3.15 ಕೋಟಿ ರೂ. ವೆಚ್ಚದಲ್ಲಿ ಕಾಳಿದಾಸ ರಸ್ತೆ ಕಾಮಗಾರಿಗೆ ಚಾಲನೆ
ಮೈಸೂರು

3.15 ಕೋಟಿ ರೂ. ವೆಚ್ಚದಲ್ಲಿ ಕಾಳಿದಾಸ ರಸ್ತೆ ಕಾಮಗಾರಿಗೆ ಚಾಲನೆ

September 28, 2020

ಮೈಸೂರು, ಸೆ.27(ಪಿಎಂ)- ಮೈಸೂ ರಿನ ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಯಲಕ್ಷ್ಮೀಪುರಂನ ಮಾತೃ ಮಂಡಳಿ (ಕೆಇಬಿ) ವೃತ್ತದಿಂದ ಕಾಳಿದಾಸ (ಕೆಡಿ ರಸ್ತೆ) ರಸ್ತೆ ಮಾರ್ಗವಾಗಿ ವಿಜಯ ನಗರದ ಯೋಗನರಸಿಂಹಸ್ವಾಮಿ ದೇವಸ್ಥಾನ ದವರೆಗೆ (ಜನರಲ್ ತಿಮ್ಮಯ್ಯ ರಸ್ತೆ ಜಂಕ್ಷನ್ ವರೆಗೆ) ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನು ವಾರ ಸಹಕಾರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಚಾಲನೆ ನೀಡಿದರು.

ಲೋಕೋಪಯೋಗಿ ಇಲಾಖೆ ಅನು ದಾನದ 3.15 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತು ಕೊಂಡಿರುವ ಈ ಕಾಮಗಾರಿಗೆ ಮಾತೃ ಮಂಡಳಿ ವೃತ್ತದಲ್ಲಿ ಶ್ರೀ ಚಂದ್ರಮೌಳೇ ಶ್ವರಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರ ಉಪಸ್ಥಿತಿಯಲ್ಲಿ ಸಚಿವರು ಗುದ್ದಲಿಪೂಜೆ ನೆರವೇರಿಸಿದರು. 2,250 ಮೀ. ಉದ್ದ ಹಾಗೂ 14.40 ಮೀ. ಅಗಲದ ರಸ್ತೆ ಅಭಿವೃದ್ಧಿ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ನಾಮಫಲಕ ಅಳವಡಿಕೆ, ಲೇನ್ ಮಾರ್ಕಿಂಗ್, ರಸ್ತೆ ಡುಬ್ಬಗಳ ನಿರ್ಮಾಣ ಕಾಮಗಾರಿಯೂ ನಡೆಯಲಿದೆ.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಮೈಸೂರು ನಗರದಲ್ಲಿ ಅಶೋಕ ರಸ್ತೆ ಹಾಗೂ ಡಿ.ದೇವರಾಜ ಅರಸು ರಸ್ತೆ ಪ್ರಮುಖ ವಾಣಿಜ್ಯ ವಹಿವಾಟು ನಡೆ ಯುವ ರಸ್ತೆಗಳು. ಅದೇ ರೀತಿ ಕಾಳಿದಾಸ ರಸ್ತೆಯೂ ವಾಣಿಜ್ಯ ವಹಿವಾಟು ನಡೆ ಯುವ ಮತ್ತೊಂದು ಪ್ರಮುಖ ರಸ್ತೆಯಾ ಗಿದೆ. ಹೀಗಾಗಿ ಈ ರಸ್ತೆಯ ಮೇಲೆ ಹೆಚ್ಚು ಒತ್ತಡ ಸಹಜ. ಈ ಹಿನ್ನೆಲೆಯಲ್ಲಿ ಕಾಳಿ ದಾಸ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡ ಲಾಗಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಯ ಇಂಟರ್‍ಲಾಕ್ ಫುಟ್‍ಪಾತ್ ನಿರ್ಮಾಣ ಹಾಗೂ ಚರಂಡಿ ಕಾಮ ಗಾರಿಗೂ ಚಾಲನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆ ಸದಸ್ಯ ಹಾಗೂ ಪಾಲಿಕೆ ವಿಪಕ್ಷ ನಾಯಕರೂ ಆದ ಎಂ.ಯು.ಸುಬ್ಬಯ್ಯ, ಪಾಲಿಕೆ ಸದಸ್ಯ ರಾದ ಭಾಗ್ಯ ಮಾದೇಶ್, ನಮ್ರತಾ ರಮೇಶ್, ರವೀಂದ್ರ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಲೋಕೋಪಯೋಗಿ ಇಲಾಖೆಯ ಕಾರ್ಯ ಪಾಲಕ ಇಂಜಿನಿಯರ್ ಹರ್ಷ, ಸಹಾ ಯಕ ಕಾರ್ಯಪಾಲಕ ಇಂಜಿನಿಯರ್ ರಾಜು, ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ ರಾಜು, ಉಪಾಧ್ಯಕ್ಷ ಕುಮಾರಗೌಡ, ನಗರ ಯುವ ಮೋರ್ಚಾ ಅಧ್ಯಕ್ಷ ಕಿರಣ್‍ಗೌಡ, ಮಾಜಿ ಉಪಮೇಯರ್ ಮಹದೇವಪ್ಪ, ಗುತ್ತಿಗೆದಾರ ಅಶೋಕ್ ಗೋವಿಂದೇಗೌಡ, ಮುಖಂಡರಾದ ಚಿಕ್ಕವೆಂಕಟು, ಪುನೀತ್, ತನುಜಾ ಮಹೇಶ್, ಶಿವಪ್ರಕಾಶ್, ಶ್ರೀರಾಂ, ನಾರಾಯಣ್, ಸಚಿನ್, ಬಾಲಣ್ಣ, ಚೌಡಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

 

 

Translate »