ಪ್ರವಾಸಿಗರಿಗೆ ಹೋಟೆಲ್‍ಗಳ ರಿಯಾಯಿತಿ ಕೂಪನ್ ವಿತರಣೆ
ಮೈಸೂರು

ಪ್ರವಾಸಿಗರಿಗೆ ಹೋಟೆಲ್‍ಗಳ ರಿಯಾಯಿತಿ ಕೂಪನ್ ವಿತರಣೆ

September 28, 2020

ಮೈಸೂರು, ಸೆ.27(ಎಸ್‍ಬಿಡಿ)- ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ  ಮೈಸೂರಿನ ಹಲವು ಹೋಟೆಲ್‍ಗಳ ರಿಯಾಯಿತಿ ಕೂಪನ್‍ಗಳನ್ನು ಭಾನುವಾರ ಪ್ರವಾಸಿಗರಿಗೆ ವಿತರಿಸಲಾಯಿತು.

ಮೈಸೂರು ನಗರದ 15ಕ್ಕೂ ಹೆಚ್ಚು ಹೋಟೆಲ್‍ಗಳ ಒಟ್ಟು 122 ರಿಯಾಯಿತಿ ಕೂಪನ್‍ಗಳನ್ನು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ್ ಕಾಮತ್, ಅರಮನೆ ಹಾಗೂ ಮೃಗಾಲಯದ ಬಳಿ ವಿತರಣೆ ಮಾಡಿದರು.

ಕೊರೊನಾ ಪರಿಣಾಮ ಪ್ರವಾಸೋದ್ಯಮ ಕುಸಿದಿದೆ. ಹೋಟೆಲ್ ವ್ಯವಹಾರವೂ ಚೇತರಿಸಿಕೊಂಡಿಲ್ಲ. ಈ ಬಾರಿ ದಸರಾ ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ ಸೀಮಿತವಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಪ್ರವಾಸಿಗರನ್ನು ನಿರೀಕ್ಷಿಸಲಾಗದು. ಇಂತಹ ಪರಿಸ್ಥಿತಿಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಹಾಗೆಯೇ ಹಲವು ಹೋಟೆಲ್ ಮಾಲೀಕರು, ಪ್ರವಾಸಿಗರಿಗೆ ಕೊಠಡಿ ಹಾಗೂ ಊಟದ ಬಿಲ್‍ನಲ್ಲಿ ಶೇ.50ರಷ್ಟು ರಿಯಾಯಿತಿಯ ಕೂಪನ್ ನೀಡಿದ್ದಾರೆ.

 

 

 

 

Translate »