ಮುಕ್ತ ವಿವಿ ವಚ್ರ್ಯುಯಲ್ ಉದ್ಯೋಗ ಮೇಳಕ್ಕೆ ಚಾಲನೆ
ಮೈಸೂರು

ಮುಕ್ತ ವಿವಿ ವಚ್ರ್ಯುಯಲ್ ಉದ್ಯೋಗ ಮೇಳಕ್ಕೆ ಚಾಲನೆ

March 16, 2021

ಮೈಸೂರು,ಮಾ.15(ಪಿಎಂ)- ಪದವಿ ನೀಡುವುದರ ಜೊತೆಗೆ ಉದ್ಯೋಗಕ್ಕೂ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶ ದೊಂದಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಮ್ಮಿಕೊಂಡಿರುವ 8 ದಿನಗಳ ಆನ್‍ಲೈನ್ ಉದ್ಯೋಗ ಮೇಳಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಜಾಬ್‍ಕಾರ್ಟ್ ಇಂಡಿಯಾದ ಸಹ ಯೋಗದೊಂದಿಗೆ ಮುಕ್ತ ವಿವಿಯ ಉದ್ಯೋಗ ಘಟಕದ ವತಿಯಿಂದ ಇಂದಿ ನಿಂದ ಮಾ.22ರವರೆಗೆ ಆನ್‍ಲೈನ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೈಸೂರಿನ ಮುಕ್ತ ಗಂಗೋತ್ರಿಯ ಆಡ ಳಿತ ಭವನದ ಕುಲಪತಿಗಳ ಮೀಟಿಂಗ್ ಹಾಲ್‍ನಲ್ಲಿ ಮುಕ್ತ ವಿವಿ ಕುಲಪತಿ ಡಾ. ಎಸ್.ವಿದ್ಯಾಶಂಕರ್ ಈ ವಚ್ರ್ಯುಯಲ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಆನ್ ಲೈನ್ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಆನ್‍ಲೈನ್ ಮೂಲಕ ಪ್ರಥಮ ಬಾರಿಗೆ ಉದ್ಯೋಗ ಮೇಳ ಆಯೋಜಿಸಿ ದ್ದೇವೆ. ಈ ಮೇಳದಲ್ಲಿ ರಾಜ್ಯದ ಸುಮಾರು 100 ಕಂಪನಿಗಳು ಪಾಲ್ಗೊಳ್ಳಲಿವೆ. ಇದೊಂದು ದೊಡ್ಡ ಮಟ್ಟದ ಆನ್‍ಲೈನ್ ಉದ್ಯೋಗ ಮೇಳ. ಇದು ಯಶಸ್ವಿಯಾಗುವ ಎಲ್ಲಾ ಭರವಸೆ ಹೊಂದಿದ್ದು, 8 ದಿನಗಳ ಬಳಿಕ ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆದವರ ಬಗ್ಗೆ ಅಂಕಿ-ಅಂಶಗಳನ್ನು ಬಿಡು ಗಡೆ ಮಾಡಲಾಗುವುದು ಎಂದರು.

ಜಾಬ್‍ಕಾರ್ಟ್ ಇಂಡಿಯಾದ ಸಂಸ್ಥಾ ಪಕ ಹಾಗೂ ಸಿಇಓ ಎಸ್.ವಿ.ವೆಂಕಟೇಶ್ ಮಾತನಾಡಿ, ಒಮ್ಮೆ ವಚ್ರ್ಯುಯಲ್ ಪ್ರೊಫೈಲ್ ಸಿದ್ಧಪಡಿಸಿ ಅಪ್‍ಲೋಡ್ ಮಾಡಿಕೊಂಡರೆ ಹಲವು ಕಂಪನಿಗಳು ಅವಲೋಕಿಸಲಿವೆ. ಕಂಪನಿಗಳು ಮೊದ ಲಿಗೆ ಅಭ್ಯರ್ಥಿಯ ಪ್ರಾಥಮಿಕ ವಿವರ ನೋಡಲಿವೆ. ಆ ಬಳಿಕ ಅವರಿಗೆ ಅಭ್ಯರ್ಥಿ ಸೂಕ್ತ ಎನ್ನಿಸಿದರೆ, ಅಭ್ಯರ್ಥಿಯ ವಿಡಿಯೋ ಪ್ರೊಫೈಲ್ ನೋಡಲಿವೆ. ಆನ್‍ಲೈನ್ ಆಗಿ ರುವ ಹಿನ್ನೆಲೆಯಲ್ಲಿ ಸಣ್ಣ ಗ್ರಾಮದಲ್ಲಿ ಇದ್ದು ಕೊಂಡು ಬೆಂಗಳೂರಿನ ಕಂಪನಿ ಯೊಂದರ ಸಂದರ್ಶನ ಎದುರಿಸಲು ಇದು ಸಾಧ್ಯ ಮಾಡಲಿದೆ ಎಂದರು.

ಮುಕ್ತ ವಿವಿ ಉದ್ಯೋಗ ಘಟಕದ ಉದ್ಯೋ ಗಾಧಿಕಾರಿ ಡಾ.ಆರ್.ಹೆಚ್.ಪವಿತ್ರಾ ಪ್ರಸ್ತಾ ವಿಕವಾಗಿ ಮಾತನಾಡಿ, 2019ರ ಆಗಸ್ಟ್ ನಲ್ಲಿ ವಿವಿಯಲ್ಲಿ ಉದ್ಯೋಗ ಘಟಕ ಸ್ಥಾಪನೆ ಯಾಯಿತು. ಇದೇ ವರ್ಷವೇ ಉದ್ಯೋಗ ಘಟಕದಿಂದ ಬೃಹತ್ ಉದ್ಯೋಗ ಆಯೋಜನೆ ಮಾಡಲಾಗಿತ್ತು. 7 ಸಾವಿರ ಅಭ್ಯರ್ಥಿಗಳು ನಮ್ಮ ವಿವಿ ಆವರಣದಲ್ಲಿ ನಡೆದ ಈ ಮೇಳದಲ್ಲಿ ಭಾಗವಹಿಸಿದ್ದರು. ಈ ಪೈಕಿ 3,900 ಮಂದಿಗೆ ಉದ್ಯೋಗ ಲಭ್ಯವಾಯಿತು ಎಂದು ತಿಳಿಸಿದರು.

ಅಂತೆಯೇ ಇದೀಗ ಮತ್ತೊಂದು ಉದ್ಯೋಗ ಮೇಳ ಆನ್‍ಲೈನ್ ಮೂಲಕ ನಡೆಯುತ್ತಿದ್ದು, 8,200 ಅಭ್ಯರ್ಥಿಗಳು ಈವ ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. 8 ದಿನಗಳ ಅವಧಿಯ ಈ ಉದ್ಯೋಗ ಮೇಳದಲ್ಲಿ 15 ಸಾವಿರ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ನಿರೀಕ್ಷಿಸ ಲಾಗಿದೆ. ಈ ವರೆಗೆ 102 ಕಂಪನಿಗಳು ಉದ್ಯೋಗ ನೀಡಲು ನೋಂದಣಿ ಮಾಡಿ ಕೊಂಡಿವೆ ಎಂದು ವಿವರಿಸಿದರು. ವಿವಿಯ ಹಣಕಾಸು ಅಧಿಕಾರಿ ಡಾ.ಖಾದರ್ ಪಾಷಾ ಮತ್ತಿತರರು ಹಾಜರಿದ್ದರು.

Translate »