ಮಡಿಕೇರಿ,ಮಾ.3-ಆನ್‍ಲೈನ್ ಮೂಲಕ ಕುಶಾಲನಗರದ ವ್ಯಕ್ತಿಯೊಬ್ಬರಿಗೆ 10.50 ಲಕ್ಷ ರೂ.ಗಳನ್ನು ವಂಚಿಸಿದ್ದ 3 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.
ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ 10.50ಲಕ್ಷ ರೂ. ವಂಚನೆ ಪ್ರಕರಣ ದಾಖಲಾದ ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಅವರು ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ಒಪ್ಪಿಸಿ ತನಿಖೆ ಮಾಡುವಂತೆ ಸೂಚಿಸಿದ್ದರು.
ಅದರಂತೆ ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿದ ಕೊಡಗು ಡಿಸಿಐಬಿ ತಂಡ, ವಂಚನೆಯ ಜಾಲ ರಾಜ್ಯವ್ಯಾಪಿ ಹರಡಿಕೊಂಡಿರುವುದನ್ನು ಕಂಡು ಬೆಚ್ಚಿ ಬಿದ್ದಿದೆ. ಮಾತ್ರವಲ್ಲದೇ, ರಾಜ್ಯ ವ್ಯಾಪಿ ಅಮಾ ಯಕರಿಂದ ಹಣ ಹೂಡಿಕೆ ಮಾಡಿಸಿ 15ರಿಂದ 20 ಕೋಟಿ ರೂ.ಗೂ ಹೆಚ್ಚು ಹಣ ವಂಚಿ ಸಿದ್ದ 7 ಮಂದಿ ಆರೋಪಿಗಳ ಪೈಕಿ 3 ಮಂದಿಯನ್ನು ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕುಶಾಲನಗರದ ನಿವಾಸಿಗಳಾದ ತ್ಯಾಗ ರಾಜ ರಸ್ತೆಯ ರಿಯಲ್ ಎಸ್ಟೇಟ್ ಉದ್ಯಮಿ ಎ.ಜಾನ್(45), ಶಿವರಾಮ ಕಾರಂತ ಬಡಾವಣೆಯ ನಿವಾಸಿ, ಬಿ.ಎಸ್.ಎಂ. ಮೋಟಾರ್ಸ್‍ನ ಸೇಲ್ಸ್ ಎಕ್ಸಿಕ್ಯೂಟಿವ್ ಶಶಿಕಾಂತ್ ಅಲಿಯಾಸ್ ಶಮ್ಮಿ(37), ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊ ರೇಷನ್‍ನ ವ್ಯವಸ್ಥಾಪಕ, ಬಸವೇಶ್ವರ ಬಡಾ ವಣೆಯ ನಿವಾಸಿ ಆಂಟೋನಿ ಡಿ.ಕುನ್ಹಾ ಅಲಿಯಾಸ್ ಡ್ಯಾನಿ ಬಂಧಿತ ಆರೋಪಿಗಳು.
ಬಂಧಿತರ ವಿರುದ್ಧ “ಪ್ರೈಸ್ಡ್ ಮನಿ ಸಕ್ರ್ಯುಲೇಷನ್ ಸ್ಕೀಂ ಬ್ಯಾನ್ಡ್ ಕಾಯಿದೆ” ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗ ಳಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಗಳು, ಲ್ಯಾಪ್‍ಟಾಪ್‍ಗಳನ್ನು ವಶಕ್ಕೆ ಪಡೆದು ಕೊಂಡು ಬೆಂಗಳೂರು ಸೈಬರ್ ಕ್ರೈಂ ವಿಭಾಗದ ನೆರವಿನಿಂದ ಕೂಲಂಕುಶ ತನಿಖೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ತಿಳಿಸಿದ್ದಾರೆ.
