ರಂಗ ಸಂಗೀತಗಾರ ಪರಮಶಿವನ್‍ಗೆ ಶ್ರದ್ಧಾಂಜಲಿ
ಮೈಸೂರು

ರಂಗ ಸಂಗೀತಗಾರ ಪರಮಶಿವನ್‍ಗೆ ಶ್ರದ್ಧಾಂಜಲಿ

January 13, 2021

ಮೈಸೂರು, ಜ.12(ಎಂಕೆ)- ಹಿರಿಯ ರಂಗ ಸಂಗೀತ ತಜ್ಞ ಆರ್.ಪರಮಶಿವನ್ ಅವರಿಗೆ ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡ, ರಂಗ ಚಾವಡಿ, ರಂಗ ಪ್ರಭ, ರಂಗ ರತ್ನಾಕರ, ಮೈಸೂರಿನ ಉಡುಪಿ ಕಲಾವಿದರ ಸಂಘ, ಮೈಸೂರು ಜಿಲ್ಲಾ ವೃತ್ತಿ ಕಲಾವಿದೆಯರ ಸಂಘದ ವತಿಯಿಂದ ರಂಗಗೀತಾ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೈಸೂರಿನ ಕಲಾಮಂದಿರದ ಸಚಿತ್ರಾ ಗ್ಯಾಲರಿಯಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಆರ್.ಪರಮಶಿವನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬಳಿಕ ಹಿರಿಯ ನಾಟಕ ಕಲಾವಿದ ಸೂರ್ಯನಾರಾಯಣ ಮಾತನಾಡಿ, ನನ್ನ ಮತ್ತು ಪರಮಶಿವನ್ ಅವರ ಸ್ನೇಹ 70 ವರ್ಷದ್ದು. ಸೂರ್ಯ, ಚಂದ್ರ ಮತ್ತು ಆಕಾಶದಲ್ಲಿನ ನಕ್ಷತ್ರಗಳನ್ನು ನೋಡಿದಾಗ ಆಗುವಷ್ಟು ಸಂತೋಷ ಪರಮಶಿವನ್ ಕಂಡರೆ ಆಗುತ್ತಿತ್ತು ಎಂದು ಸ್ಮರಿಸಿದರು. ರಂಗಭೂಮಿಗೆ ಬರುವುದಕ್ಕೂ ಮೊದಲು ಶಾಸ್ರ್ತೀಯ ಸಂಗೀತದಲ್ಲಿ ತೊಡಗಿಸಿಕೊಂಡಿದ್ದ ಪರಮಶಿವನ್, ಯುವಕನಾ ಗಿದ್ದಾಗಲೇ ಎಂ.ಎಸ್.ಸುಬ್ಬಲಕ್ಷ್ಮಿ ಅವರಿಂದ ಮೆಚ್ಚುಗೆ ಪಡೆದಿದ್ದರು. 3 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ನಿರರ್ಗಳವಾಗಿ ಹಾಡುತ್ತಿದ್ದ ಮಹಾನ್ ಸಂಗೀತಗಾರ. ಮೂರು ಗಂಟೆಗೂ ಹೆಚ್ಚು ಕಾಲ ನಿಂತುಕೊಂಡೆ ಹಾಡುತ್ತಿದ್ದ ಗಟ್ಟಿ ಮನುಷ್ಯ ಎಂದು ಬಣ್ಣಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ, ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡದ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Translate »