ಐಎಸ್‍ಟಿಇ ವಿದ್ಯಾರ್ಥಿಗಳ ಪಾಲಿಟೆಕ್ನಿಕ್ ಸಮಾವೇಶ
ಮೈಸೂರು

ಐಎಸ್‍ಟಿಇ ವಿದ್ಯಾರ್ಥಿಗಳ ಪಾಲಿಟೆಕ್ನಿಕ್ ಸಮಾವೇಶ

March 4, 2020

ಮೈಸೂರು, ಮಾ. 3- ಎರಡನೇ ರಾಜ್ಯ ಮಟ್ಟದ ಐಎಸ್‍ಟಿಇ ವಿದ್ಯಾರ್ಥಿಗಳ ಪಾಲಿಟೆಕ್ನಿಕ್ ಸಮಾವೇಶವನ್ನು ಜೆಎಸ್‍ಎಸ್ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಜಂಟಿ ನಿರ್ದೇಶಕ ರವಿಚಂದ್ರನ್ ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.

ತಂತ್ರಜ್ಞಾನ ಸಾರ್ಥಕತೆ ಸಾಮಾನ್ಯ ಜನರನ್ನು ತಲುಪಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಇಂತಹ ಸಮಾವೇಶಗಳು ವಿದ್ಯಾ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಕೊಟ್ಟಂತೆ ಆಗುತ್ತದೆ. ನರೇಂದ್ರ ನಾರಾಯಣ ಪ್ರಧಾನ ವಿಷಯ ಭಾಷಣಕಾರರಾಗಿ ಆಗಮಿಸಿದ್ದು, ದೈನಂದಿನ ಜೀವನದಲ್ಲಿ ತಂತ್ರಜ್ಞಾನದ ಬಳಕೆಯಿಂದ ನಮ್ಮ ಜೀವನ ಗುಣಮಟ್ಟ ವನ್ನು ಉತ್ತಮಗೊಳಿಸಿಕೊಳ್ಳುವ ಅನೇಕ ನಿದರ್ಶನಗಳನ್ನು ಹೇಳುತ್ತಾ ಅದರ ಮಹತ್ವ ವನ್ನು ಸಭೆಗೆ ಮನದಟ್ಟು ಮಾಡಿದರು.

ಕರ್ನಾಟಕ ವಿಭಾಗದ ಕಾರ್ಯದರ್ಶಿ ನಿಜಾನಂದ ರೆಡ್ಡಿ, ವಿದ್ಯಾರ್ಥಿಗಳು ಐಎಸ್‍ಟಿಇ ಸದಸ್ಯತ್ವ ಪಡೆಯುವುದರಿಂದ ಆಗುವ ಅನುಕೂಲಗಳು ಮತ್ತು ಐಎಸ್‍ಟಿಇ ಧ್ಯೇಯೋದ್ದೇಶಗಳನ್ನು ತಿಳಿಸಿದರು.

ಜೆಎಸ್‍ಎಸ್ ಮಹಿಳಾ ಪಾಲಿಟೆಕ್ನಿಕ್ ಪ್ರಾಂಶುಪಾಲ ಎನ್. ಶೇಖರ್, ಸಭೆಯ ಅಧ್ಯಕ್ಷತೆ ವಹಿಸಿ ಇಂತಹ ಸಮಾವೇಶದಲ್ಲಿ ವಿದ್ಯಾರ್ಥಿಗಳಿಂದ ಬರುವಂತಹ ಉದ್ಯಮಿ ಗಳು ಕಾರ್ಯ ರೂಪಕ್ಕೆ ನವೀನ ಆಲೋಚನೆ ತರಬೇಕೆಂಬ ಆಶಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಜೆಎಸ್‍ಎಸ್ ಮಹಾವಿದ್ಯಾ ಪೀಠವು ವಿದ್ಯಾರ್ಥಿ ಸಮುದಾಯಕ್ಕೆ ಒಂದು ಬಲವಾದ ಅಡಿಪಾಯವನ್ನು ಒದಗಿಸುವಲ್ಲಿ ಶ್ರಮಿಸುತ್ತಿದೆ ಎಂದು ತಿಳಿಸಿ ದರು. ಡಾ. ಸಂಗಪ್ಪ ಎಸ್.ಬಿ, ದೇವರಾಜು ಎಸ್.ಬಿ, ಹರೀಶ್-ಉಪನಿರ್ದೇ ಶಕರು ಹಾಗೂ ಲಿಂಗರಾಜು-ಜೆಇ ವೈದ್ಯರು ಹಾಜರಿದ್ದರು.

Translate »