ರಂಗಾಯಣದಲ್ಲಿ ಭಾರತೀಯ ರಂಗಸಂಗೀತ-ನಾಟಕೋತ್ಸವಕ್ಕೆ ಚಾಲನೆ
ಮೈಸೂರು

ರಂಗಾಯಣದಲ್ಲಿ ಭಾರತೀಯ ರಂಗಸಂಗೀತ-ನಾಟಕೋತ್ಸವಕ್ಕೆ ಚಾಲನೆ

September 20, 2021

೮ ದಿನ ನಡೆಯುವ ನಾಟಕೋತ್ಸವ

ಬಿ.ವಿ.ಕಾರಂತರ ಪುತ್ಥಳಿ ಅನಾವರಣ

ಮೈಸೂರು, ಸೆ.೧೯(ಎಂಕೆ)- ರಂಗ ಭೀಷ್ಮ ಬಿ.ವಿ.ಕಾರಂತರ ಜನ್ಮದಿನ ಅಂಗ ವಾಗಿ ಮೈಸೂರು ರಂಗಾಯಣದಲ್ಲಿ ಬಾಬು ಕೋಡಿ ಬಿ.ವಿ.ಕಾರಂತ ರಂಗ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಆಯೋಜಿಸಿರುವ ೮ ದಿನಗಳ ‘ಭಾರ ತೀಯ ರಂಗಸAಗೀತ-ನಾಟಕೋತ್ಸವ’ಕ್ಕೆ ಭಾನುವಾರ ಚಾಲನೆ ದೊರೆಯಿತು.
‘ಸೋಲಿಸಬೇಡ ಗೆಲಿಸಯ್ಯ’ ಹಾಡಿ ನೊಂದಿಗೆ ಆರಂಭಗೊAಡ ‘ಭಾರತೀಯ ರಂಗಸAಗೀತ-ನಾಟಕೋತ್ಸವ’ವನ್ನು ಜಾನ ಪದ ತಜ್ಞ ಕೃಷ್ಣಮೂರ್ತಿ ಹನೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ರಂಗಾಯಣದ ಆವರಣ ದಲ್ಲಿ ಪ್ರತಿಷ್ಠಾಪಿಸಿರುವ ‘ಬಿ.ವಿ.ಕಾರಂತರ ಪುತ್ಥಳಿ’ಯನ್ನು ಬೆಂಗಳೂರು ರಾಷ್ಟಿçÃಯ ನಾಟಕ ಶಾಲೆ ನಿರ್ದೇಶಕಿ ವೀಣಾಶರ್ಮ ಭೂಸನೂರುಮಠ ಅನಾವರಣಗೊಳಿಸಿದರು.

