ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್‍ಗೆ ಚಾಲನೆ
ಮಂಡ್ಯ

ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್‍ಗೆ ಚಾಲನೆ

August 22, 2021

ಪಾಂಡವಪುರ, ಆ.21-ಪಟ್ಟಣದ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆ ಆವರಣಲ್ಲಿ `ಹೊಂಬಾಳೆ ಫಿಲಂಸ್’ನಿಂದ ನಿರ್ಮಿಸಿರುವ ನೂತನ ಆಮ್ಲಜನಕ ಉತ್ಪಾದಕ ಘಟಕಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದಲ್ಲಿ ಸೋಂಕಿತರಿಗೆ ಸಮರ್ಪಕವಾಗಿ ಆಮ್ಲಜನಕ ಪೂರೈಸಲು ಆಮ್ಲಜನಕ ಉತ್ಪಾದಕ ಘಟಕ ಸ್ಥಾಪಿಸಿ, ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಅವರು 90 ಲಕ್ಷ ರೂ.ನಲ್ಲಿ ಉಚಿತವಾಗಿ ಆಮ್ಲಜನಕ ಉತ್ಪಾದಕ ಘಟಕ ನಿರ್ಮಿಸಿಕೊಟ್ಟಿದ್ದು, ವಿಜಯ್ ಕಿರಗಂ ದೂರು ಅವರಿಗೆ ತಾಲೂಕಿನ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಪಾಂಡವಪುರ ತಾಲೂಕಿನಲ್ಲಿ ಕೊರೊನಾ 3ನೇ ಅಲೆ ನಿಯಂತ್ರಿಸಲು ಅಧಿಕಾರಿಗಳು ಹಾಗೂ ವೈದ್ಯರ ಸಹಕಾರದಲ್ಲಿ ಮುಂಜಾ ಗ್ರತಾ ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸೋಂಕಿತ ರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಮ್ಲಜನಕ ಅವಶ್ಯಕತೆ ಇದ್ದಲ್ಲಿ ಇನ್ನು ಮುಂದೆ ಆಸ್ಪ ತ್ರೆಯ ಈ ಘಟಕದಿಂದಲೇ ಪೂರೈಕೆಯಾಗ ಲಿದೆ. ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಆಮ್ಲಜನಕ ವ್ಯವಸ್ಥೆ ತುರ್ತಾಗಿ ಬೇಕಿರುವು ದರಿಂದ ಸಾಂಕೇತಿಕವಾಗಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ಹೊಂಬಾಳೆ ಫಿಲಂಸ್ ಮುಖ್ಯಸ್ಥ ವಿಜಯ್ ಕಿರಗಂ ದೂರು ಹಾಗೂ ಕಲಾವಿದರನ್ನು ಆಹ್ವಾನಿಸಿ ದಾನಿಗಳಿಂದಲೇ ಅಧಿಕೃತವಾಗಿ ಘಟಕ ಉದ್ಘಾಟಿಸಲಾಗುವುದು ಎಂದರು. ಈ ಸಂದರ್ಭ ದಲ್ಲಿ ತಹಸೀಲ್ದಾರ್ ಪ್ರಮೋದ್ ಪಾಟೀಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಧನಂಜಯ, ಪಾಂಡವಪುರ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಹೆಚ್.ಕುಮಾರ್, ಪಾಂಡವ ಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ. ಎ.ಅರವಿಂದ್ ಸೇರಿದಂತೆ ವೈದ್ಯರಿದ್ದರು.

Translate »