ಕೊಡಗು ಮೂಲದ ಇತರ 4 ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಕ್ರಮ ಕೈಗೊಳ್ಳಲಾ ಗಿದೆ. ಆನ್‍ಲೈನ್ ಮೂಲಕ ಈ ವಂಚನೆ ಪ್ರಕರಣ ನಡೆದಿರುವ ಹಿನ್ನಲೆಯಲ್ಲಿ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವೆಬ್‍ಸೈಟ್ ರಚನೆ: 2019ರ ಸೆಪ್ಟೆಂ ಬರ್ ತಿಂಗಳಲ್ಲಿ ಈ 7 ಮಂದಿ ಆರೋಪಿ ಗಳು ಬೆಂಗಳೂರು ಮೂಲದ ವೆಬ್‍ಸೈಟ್ ಡೆವಲಪರ್ ಕಂಪೆನಿಯೊಂದನ್ನು ಸಂಪ ರ್ಕಿಸಿ, “ಕ್ಯಾಪಿಟಲ್ ರಿಲೇಷನ್ಸ್ ಡಾಟ್ ಇನ್” ಎಂಬ ಆನ್‍ಲೈನ್ ವೆಬ್‍ಸೈಟ್ ಅನ್ನು ಅಭಿವೃದ್ಧಿಪಡಿಸಿಕೊಂಡಿದ್ದರು. ಈ ಮೊಬೈಲ್ ಆ್ಯಪ್ ಅನ್ನು ಕಂಪೆನಿಯಾಗಿ ಪರಿವರ್ತಿಸಿಕೊಂಡು ಇದಕ್ಕೆ ಆರೋಪಿ ಶಶಿಕಾಂತ್ ಎಂಬಾತ ಎಡ್ಮಿನ್ ಆಗಿದ್ದು, ಆತನ ಮೂಲಕವೇ ಹಣಕಾಸಿನ ವ್ಯವ ಹಾರಗಳು ನಡೆಯುತ್ತಿತ್ತು. ಬಳಿಕ ಅದನ್ನು ತಮ್ಮ ಆಪ್ತ ಸ್ನೇಹಿತರ ಮೂಲಕ ಸಾರ್ವಜ ನಿಕರಿಗೆ ಪ್ರಚಾರ ಪಡಿಸಿದ್ದರು. ಈ ಆ್ಯಪ್ ಬಳಸಿಕೊಂಡು ವೆಬ್‍ಸೈಟ್ ಮೂಲಕ ಹಣವನ್ನು ಹೂಡಿಕೆ ಮಾಡಿದರೆ ಅತ್ಯಂತ ಕಡಿಮೆ ಸಮಯದಲ್ಲೇ ಹೂಡಿದ ಹಣ ದ್ವಿಗುಣವಾಗುತ್ತದೆ ಎಂದು ಆಮಿಷ ಒಡ್ಡಿ ದ್ದರು. ಹೀಗಾಗಿಯೇ 3ರಿಂದ 4 ಸಾವಿರ ಮಂದಿ ಈ ಆ್ಯಪ್ ಮೂಲಕ ಲಾಗಿನ್ ಆಗಿ ಹಣವನ್ನು ಹೂಡಿಕೆ ಮಾಡಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಮಾಹಿತಿ ನೀಡಿದರು.
ಹಣ ಹೂಡಿಕೆ: ಈ ವಂಚಕರು ಅಭಿ ವೃದ್ದಿ ಪಡಿಸಿಕೊಂಡಿದ್ದ ಆನ್‍ಲೈನ್ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಲು ಇಚ್ಚಿಸುವ ಸಾರ್ವಜನಿಕರು ಪ್ರಥಮವಾಗಿ “ಎಡ್ಮಿನ್” ಶಶಿಕಾಂತ್ ಅವರನ್ನು ಸಂಪರ್ಕಿಸಬೇಕಿತ್ತು. ಬಳಿಕ ಶಶಿಕಾಂತ್ ಎಂಬಾತನಿಂದ ವೆಬ್ ಸೈಟ್‍ನ ಯೂಸರ್ ಐಡಿ, ಪಾಸ್‍ವರ್ಡ್ ನೊಂದಿಗೆ 3 ಈ-ಪಿನ್ ಖರೀದಿಸ ಬೇಕಿತ್ತು. ಪ್ರತಿ ಈ-ಪಿನ್‍ಗೆ ತಲಾ 1 ಸಾವಿರ ದಂತೆ 3 ಪಿನ್‍ಗಳಿಗೆ 3 ಸಾವಿರ ರೂ, ಗಳನ್ನು ಪಾವತಿಸಬೇಕಿತ್ತು. ಈ ಹಣ ನೇರ ವಾಗಿ ಆರೋಪಿಗಳ ಖಾತೆಗಳಿಗೆ ಜಮೆ ಯಾಗುವಂತೆ ಆ್ಯಪ್ ರಚನೆ ಮಾಡ ಲಾಗಿತ್ತು. ಕ್ಯಾಪಿಟಲ್ ರಿಲೇಷನ್ಸ್ ಡಾಟ್ ಇನ್‍ನಲ್ಲಿ ಹಣ ತೊಡಗಿಸಲು ಬಯಸಿ ದವರು ವೆಬ್‍ಸೈಟ್‍ಗೆ ಯೂಸರ್ ಐಡಿ, ಪಾಸ್‍ವರ್ಡ್ ಬಳಸಿ ಲಾಗಿನ್ ಆಗಿ ಈ-ಪಿನ್ ಬಳಸಿ 1 ಈ-ಪಿನ್‍ಗೆ 3 ಸಾವಿರ ದಂತೆ ಹಣ ಹೂಡಿಕೆ ಮಾಡುತ್ತಿದ್ದರು. ಪ್ರತಿ ದಿನ ಒಂದು ಯೂಸರ್ ಐಡಿ ಯಿಂದ 3 ಈ-ಪಿನ್‍ಗಳನ್ನು ಮಾತ್ರವೇ ಬಳಸುವ ಅವಕಾಶವನ್ನು ವೆಬ್‍ಸೈಟ್‍ನಲ್ಲಿ ಒದಗಿಸಲಾಗಿತ್ತು.
