ವೀರಾಜಪೇಟೆ,ಮಾ,3-ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿ ವೃದ್ಧಿ ಕಾಮಗಾರಿಗಳಿಗಾಗಿ ಸರಕಾರದಿಂದ ರೂ.3.5 ಕೋಟಿ ಅನುದಾನ ಬಂದಿದ್ದು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರು ಸಹಕಾರ ನೀಡು ವಂತಾಗಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2019-20ನೇ ಸಾಲಿನಲ್ಲಿ ಮಳೆಯಿಂದ ಹಾನಿಗೊಳಗಾದ ವಿಜಯ ನಗರದ ಮುಖ್ಯ ರೆಸ್ತೆಯ ಮಟನ್ ಮಾರ್ಕೆಟ್ ಬಳಿ ರೂ,25 ಲಕ್ಷ ಅನುದಾನ ದಲ್ಲಿ ಕಾಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಪಟ್ಟಣದ ಸುಭಾಶ್ ನಗರದಿಂದ ನೆಹರುನಗರಕ್ಕೆ ಸಂಪರ್ಕ ರಸ್ತೆ ರೂ,35 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಮೋರಿ ನಿರ್ಮಾಣ ಕಾಮಗಾರಿ ಹಾಗೂ ಮೊಗರಗಲ್ಲಿಯಲ್ಲಿ ಮಳೆಯಿಂದ ಹಾನಿಗೊಳಗಾದ ಭಾರಿ ಎತ್ತರದ ತಡೆಗೋಡೆ ನಿರ್ಮಾಣ ರೂ,46 ಲಕ್ಷ ಅನುದಾನ ಸೇರಿ ಒಟ್ಟು 106 ಲಕ್ಷದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ದರು. ನಂತರ ಮಾತನಾಡಿದ ಅವರು, ಭಾರಿ ಮಳೆಯಿಂದ ಹಾನಿಗೊಳಗಾಗಿರುವ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿ ಗಾಗಿ ಸರಕಾರದಿಂದ ಬಂದಿರುವ ಅನು ದಾನದಲ್ಲಿ ಪಟ್ಟಣದ ಎಲ್ಲಾ ರಸ್ತೆಗಳು ಮತ್ತು ಚರಂಡಿಗಳು ಹಾಗೂ ಸಾರ್ವಜ ನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಗಳು, ಸ್ವಚ್ಚತೆ ಮತ್ತು ಇತರ ಕಾಮಗಾರಿ ಗಳನ್ನು ಮಾಡಲಾಗುವುದು. ರಸ್ತೆ ಕಾಮಗಾರಿಗಳು ನಡೆಯುವ ಸಂದರ್ಭ ಸ್ಥಳಿಯರು ಸಹಕಾರ ನೀಡಬೇಕು. ಗುತ್ತಿಗೆ ದಾರರು ಸಮಯಕ್ಕೆ ಸರಿಯಾಗಿ ಕಾಮ ಗಾರಿಗಳನ್ನು ಮುಗಿಸುವಂತೆ ಹೇಳಿದರು.
ವಿಜಯನಗರ ಮತ್ತು ಸುಭಾಷ್‍ನಗರ ರಸ್ತೆ ಅಭಿವೃದ್ಧಿ ಕಾಮಗಾರಿ, ಮೊಗರಗ ಲ್ಲಿಯ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯರಾದ ಎಂ.ಕೆ.ದೇಚಮ್ಮ, ಎಸ್. ಹೆಚ್.ಮತಿನ್, ಮಹ್ಮದ್ ರಾಫಿ, ಹರ್ಷ ವರ್ಧನ್, ಮಹದೇವ, ಆಶಾಸುಬ್ಬಯ್ಯ, ಜೂನ, ಅನಿತಾ ಕುಮಾರ್, ಜಲೀಲ್, ರಜನಿಕಾಂತ್, ಪೂರ್ಣಿಮ, ಪಂಚಾ ಯಿತಿಯ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಅಭಿಯಂತರ ಎನ್.ಹೇಮ್ ಕುಮಾರ್, ಬಿ.ಜೆ.ಪಿ.ಮುಖಂಡರಾದ ಪಟ್ರಪಂಡ ರಘುನಾಣಯ್ಯ, ಮಲ್ಲಂಡ ಮದುದೇವಯ್ಯ, ಜೋಕಿಂ ರಾಡ್ರಿಗಸ್, ಕಾಂಗ್ರೆಸ್‍ನ ಜಿ.ಜಿ.ಮೋಹನ್, ಮಹ ದೇವ, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ, ಕರ್ನಾಟಕ ರಕ್ಷಣ ವೇದಿಕೆಯ [ಶಿವರಾಮೆ ಗೌಡಬಣ] ಸದಸ್ಯರುಗಳು ಹಾಗೂ ಸ್ಥಳಿಯ ನಿವಾಸಿಗಳು ಭಾಗವಹಿಸಿದ್ದರು.