ಭಾರತೀಯ ರಂಗಸಂಗೀತ- ನಾಟ ಕೋತ್ಸವ ಉದ್ಘಾಟಿಸಿದ ಜಾನಪದ ತಜ್ಞ ಕೃಷಮೂರ್ತಿ ಹನೂರು ಮಾತನಾಡಿ, ನಾಟಕಗಳು ರಾಜ ಮನೆತನದವರಿಗೆ ಮನರಂಜನೆ, ನಗರವಾಸಿಗಳಿಗೆ ವೈಚಾರಿ ಕತೆಯಾದರೆ, ಗ್ರಾಮೀಣ ಜನರಿಗೆ ನೈತಿಕ ಪಠ್ಯವಾಗಿವೆ. ಕಾವ್ಯಕ್ಕಿಂತಲೂ ನಮ್ಮ ದೇಶದಲ್ಲಿ ನಾಟಕಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ ಎಂದು ಹೇಳಿದರು.
ಸಿನಿಮಾ ಮತ್ತು ನಾಟಕಗಳಿಗೆ ಬಹಳ ವ್ಯತ್ಯಾಸವಿದೆ. ಆಗಿಹೋದ ಕಥೆ ಸಿನಿಮಾ ವಾದರೆ, ಆಗುತ್ತಿರುವ ಕತೆ ನಾಟಕ ವಾಗಿದೆ. ಸಿನಿಮಾ ನಿರ್ದೇಶಕ ತನ್ನ ಸಿನಿಮಾ ಪ್ರದರ್ಶನಗೊಳ್ಳುವ ವೇಳೆ ಮನೆಯಲ್ಲಿ ವಿಶ್ರಾಂತಿ ಪಡೆಯಬಹುದು. ಆದರೆ ನಾಟಕ ನಿರ್ದೇಶಕರದ್ದು ಅಗ್ನಿ ಮಧ್ಯೆ ಕುಳಿತ ಪರಿ ಸ್ಥಿತಿಯಾಗಿರುತ್ತದೆ. ಪ್ರತಿಯೊಂದು ಪ್ರದ ರ್ಶನದಲ್ಲಿಯೂ ಜ್ವರ ಬಂದAತೆ ಆಗಿರುತ್ತದೆ. ಸಣ್ಣ ತಾಳ, ಅಭಿನಯದಲ್ಲಿ ಒಂದು ಹೆಜ್ಜೆ ತಪ್ಪಾದರೂ ನಾಟಕ ಪ್ರದರ್ಶನ ಪರಿಪೂರ್ಣ ವಾಗುವುದಿಲ್ಲ. ಆದ್ದರಿಂದಲೇ ನಾಟಕ ಪ್ರದ ರ್ಶನ ತುಂಬಾ ಕಷ್ಟ. ಸಿನಿಮಾದಲ್ಲಿ ಸ್ವಲ್ಪ ಕೆಟ್ಟ ವಿಷಯಗಳನ್ನು ತೋರಿಸಬಹುದು. ಆದರೆ ನಾಟಕದಲ್ಲಿ ಸಾಧ್ಯವಿಲ್ಲ ಎಂದು ತಿಳಿಸಿದರು.

ಮೈಸೂರಿನ ರಂಗಾಯಣದAತ ಸುಂದರ ವಾತಾವರಣವನ್ನು ನಾನು ಬೇರೆ ಎಲ್ಲಿಯೂ ಕಾಣಲಿಲ್ಲ. ಹಾರ್ವರ್ಡ್ ವಿವಿ ರಂಗವೇದಿಕೆಯನ್ನೂ ನೋಡಿz್ದೆÃನೆ. ಆದರೆ ಇಲ್ಲಿ ನನಗೆ ಅದಕ್ಕಿಂತ ಸಂಭ್ರಮ ಕಾಣ ಸಿತು. ನಾಟಕಾಭ್ಯಾಸದಲ್ಲಿ ತೊಡಗಿ ರುವವರನ್ನು ನೋಡಿದರೆ ಮುಂಬೈನ ಪೃಥ್ವಿ ಥಿಯೇಟರ್ ನೆನಪಾಯಿತು. ನಾನು ಕಾನ್ಪುರ ಐಐಟಿಗೆ ಹೋಗಿದ್ದಾಗ, ತಾವು ಕಾರಂತರ ಊರಿನವರಾ? ಎಂದು ಕೇಳಿದ್ದರು. ಅಂದರೆ ಕನ್ನಡಿಗರ ಶಕ್ತಿ ದೊಡ್ಡದು. ಕಾರಂತರು ಜೀವನ ಪರ್ಯಂತ ನಾಟಕ ರಸಾನಂದಕ್ಕಾಗಿಯೇ ಬದುಕಿದ ವ್ಯಕ್ತಿ ಎಂಬುದನ್ನು ನಾನು ಬಲ್ಲೆ. ನಾಟಕ ಮಾಡುವವರು ಮನೆ ಮತ್ತು ಸಂಸಾರ ವನ್ನು ಬಿಡಬೇಕಾಗುತ್ತದೆ. ಆದ್ದರಿಂದಲೇ ಅವರನ್ನು ರಂಗಜAಗಮ ಎನ್ನುತ್ತಾರೆ ಎಂದರು.
ಉತ್ತರ ಭಾರತದ ದೇವರು: ಕಾರಂತರ ಪುತ್ಥಳಿ ಅನಾವರಣಗೊಳಿಸಿದ ರಾಷ್ಟಿçÃಯ ನಾಟಕ ಶಾಲೆಯ ನಿರ್ದೇಶಕಿ ವೀಣಾಶರ್ಮ ಭೂಸನೂರುಮಠ ಮಾತನಾಡಿ, ಕರ್ನಾಟಕದಲ್ಲಿ ಅಷ್ಟೇ ಅಲ್ಲ ಉತ್ತರ ಭಾರತದಲ್ಲಿ ಬಿ.ವಿ.ಕಾರಂತರನ್ನು ದೇವರು ಎಂದೇ ಪೂಜಿಸಲ್ಪಡುತ್ತಾರೆ. ಛಂಡೀಘಡ್, ಮಣ ಪುರ, ಭೂಪಾಲ್‌ನಲ್ಲಿ ಎಲ್ಲರ ಹೃದಯ ದಲ್ಲಿ ಅಳಿಸಲಾಗದಂತೆ ಉಳಿದಿದ್ದಾರೆ. ಅವರ ಮಾರ್ಗ ದರ್ಶನದಲ್ಲಿ ನಾವು ಹೋಗಬೇಕು ಎಂದು ಅವರು ಹೇಳಿದರು.

