ಅರಮನೆಯಲ್ಲಿ ಪ್ರವಾಸಿಗರಿಗೆ ಗುಲಾಬಿ, ಸಿಹಿ ನೀಡಿ ಸ್ವಾಗತ
ಮೈಸೂರು

ಅರಮನೆಯಲ್ಲಿ ಪ್ರವಾಸಿಗರಿಗೆ ಗುಲಾಬಿ, ಸಿಹಿ ನೀಡಿ ಸ್ವಾಗತ

September 28, 2020

ಮೈಸೂರು, ಸೆ.27(ಎಂಟಿವೈ)- ವಿಶ್ವ ಪ್ರವಾಸೋದ್ಯಮ ದಿನದ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಬಂದ ಪ್ರವಾಸಿಗ ರಿಗೆ ಗುಲಾಬಿ ಹಾಗೂ ಮೈಸೂರು ಪಾಕ್ ನೀಡುವ ಮೂಲಕ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಸದಸ್ಯರು ಆತ್ಮೀಯ ವಾಗಿ ಬರಮಾಡಿಕೊಂಡರಲ್ಲದೆ, ಸಾಂಸ್ಕøತಿಕ ನಗರಿ ಮೈಸೂರು ಪ್ರವಾಸಿಗರಿಗೆ ಸುರಕ್ಷಿತ ತಾಣ, ನಗರದ ಎಲ್ಲಾ ಪ್ರವಾಸಿ ತಾಣ ತೆರೆದಿದ್ದು, ಕುಟುಂಬದ ಸದಸ್ಯರೊಂದಿಗೆ ಆಗಮಿಸುವಂತೆ ಕೋರಿದರು.

ಪ್ರತಿ ವರ್ಷ ಸೆ.27ರಂದು ವಿಶ್ವ ಪ್ರವಾ ಸೋದ್ಯಮ ದಿನವನ್ನು ಮೈಸೂರಲ್ಲಿ ವಿಜೃಂ ಭಣೆಯಿಂದ ಆಚರಿಸುವ ಪದ್ಧತಿಯಿದೆ. ಕರ್ನಾ ಟಕ ಪ್ರವಾಸೋದ್ಯಮ ಇಲಾಖೆ ಸಹಯೋಗ ದಲ್ಲಿ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಹಾಗೂ ಇನ್ನಿತರ ಸಂಸ್ಥೆಗಳು ಸೇರಿ ಕಾರ್ಯ ಕ್ರಮ ಆಯೋಜಿಸುತ್ತಿದ್ದವು. ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸುವ ನಿರ್ಧಾರದಿಂದ ಹಿಂದೆ ಸರಿದು ಸರಳವಾಗಿ ಆಚರಿಸಿ 200ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿಗೆ ಅರಮನೆಯ ವರಹಾ ದ್ವಾರದ ಬಳಿ ಗುಲಾಬಿ ನೀಡಿ, ಮೈಸೂರು ಪಾಕ್ ನೀಡಿ ಆತ್ಮೀಯವಾಗಿ ಸ್ವಾಗತಿಸಿದರಲ್ಲದೆ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯ ಕೋರಿದರು.

ಬಳಿಕ ಸಾಂಪ್ರದಾಯಿಕ ಉಡುಪು (ಪಂಚೆ, ಶರ್ಟ್, ಶಲ್ಯ) ಧರಿಸಿದ್ದ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್‍ನ ಸದಸ್ಯರು ತೆರೆದ ಜೀಪ್‍ನಲ್ಲಿ ಮೈಸೂರು-ನೀಲಗಿರಿ ರಸ್ತೆ, ಜಯಚಾಮರಾಜ ಒಡೆಯರ್( ಹಾರ್ಡಿಂಗ್ ಸರ್ಕಲ್)ದ ಮೂಲಕ ಅರಮನೆಯ ಕೋಟೆ ಆಂಜನೇಯಸ್ವಾಮಿ ದ್ವಾರದ ಬಳಿಗೆ ಆಗಮಿಸಿದರು. ಅಲ್ಲಿಯೂ ಅರ ಮನೆ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಗುಲಾಬಿ, ಸಿಹಿ ನೀಡಿ ಸ್ವಾಗತಿಸಲಾಯಿತು.

ಇದೇ ವೇಳೆ ಸೇಫ್ ವೀಲ್ಸ್ ಸಂಸ್ಥೆಯ ಮುಖ್ಯಸ್ಥ ಬಿ.ಎಸ್.ಪ್ರಶಾಂತ್ ಮಾತನಾಡಿ, ಮೈಸೂರು ಪ್ರವಾಸೋದ್ಯಮ ಫೆಬ್ರವರಿ ಯಿಂದ ನೆಲಕಚ್ಚಿದೆ. ಕೊರೊನಾ ಆತಂಕ, ಲಾಕ್‍ಡೌನ್‍ನಿಂದಾಗಿ ಪ್ರವಾಸೋದ್ಯಮ ವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವ ಲಂಬಿಸಿದ್ದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ತುತ್ತಾಗಿವೆ. ಲಾಕ್‍ಡೌನ್ ನಿಯಮ ಸಡಿಲಿಕೆ ನಂತರ ಇದೀಗ ಮೈಸೂರು ಸೇರಿ ದಂತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಪುನರಾರಂಭಿಸಲಾಗಿದೆ. ಸರ್ಕಾರದ ಮಾರ್ಗ ಸೂಚಿಯನ್ನು ಅನುಸರಿಸಿ ಪ್ರವಾಸಿಗರ ಸುರಕ್ಷ ತೆಗೆ ಆದ್ಯತೆ ನೀಡಲಾಗುತ್ತಿದೆ. ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕೆಆರ್‍ಎಸ್ ಸೇರಿದಂತೆ ಎಲ್ಲಾ ಪ್ರವಾಸಿ ತಾಣವೂ ತೆರೆ ದಿವೆ. ಪ್ರವಾಸಿಗರಿಗೆ ಮುಕ್ತ ಅವಕಾಶ ದೊರೆ ತಿದೆ. ಮೈಸೂರು ನಗರ ಪ್ರವಾಸಿಗರಿಗೆ ಸುರಕ್ಷಿತವಾದ ನಗರ, ಇಲ್ಲಿನ ಪ್ರವಾಸಿ ತಾಣ ಗಳ ವೀಕ್ಷಣೆಗೆ ಲಭ್ಯವಿದೆ ಎನ್ನುವ ಸಂದೇಶ ಸಾರುವ ಮೂಲಕ ಪ್ರವಾಸಿಗರನ್ನು ಆಕರ್ಷಿ ಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮಕ್ಕೆ ಅರಮನೆ ಆಡ ಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಮಾತನಾಡಿ, ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಪ್ರವಾಸಿ ತಾಣ ಗಳಲ್ಲೂ ಪ್ರವಾಸಿಗರ ರಕ್ಷಣೆಗೆ ಮನ್ನಣೆ ನೀಡಿರುವುದರಿಂದ ಯಾವುದೇ ಭಯವಿಲ್ಲದೆ ಪ್ರವಾಸಿಗರು ಮೈಸೂರಿಗೆ ಆಗಮಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಮೈಸೂರು ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ಶಿವ ಲಿಂಗಯ್ಯ, ಗೌರವಾಧ್ಯಕ್ಷ ಜಯಕುಮಾರ್, ಅಭಿನಂದನ್, ಕಾರ್ಯಕ್ರಮದ ಅಧ್ಯಕ್ಷ ಎ.ಸಿ. ರವಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

 

 

Translate »