ಕೆಲಸ ಗಳನ್ನು ಬಾಕಿ ಉಳಿಸಿರಬಹುದು. ಅವುಗಳನ್ನು ಮಾಡಲು ಇದು ಸಕಾಲ. ಮನೆಯಲ್ಲಿ ಪುಸ್ತಕಗಳನ್ನು ಸರಿಯಾಗಿ ಜೋಡಿಸುವುದು, ಕಪಾಟನ್ನು ಸ್ವಚ್ಛಗೊಳಿಸುವುದೂ ಸೇರಿದಂತೆ ಮನೆಯಲ್ಲೇ ಸಾಕಷ್ಟು ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿಸಿದರು.

ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳ್ಳಲು ಯೋಗಾ, ಪ್ರಾಣಾಯಾಮ, ಧ್ಯಾನ ಮಾಡಬೇಕು. ಜೊತೆಗೆ ಉತ್ತಮ ಆಹಾರ ಸೇವನೆ ಮಾಡಿ, ಹೆಲ್ತ್ ಚಾರ್ಟ್ ತಯಾರಿಸಿಕೊಂಡು ಅದರಂತೆ ಆಹಾರ ಸೇವಿಸುವ ಮೂಲಕ ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಮುಂದಾಗ ಬಹುದು ಎಂದು ಹೇಳಿದರು.

Translate »