ಹಣವನ್ನು ಹೂಡಿಕೆ ಮಾಡಲು ಲಾಗಿನ್ ಆದ ಕೂಡಲೇ ತಾವು ಹೂಡಿಕೆ ಮಾಡುತ್ತಿರುವ 3 ಸಾವಿರ ರೂಪಾಯಿ ಹಣ ಯಾರ ಖಾತೆಗೆ ಹೋಗಬೇಕು ಎಂಬುದನ್ನು ಮಾನಿಟರ್‍ನಲ್ಲಿ ತೋರಿಸ ಲಾಗುತ್ತಿತ್ತು. ಈ ಮೊಬೈಲ್ ಆ್ಯಪ್ ರಚ ನೆಯ ಪ್ರಕಾರ ಹೂಡಿಕೆದಾರರು ಹಣ ವನ್ನು ಪಡೆಯುವ ಸದಸ್ಯರ ಮೊಬೈಲ್‍ಗೆ ಕರೆ ಮಾಡಿ ತಾವು ಗೂಗಲ್ ಪೇ, ಫೋನ್ ಪೇ, ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣವನ್ನು ಹಾಕುತ್ತಿರುವುದಾಗಿ ತಿಳಿಸಿ ಹಣ ಸಂದಾಯ ಮಾಡುತ್ತಿರುವ ರಶೀದಿಯನ್ನು ಅಪ್‍ಲೋಡ್ ಮಾಡುತ್ತಿ ದ್ದರು. ಬಳಿಕವೇ ಹಣ ಹೂಡಿಕೆ ಮಾಡಿದ ವ್ಯಕ್ತಿಯ ಹಿರಿತನ ಪ್ರಾರಂಭವಾಗುತ್ತಿತ್ತು. ಅಷ್ಟು ಮಾತ್ರವಲ್ಲದೇ ಆರೋಪಿಗಳು ಪ್ರಾರಂಭದಲ್ಲಿ ತಮ್ಮ ವಂಚನೆಯ ದಂಧೆ ಯನ್ನು ವ್ಯಾಪಕವಾಗಿ ಪಸರಿಸಲು ತಾವೇ ಬೇರೆ ಬೇರೆ ಹೆಸರುಗಳನ್ನು ಬಳಸಿ ಹಣವನ್ನು ಹೂಡಿಕೆ ಕೂಡ ಮಾಡಿದ್ದರು ಎಂದು ಎಸ್‍ಪಿ ಡಾ.ಸುಮನ ಮಾಹಿತಿ ನೀಡಿದರು.
