ಮೈಸೂರು ಡಾಗ್ ಬ್ರೀರ‍್ಸ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಪಶು ವೈದ್ಯರ ತಂಡದಿದ ಶ್ವಾನಗಳಿಗೆ ಉಚಿತ ಲಸಿಕೆ
ಮೈಸೂರು

ಮೈಸೂರು ಡಾಗ್ ಬ್ರೀರ‍್ಸ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಪಶು ವೈದ್ಯರ ತಂಡದಿದ ಶ್ವಾನಗಳಿಗೆ ಉಚಿತ ಲಸಿಕೆ

September 20, 2021

ಮೈಸೂರು, ಸೆ.೧೯(ಆರ್‌ಕೆಬಿ)- ಮೈಸೂರು ಡಾಗ್ ಬ್ರೀಡ್ಸ್ ವೆಲ್‌ಫೇರ್ ಅಸೋಸಿಯೇಷನ್ ಆಶ್ರಯದಲ್ಲಿ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಭಾನುವಾರ ಮೈಸೂರಿನ ಚಾಮುಂಡಿಪುರ ಮಾನಂದವಾಡಿ ರಸ್ತೆಯಲ್ಲಿರುವ ಪಶು ಆಸ್ಪತ್ರೆಯಲ್ಲಿ ಶ್ವಾನಗಳಿಗೆ ಉಚಿತ ಲಸಿಕಾ ಶಿಬಿರ ನಡೆಸಲಾಯಿತು. ಸುಮಾರು ೩೦೦ಕ್ಕೂ ಹೆಚ್ಚು ಶ್ವಾನಗಳಿಗೆ ಎರಡು ರೀತಿಯ ಲಸಿಕೆಗಳನ್ನು ನೀಡಲಾಯಿತು.

ಸಾಕು ಪ್ರಾಣ ಗಳ ಮಾಲೀಕರು ನಾನಾ ತಳಿಯ ತಮ್ಮ ಮುದ್ದಿನ ಶ್ವಾನಗಳೊಂದಿಗೆ ಶಿಬಿರಕ್ಕೆ ಬಂದು ರೋಗ ನಿರೋಧಕ ಲಸಿಕೆ ಹಾಕಿಸಿದರು. ಪಶು ವೈದ್ಯ ಅಧಿಕಾರಿ ಡಾ.ಸಿ.ಪಿ.ತಿಮ್ಮಯ್ಯ ಮತ್ತು ವೈದ್ಯರ ತಂಡ ಶ್ವಾನಗಳಿಗೆ ಮೆಗಾ ವ್ಯಾಕ್ ಮತ್ತು ರೇಬಿಸ್ ಲಸಿಕೆಗಳನ್ನು ನೀಡಿದರು. ಉಚಿತ ಲಸಿಕಾ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೈಸೂರಿನ ನಾನಾ ಕಡೆಗಳಿಂದ ಆಗಮಿಸಿದ ಶ್ವಾನ ಪ್ರಿಯರು ತಮ್ಮ ಮುದ್ದಿನ ಗೋಲ್ಡರ್ ರಿಟ್ರೀವರ್, ಲ್ಯಾಬ್ರಡಾರ್, ಸಿಟ್ಜು, ಜರ್ಮನ್ ಷಫರ್ಡ್, ಪಗ್, ಬೀಗ್ಲಿ ಇನ್ನಿತರ ಶ್ವಾನಗಳಿಗೆ ಲಸಿಕೆ ನೀಡಲಾಯಿತು. ಎರಡು ಲಸಿಕೆಗಳನ್ನು ನೀಡಿದ್ದು, ಮೊದಲ ಲಸಿಕೆ ಮೆಗಾವ್ಯಾಕ್, ಹಾಗೂ ರೇಬಿಸ್ ಸಾಕುನಾಯಿಗಳಿಗೆ ಉಂಟಾಗುವ ರೋಗಗಳನ್ನು ನಿಯಂತ್ರಿಸುವ ಜೊತೆಗೆ ಅದರಿಂದ ಮನುಷ್ಯರಿಗೆ ಬರಬಹುದಾದ ರೋಗಗಳನ್ನು ತಡೆಗಟ್ಟುತ್ತವೆ.

ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಡೆದ ಲಸಿಕಾ ಶಿಬಿರಕ್ಕೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ಮೈಸೂರು ಡಾಗ್ ಬ್ರೀರ‍್ಸ್ ವೆಲ್‌ಫೇರ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಬಿ.ಪಿ.ಮಂಜುನಾಥ್, ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ಮಣ ಕಂಠ, ಕಾರ್ಯದರ್ಶಿ ಗಣೇಶ್‌ರಾಜ್, ದಿಲೀಪ್, ವಿನಯ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

Translate »