ಡ್ರಗ್ಸ್ ಪ್ರಕರಣ: ನಾಪತ್ತೆಯಾಗಿದ್ದ  ಆದಿತ್ಯ ಆಳ್ವಾ ಕೊನೆಗೂ ಸಿಸಿಬಿ ಬಲೆಗೆ
ಮೈಸೂರು

ಡ್ರಗ್ಸ್ ಪ್ರಕರಣ: ನಾಪತ್ತೆಯಾಗಿದ್ದ  ಆದಿತ್ಯ ಆಳ್ವಾ ಕೊನೆಗೂ ಸಿಸಿಬಿ ಬಲೆಗೆ

January 13, 2021

ಬೆಂಗಳೂರು,ಜ.12-ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣ ಸಂಬಂಧ ನಾಪತ್ತೆಯಾಗಿದ್ದ ಆದಿತ್ಯ ಆಳ್ವಾ ಕೊನೆಗೂ ಸಿಸಿಬಿ ಪೆÇಲೀಸರ ಬಲೆಗೆ ಬಿದ್ದಿದ್ದಾನೆ. ಬೆಂಗಳೂರು ಸಿಸಿಬಿ ಪೆÇಲೀಸರು ಚೆನ್ನೈನಲ್ಲಿ ಕಳೆದ ರಾತ್ರಿ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾನನ್ನು ಬಂಧನಕ್ಕೊಳಪಡಿಸಿದ್ದು, ಇದೀಗ ಬೆಂಗಳೂರಿಗೆ ಕರೆತಂದಿದ್ದಾರೆಂದು ತಿಳಿದುಬಂದಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರುವ ಸಿಸಿಬಿ ಕಚೇರಿಯಲ್ಲಿ ಆದಿತ್ಯಾ ಆಳ್ವಾ ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮುಂಬೈ ಸೇರಿದಂತೆ ಹಲವೆಡೆ ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವಾ, ಕಳೆದ 15 ದಿನಗಳಿಂದ ಚೆನ್ನೈ ಹೊರವಲಯದ ರೆಸಾರ್ಟ್‍ನಲ್ಲಿ ಬಚ್ಚಿಟ್ಟುಕೊಂಡಿದ್ದ. ನಿನ್ನೆಯಷ್ಟೇ ಸಿಸಿಬಿ ಪೆÇಲೀಸರು ಕಾರ್ಯಾಚರಣೆ ನಡೆಸಿ ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡ್ರಗ್ಸ್ ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆ ಆದಿತ್ಯ ಆಳ್ವಾ ಪರಾರಿಯಾಗಿದ್ದ. 2020ರ ಸೆಪ್ಟೆಂಬರ್‍ನಲ್ಲಿ ಆದಿತ್ಯ ರೆಸಾರ್ಟ್ ಮೇಲೆ ಬೆಂಗಳೂರು ಸಿಸಿಬಿ ಪೆÇಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ರೆಸಾರ್ಟ್‍ನಲ್ಲಿ ಗಾಂಜಾ, ಮಾತ್ರೆಗಳು ಪತ್ತೆಯಾಗಿದ್ದವು. ಪೆÇಲೀಸ್ ದಾಳಿಗೂ ಮೊದಲೇ ಆದಿತ್ಯ ಆಳ್ವಾ ತಲೆಮರೆಸಿಕೊಂಡಿದ್ದನೆಂದು ಹೇಳಲಾಗುತ್ತಿದೆ.

 

 

Leave a Reply

Your email address will not be published. Required fields are marked *