ಕೆ.ಆರ್.ಪೇಟೆ,ಮಾ.3-ಇತಿಹಾಸ ಪ್ರಸಿದ್ಧ ಸುಂದರವಾದ ಹೊಯ್ಸಳರ ಶಿಲ್ಪ ಕಲೆಯನ್ನು ಹೊಂದಿರುವ ತಾಲೂಕಿನ ಹೊಸಹೊಳಲು ಗ್ರಾಮದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ತಾಲೂಕು ಮುಜರಾಯಿ ಇಲಾಖೆ ಅಧಿ ಕಾರಿಯೂ ಆದ ತಹಶೀಲ್ದಾರ್ ಎಂ.ಶಿವ ಮೂರ್ತಿ ಅವರು ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥಕ್ಕ್ಕೆ ಹಣ್ಣು ಜವನವನ್ನು ಸಮ ರ್ಪಿಸಿ ಉಘೇ… ಗೋವಿಂದ… ಉಘೇ ಉಘೇ… ವೆಂಕಟರಮಣ ಉಘೇ.. ಶ್ರೀನಿವಾಸ ಉಘೇ.. ಉಘೇ.. ಎಂಬ ಜಯಘೋಷಗಳೊಂದಿಗೆ ರಥವನ್ನು ಗ್ರಾಮದ ರಾಜಬೀದಿಗಳಲ್ಲಿ ಎಳೆದು ತಮ್ಮ ಭಕ್ತಿ ಭಾವ ಪ್ರದರ್ಶನ ಮಾಡಿದರು.
ರಥೋತ್ಸವಕ್ಕೆ ಚಾಲನೆ ನೀಡಿ ಮಾತ ನಾಡಿದ ತಹಶೀಲ್ದಾರ್ ಶಿವಮೂರ್ತಿ ಅವರು ನಮ್ಮ ಸಂಸ್ಕøತಿ-ಪರಂಪರೆಯ ಪ್ರತಿಬಿಂಬವಾದ ಹಬ್ಬ ಹರಿದಿನಗಳು ಹಾಗೂ ರಥೋತ್ಸವಗಳ ಉಳಿಸಿ ಬೆಳೆಸುವ ಕೆಲಸವಾಗಬೇಕು. ಇದಕ್ಕಾಗಿ ನಮ್ಮ ಸಂಸ್ಕøತಿ ಪರಂಪರೆಗೆ ಕೊಂಡಿ ಯಾಗಿರುವ ಇಂತಹ ಅಪರೂಪದ ಜಾತ್ರೆ-ರಥೋತ್ಸವ ಕಾರ್ಯಕ್ರಮಗಳಲ್ಲಿ ಜನರು ಕಡ್ಡಾಯವಾಗಿ ಭಾಗವಹಿಸುವ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಿ ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡುವ ಕೆಲಸ ಮಾಡಬೇಕು ಎಂದರು.
ರಥೋತ್ಸವದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಎನ್.ಸುಧಾಕರ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವೈ.ಎನ್.ಚಂದ್ರ ಮೌಳಿ, ಸಹಾಯಕ ನಿರ್ದೇಶಕಿ ಮೇನಕಾ ದೇವಿ, ಪುರಸಭೆಯ ಮುಖ್ಯಾಧಿಕಾರಿ ಸತೀಶ್‍ಕುಮಾರ್, ಹೊಸಹೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಕೆ.ಅಶೋಕ್, ಸಮಾಜ ಸೇವಕರಾದ ಜಿ.ಸೋಮ ಶೇಖರ್, ಡಾ.ಶ್ರೀನಿವಾಸಶೆಟ್ಟಿ, ಪುರಸಭಾ ಸದಸ್ಯರಾದ ಹೆಚ್.ಆರ್.ಲೋಕೇಶ್, ಹೆಚ್.ಡಿ.ಅಶೋಕ್, ಕೆ.ಬಿ.ಮಹೇಶ್ ಕುಮಾರ್, ವಕೀಲರಾದ ಹೆಚ್.ವಿ.ಆಶಾ, ಆರ್.ಕೆ. ರಾಜೇಗೌಡ ಸೇರಿದಂತೆ ಸಾವಿರಾರು ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಪಟ್ಟಣ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಬ್ಯಾಟರಾಯಗೌಡ ಮತ್ತು ಗ್ರಾಮಾಂತರ ಠಾಣೆಯ ಪಿಎಸ್‍ಐ ಲಕ್ಷ್ಮಣ್ ಅವರ ನೇತೃತ್ವದಲ್ಲಿ ರಥೋತ್ಸವಕ್ಕೆ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು. ಕುರುಹಿನಶೆಟ್ಟಿ ಯುವಕರ ಸಂಘದ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಮಜ್ಜಿಗೆ ಪಾನಕ ಕೋಸಂಬರಿ ಹಾಗೂ ಪುಳಿಯೊಗರೆ ಪ್ರಸಾದವನ್ನು ವಿತರಿಸಿ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.