ಇದೇ ವೇಳೆ ಕಾರಂತರ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಆತ್ಮಕಥನವನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಮ ಅರ್ಕಸಾಲಿ ಬಿಡುಗಡೆ ಮಾಡಿ ದರೆ, ‘ಭಾರತೀಯ ರಂಗಸಂಗೀತ-ನಾಟಕೋತ್ಸವ’ ಸ್ಮರಣ ಸಂಚಿಕೆಯನ್ನು ಬಿ.ವಿ.ಕಾರಂತ ರಂಗ ಪ್ರತಿಷ್ಠಾನದ ವ್ಯವಸ್ಥಾಪಕ ಸದಸ್ಯ ಜಯರಾಂ ಪಾಟೀಲ ಬಿಡುಗಡೆ ಗೊಳಿಸಿದರು. ಬಳಿಕ ಬಿ.ವಿ.ಕಾರಂತರ ಪುತ್ಥಳಿ ವಿನ್ಯಾಸ ಮಾಡಿದ ಶಿಲ್ಪಕಲಾವಿದ ಎ.ಆರ್.ಮಂಜುನಾಥ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಜಂಟಿ ನಿರ್ದೇಶಕÀ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

ಕಾರಂತರ ನೆನಪು ಚಿರಸ್ಥಾಯಿ…
ಇಂದಿನ ವಿದ್ಯಾರ್ಥಿಗಳಿಗೆ ಕಾರಂತರು ಗೊತ್ತಾ? ಎಂದರೆ ಶಿವರಾಮ ಕಾರಂತರಾ? ಎನ್ನುತ್ತಾರೆ. ಆದ್ದರಿಂದಲೇ ಮೈಸೂರು ರಂಗಾಯಣದ ಆವರಣದಲ್ಲಿ ರಂಗಭೀಷ್ಮ ಬಿ.ವಿ.ಕಾರಂತರ ನೆನಪನ್ನು ಚಿರಸ್ಥಾಯಿಯನ್ನಾಗಿಸುವ ನಿಟ್ಟಿನಲ್ಲಿ ಅವರ ಪುತ್ಥಳಿ ಅನಾವರಣಗೊಳಿಸಲಾಗಿದೆ. ರಂಗಾಯಣಕ್ಕೆ ಬರುವ ಎಲ್ಲರಿಗೂ ಬಿ.ವಿ.ಕಾರಂತರು ಸ್ಫೂರ್ತಿಯಾಗಿದ್ದಾರೆ. ನಾನು ಕೊಡಗಿನ ಕಾವೇರಿ ತಾಯಿಯ ನಾಡಿನಿಂದ ಚಾಮುಂಡಿ ತಾಯಿಯ ನೆಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕೊಡಗಿನವನಾಗಿ ಕೊಡುತ್ತೇನೆಯೇ ಹೊರತು ಯಾವುದನ್ನೂ ತೆಗೆದುಕೊಂಡು ಹೋಗುವುದಿಲ್ಲ.
– ಅಡ್ಡಂಡ ಸಿ.ಕಾರ್ಯಪ್ಪ, ನಿರ್ದೇಶಕ, ರಂಗಾಯಣ ಮೈಸೂರು

