ಅ.1ರಿಂದ ಚಾಲನಾ ಪರವಾನಗಿ, SBI ಹೊಸ ನಿಯಮಗಳು ಜಾರಿಗೆ
ಮೈಸೂರು

ಅ.1ರಿಂದ ಚಾಲನಾ ಪರವಾನಗಿ, SBI ಹೊಸ ನಿಯಮಗಳು ಜಾರಿಗೆ

September 28, 2020

ನವದೆಹಲಿ, ಸೆ.27-ಅಕ್ಟೋಬರ್ 1ರಿಂದ ಚಾಲನಾ ಪರವಾನಗಿ ಹಾಗೂ ಎಸ್‍ಬಿಐನ ಹೊಸ ನಿಯಮಗಳು ಜಾರಿಗೆ ಬರಲಿವೆ. ದಿನನಿತ್ಯ ಉಪಯೋಗವಾಗುವ ನಿಯಮಗಳು ಇವುಗಳಾಗಿದ್ದು, ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿವೆ.

ಮುಖ್ಯ ಬದಲಾವಣೆಗಳು ಹೀಗಿರಲಿವೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇತ್ತೀಚಿನ ದಿನಗಳಲ್ಲಿ ವಾಹನ ನೋಂದಣಿ ಕಾರ್ಡ್ ವಿತರಣೆ ಹಾಗೂ ಡಿಎಲ್ ಗಳಿಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಜಾರಿಗೆ ತಂದಿದೆ. ಡಿಎಲ್ ಹಾಗೂ ಆರ್‍ಸಿಗಳನ್ನು ಅಪ್‍ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ನೀವು ಕ್ರೆಡಿಟ್ ಕಾರ್ಡ್‍ಗಳ ಮೂಲಕ ಪೆಟ್ರೋಲ್ ಬಂಕ್‍ಗಳಲ್ಲಿ ಇಂಧನ ತುಂಬಿಸಿ ಪಾವತಿ ಮಾಡಿದರೆ ಅ.1ರಿಂದ ಅದಕ್ಕೆ ರಿಯಾಯಿತಿ ದೊರೆಯುವುದಿಲ್ಲ. ಅ.1ರಿಂದ ಏಕರೂಪದ ವಾಹನ ನೋಂದಣಿ ಕಾರ್ಡ್‍ಗಳು ಆರ್‍ಸಿ, ಡಿಎಲ್‍ಗಳನ್ನು ನೀಡಲಾಗುತ್ತದೆ. ಹೊಸ ಕಾರ್ಡ್‍ನಲ್ಲಿ ಅತ್ಯಾಧುನಿಕ ಮೈಕ್ರೋಚಿಪ್ ಇರಲಿದ್ದು, ಕ್ಯುಆರ್ ಕೋಡ್ ಹಾಗೂ ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್‍ಎಫ್‍ಸಿ)ಗಳು ಇರಲಿವೆ. ಈ ಬದಲಾವಣೆಗಳಿಂದ ಸರ್ಕಾರಕ್ಕೆ ಡಿಎಲ್ ಕಾರ್ಡ್ ದಾರರ ದಾಖಲೆ ಹಾಗೂ ದಂಡದ ಮಾಹಿತಿಗಳನ್ನು 10 ವರ್ಷದವರೆಗೆ ಕೇಂದ್ರೀಕೃತ ಆನ್‍ಲೈನ್ ಡಾಟಾ ಬೇಸ್ ಅನ್ನು ನಿರ್ವಹಿಸಲು ಸಾಧ್ಯವಾಗಿಸಲಿದೆ. ಅಷ್ಟೇ ಅಲ್ಲದೇ ವಿಶೇಷ ಚೇತನ ಚಾಲಕರ ವಿವರಗಳನ್ನು ಒಂದೆಡೆ ಸಂಗ್ರಹಿಸಲು, ವಾಹನಗಳಿಗೆ ಮಾಡಿರುವ ಬದಲಾವಣೆ, ಯಾವುದೇ ವ್ಯಕ್ತಿ ಅಂಗದಾನ ಮಾಡಿದ್ದರೆ ಅವುಗಳ ವಿವರಗಳನ್ನು ಸಂಗ್ರಹಿಸಲು ಸಾಧ್ಯವಾಗಿಸಲಿದೆ. ಆರ್‍ಸಿಗಳ ಪ್ರಕ್ರಿಯೆಯನ್ನು ಸಂಪೂರ್ಣ ಪೇಪರ್ ರಹಿತಗೊಳಿಸಲು ಸಾಧ್ಯವಾಗಿಸಲಿವೆ. ಡೆಬಿಟ್ ಕಾರ್ಡ್ ಹಾಗೂ ಇತರ ಡಿಜಿಟಲ್ ಮೋಡ್‍ಗಳ ಮೂಲಕ ಇಂಧನ ತುಂಬಿಸುವ ಪಾವತಿಗಳಲ್ಲಿ ರಿಯಾಯಿತಿ ದೊರೆಯಲಿದೆ. ಗೃಹ ಸಾಲ, ವಾಹನ, ಖಾಸಗಿ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಎಸ್‍ಬಿಐ ಬ್ಯಾಂಕ್ ಸರಾಸರಿ ತಿಂಗಳ ಉಳಿತಾಯದ ಮೊತ್ತವನ್ನು ಕಡಿಮೆ ಮಾಡಲಿದ್ದು, ಒಂದು ವೇಳೆ ಕನಿಷ್ಠ ಮೊತ್ತ ಖಾತೆಯಲ್ಲಿ ಇಲ್ಲದೇ ಇದ್ದಿದ್ದರೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನೂ ಕಡಿಮೆ ಮಾಡಲಿದೆ. ಕನಿಷ್ಠ ತಿಂಗಳ ಬ್ಯಾಲೆನ್ಸ್ 3,000, ಗ್ರಾಮೀಣ ಭಾಗದಲ್ಲಿ 1,000 ರೂಪಾಯಿಗಳಿಗೆ ಮಿನಿಮಮ್ ಬ್ಯಾಲೆನ್ಸ್ ಅ.1 ರಿಂದ ನಿಗದಿಯಾಗಲಿದೆ.

Translate »