ರಾಜ್ಯದಲ್ಲಿ 11 ನೋಡಲ್ ಕೇಂದ್ರಗಳಲ್ಲಿ ನಡೆದ ಪರೀಕ್ಷೆ
ಮೈಸೂರು, ಸೆ.27(ಆರ್‍ಕೆಬಿ)- ಮೈಸೂರು ವಿಶ್ವವಿದ್ಯಾನಿಲಯದ ಕೆ-ಸೆಟ್(ಪರೀಕ್ಷೆ) ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ 11 ನೋಡಲ್ ಕೇಂದ್ರಗಳಲ್ಲಿ ಭಾನು ವಾರ ಸುಗಮವಾಗಿ ನಡೆದಿದ್ದು, ಒಟ್ಟು 1,06,500 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಒಟ್ಟು 41 ವಿಷಯಗಳಿಗೆ ಬೆಳಗ್ಗೆ 9ರಿಂದ 10.30ವರೆಗೆ ಮೊದಲ ಪ್ರಶ್ನೆಪತ್ರಿಕೆ, ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ 2ನೇ ಪ್ರಶ್ನೆಪತ್ರಿಕೆಗೆ ಉತ್ತರ ಬರೆದರು. ಮೈಸೂರು, ಬೆಂಗಳೂರು, ತುಮಕೂರು, ಮಂಗಳೂರು, ದಾವಣಗೆರೆ, ಶಿವಮೊಗ್ಗ, ಧಾರವಾಡ, ಬಳ್ಳಾರಿ, ವಿಜಯಪುರ, ಬೆಳಗಾವಿ ಮತ್ತು ಕಲಬುರ್ಗಿ ನೋಡಲ್ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು. ಮೈಸೂರು ನೋಡಲ್ ಕೇಂದ್ರದ ಒಟ್ಟು 35 ಪರೀಕ್ಷಾ ಸ್ಥಳಗಳಲ್ಲಿ 20,500 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಮೈಸೂರಿ ನಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಸುಗಮವಾಗಿ ನಡೆಯಿತು ಎಂದು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದ್ದಾರೆ.