ಬಿ.ವಿ.ಕಾರಂತರು ಮತ್ತೆ ಬರಬೇಕು…
ಮನರಂಜನೆ ಎಂಬುದು ಇಂದು ‘ಕೈ’ಗೆ ಬಂದಿದೆ. ಒಟ್ಟಾಗಿ ನೋಡುವ ಕಾಲ ಹೋಗಿ ಅವರವರ ಇಷ್ಟದಂತೆ ನೋಡುವ ಖಾಸಗಿ ಮನರಂಜನೆ ಆವರಿಸಿದೆ. ಸುಮಾರು ೧೦೪ ಅಗ್ನಿ(ನಾಟಕ ನಿರ್ಮಾಣ)ಪರೀಕ್ಷೆಗಳನ್ನು ಎದುರಿಸಿ ಪಾಸ್ ಆಗಿದ್ದ, ಎಲ್ಲರನ್ನೂ ತನ್ನೊಂದಿಗೆ ಕರೆದೊಯ್ಯುತ್ತಿದ್ದ ಬಿ.ವಿ.ಕಾರಂತರ ಪ್ರಸ್ತುತತೆ ಅಗತ್ಯವಾಗಿದೆ.
– ಕೃಷ್ಣಮೂರ್ತಿ ಹನೂರು, ಜಾನಪದ ತಜ್ಞ

ಮನಸೆಳೆದ ಸೂಫಿ ಗಾಯನ…
ಮೈಸೂರು ರಂಗಾಯಣದಲ್ಲಿ ಬಿ.ವಿ.ಕಾರಂತರ ಜನ್ಮದಿನದ ಅಂಗವಾಗಿ ಆರಂಭಗೊAಡ ‘ಭಾರತೀಯ ರಂಗಸAಗೀತ-ನಾಟಕೋತ್ಸವ’ದ ಮೊದಲ ದಿನ ರಾಜಸ್ಥಾನದ ಅಂತರರಾಷ್ಟಿçÃಯ ಖ್ಯಾತಿಯ ಮುಖ್ತಿಯಾರ್ ಅಲಿ ಮತ್ತು ತಂಡದ ‘ಸೂಫಿ ಗಾಯನ’ ಕಲಾಭಿಮಾನಿಗಳ ಮನಸೆಳೆಯಿತು. ಸೂಫಿ ಗಾಯಕ ಮುಖ್ತಿಯಾರ್ ಅಲಿ ಅವರ ಜಾನಪದದ ಸೊಗಡು ಹಾಗೂ ಶಾಸ್ತಿçÃಯ ಸಂಗೀತದ ಝಲಕ್‌ಗಳನ್ನು ಸಮ್ಮಿಳಿತಗೊಳಿಸಿ ಹಾಡಿದ ಹಾಡುಗಳು ಕೇಳುಗರನ್ನು ಮಂತ್ರಮುಗ್ಧರ ನ್ನಾಗಿಸಿತು. ಸಾರಂಗಿ ವಾದನದಲ್ಲಿ ಡಾ.ದೀಪಕ್ ಪರಮಶಿವನ್, ಸಹ ಹಾಡುಗಾರಿಕೆಯಲ್ಲಿ ವಕಾರ್ ಯೂನಿಸ್, ತಬಲ ವಾದನದಲ್ಲಿ ರಾಕೇಶ್ ಮತ್ತು ಅಲಿ ಷೇಕ್ ಸಹಕಾರ ನೀಡಿದರು.

Translate »