ಬಂದ್ ವಿಫಲಗೊಳಿಸಿ, ರೈತ ಪರ ಮಸೂದೆಗಳ ಬೆಂಬಲಿಸಿ
ಮೈಸೂರು

ಬಂದ್ ವಿಫಲಗೊಳಿಸಿ, ರೈತ ಪರ ಮಸೂದೆಗಳ ಬೆಂಬಲಿಸಿ

September 28, 2020

ಮೈಸೂರು, ಸೆ.27-ಎಪಿಎಂಸಿ ಮಸೂದೆ ಮತ್ತು ಭೂ ಸುಧಾ ರಣಾ ತಿದ್ದುಪಡಿ ಕಾಯ್ದೆಗಳು ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲಿವೆ ಎಂದು ಬಿಜೆಪಿ ಮುಖಂಡ ಆರ್.ರಘು(ಕೌಟಿಲ್ಯ) ತಿಳಿಸಿದ್ದಾರೆ.

ಈ ಎರಡೂ ಮಸೂದೆಗಳು ರೈತನಿಗೆ ಶಕ್ತಿ ನೀಡಿ, ಶೋಷಣೆ ತಪ್ಪಿಸುವ ಮಹ ದೋದ್ಧೇಶ ಹೊಂದಿವೆ. ಕೃಷಿಯನ್ನೂ ಒಂದು ಉದ್ಯಮ ಎಂದು ಪರಿಗಣಿಸುವ ಮಹತ್ವದ ಹೆಜ್ಜೆ ಇದಾಗಿದೆ. ರೈತರಿಗೆ ಮತ್ತು ನಾಡಿನ ಏಳಿಗೆಗೆ ಯಾವ ರೀತಿ ಅನು ಕೂಲವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ರೈತರಿಗೆ ಮನವರಿಕೆಯಾಗ ಲಿದೆ ಎಂದಿದ್ದಾರೆ. ಆದರೆ ರೈತರಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ದಿಕ್ಕು ತಪ್ಪಿಸಲಾಗುತ್ತಿದೆ. ಅಲ್ಲದೆ, ಬಂದ್‍ಗೆ ಕರೆ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ. ಇಂದಿನ ಜನವಿರೋಧಿ ಮತ್ತು ರೈತ ವಿರೋಧಿ ಬಂದ್ ವಿಫಲಗೊಳಿಸಿ ರೈತ ಪರ ಮಸೂದೆಗಳನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Translate »