15ರಿಂದ 20 ಕೋಟಿ ರೂ. ವಂಚನೆ ; ತನಿಖೆಯಲ್ಲಿ ಪತ್ತೆ
ಪ್ರಾರಂಭದಲ್ಲಿ ಹಣವನ್ನು ಹೂಡಿಕೆ ಮಾಡಿ ಹಿರಿತನ ಪಡೆದ ವ್ಯಕ್ತಿಯ ಖಾತೆಗೆ 7 ದಿನಗಳ ಒಳಗೆ ಪ್ರತಿ ಈ-ಪಿನ್‍ಗೆ 6 ಸಾವಿರ ರೂ.ಗಳಂತೆ ಹಣವೂ ಸಂದಾಯವಾಗಿದ್ದು, ಹಲವು ಮಂದಿ ಲಕ್ಷಾಂತರ ರೂ. ಪಡೆದುಕೊಂಡಿದ್ದಾರೆ ಎಂದು ಡಾ. ಸುಮನ ಹೇಳಿದರು. 2019ರ ಸೆಪ್ಟೆಂಬರ್‍ನಲ್ಲಿ ಪ್ರಾರಂಭವಾದ ಈ ವಂಚನೆಯ ದಂಧೆ ಡಿಸೆಂಬರ್ ಅಂತ್ಯಕ್ಕೆ ಸಂಪೂರ್ಣ ಮುಚ್ಚಿ ಹೋಗಿದ್ದು, ಕೊನೆಯ ಅವಧಿಯಲ್ಲಿ ಹಣ ಹೂಡಿಕೆ ಮಾಡಿದ ವ್ಯಕ್ತಿಗಳು ತಾವು ಹೂಡಿಕೆ ಮಾಡಿದ ಹಣ ಕೈ ಸೇರದ್ದರಿಂದ ನಷ್ಟಕ್ಕೆ ಒಳಗಾಗಿ ಪರಿತಪಿಸುವಂತಾಗಿದೆ. ಒಂದೂವರೆ ತಿಂಗಳ ಅವಧಿಯಲ್ಲಿ ರಾಜ್ಯದಾದ್ಯಂತ ವಿಸ್ತರಿ ಸಲ್ಪಟ್ಟ ಕ್ಯಾಪಿಟಲ್ ರಿಲೇಷನ್ಸ್ ಡಾಟ್ ಇನ್ ಮೊಬೈಲ್ ಆ್ಯಪ್ ಮೂಲಕ 15ರಿಂದ 20 ಕೋಟಿ ರೂ. ವ್ಯವಹಾರ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಹೇಳಿ ದರು. ಈ ವೆಬ್‍ಸೈಟ್ ಮತ್ತು ಮೊಬೈಲ್ ಆ್ಯಪ್‍ಗಳು ಅನಧಿಕೃತ ವಾಗಿದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ವಿನಿಮಯ, ಹೂಡಿಕೆ ಮತ್ತಿತ್ತರ ನಿಯಮಗಳಿಗೆ ವಿರುದ್ದವಾಗಿದೆ. ಇಂತಹ ಅನಧಿಕೃತ ವೆಬ್‍ಸೈಟ್, ಮೊಬೈಲ್ ಆ್ಯಪ್‍ಗಳಲ್ಲಿ ವ್ಯವಹಾರ ಹಾಗೂ ಹೂಡಿಕೆ ಮಾಡುವವರು ಕೂಡ ಆರೋಪಿಗಳಾಗಲಿದ್ದಾರೆ ಎಂದು ಡಾ.ಸುಮನ ಎಚ್ಚರಿಸಿದರು.
ಇಂತಹ ವೆಬ್‍ಸೈಟ್ ಮತ್ತು ಮೊಬೈಲ್ ಆ್ಯಪ್‍ಗಳಲ್ಲಿ ಹಣದ ಹೂಡಿಕೆ ಮತ್ತು ವಿನಿಮಯ ಬ್ಯಾಂಕ್ ಖಾತೆಗಳ ಮೂಲಕ ನಡೆದರೂ ಕೂಡ ಅವುಗಳೆಲ್ಲವು ಕಾನೂನು ಬಾಹಿರವಾಗಿರುತ್ತವೆ. ಇಂತಹ ವ್ಯವಹಾರಗಳನ್ನು ಮಾಡುವ ಕೆಲವು ಮೊಬೈಲ್ ಆ್ಯಪ್‍ಗಳು ಪ್ರಸ್ತುತ ಕಾರ್ಯಾಚರಿಸುತ್ತಿದ್ದು ಸಾರ್ವಜನಿಕರು ಅನಧಿಕೃತ ಆ್ಯಪ್ ಮತ್ತು ವೆಬ್‍ಸೈಟ್‍ಗಳ ಬಗ್ಗೆ ಜಾಗೃತರಾಗಿರುವಂತೆ ಮನವಿ ಮಾಡಿದರು.