45 ಮಂದಿಯಿಂದ ಸ್ವಯಂಪ್ರೇರಿತರಾಗಿ ರಕ್ತದಾನ
ಮೈಸೂರು

45 ಮಂದಿಯಿಂದ ಸ್ವಯಂಪ್ರೇರಿತರಾಗಿ ರಕ್ತದಾನ

January 13, 2021

ಮೈಸೂರು, ಜ.12(ಆರ್‍ಕೆಬಿ)- ಸ್ವಾಮಿ ವಿವೇಕಾ ನಂದರ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನೋತ್ಸವದ ಅಂಗವಾಗಿ ಮೈಸೂರಿನ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ವೈಹೆಚ್‍ಎ) ಮೈಸೂರು ಹಾಗೂ ಗಂಗೋತ್ರಿ ಘಟಕ ಗಳು ಮತ್ತು ಜೀವಧಾರ ರಕ್ತನಿಧಿ ಕೇಂದ್ರದ ಆಶ್ರಯ ದಲ್ಲಿ ನಡೆದ ಮೆಗಾ ರಕ್ತದಾನ ಶಿಬಿರದಲ್ಲಿ 45 ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಯುವಕ, ಯುವತಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಭಾಗವಹಿಸಿದ್ದರು. ರಕ್ತ ದಾನ ಮಾಡಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸ ಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿಬಿರದ ನೇತೃತ್ವ ವಹಿಸಿದ್ದ ವೈಹೆಚ್‍ಎ ಮೈಸೂರು ಘಟಕದ ಕಾರ್ಯಾಧ್ಯಕ್ಷ ಹೆಚ್.ರವಿಕುಮಾರ್, ಪ್ರತೀ ವರ್ಷ ವಿವೇಕಾನಂದ ಜಯಂತಿಯಂದು ರಕ್ತದಾನ ಶಿಬಿರ ನಡೆಸುತ್ತಾ ಬಂದಿದ್ದೇವೆ. ಪ್ರತೀ ಬಾರಿಯೂ ನೂರಕ್ಕೂ ಹೆಚ್ಚು ಮಂದಿ ರಕ್ತದಾನ ಶಿಬಿರದಲ್ಲಿ ಭಾಗವಹಿಸುತ್ತಿ ದ್ದರು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಹಾಗೂ ಕಾಲೇಜು ವಿದ್ಯಾರ್ಥಿಗಳಿಲ್ಲದ ಕಾರಣ ರಕ್ತ ದಾನ ನೀಡುವವರ ಸಂಖ್ಯೆಯಲ್ಲಿ ಕಡಿಮೆಯಾಗಿದೆ ಎಂದರು. ರಕ್ತ ನೀಡಿದರೆ ಆರೋಗ್ಯಕ್ಕೆ ತೊಂದರೆಯಾಗು ತ್ತದೆಂಬ ಭಯ ಬೇಡ. ರಕ್ತದಾನದಿಂದ ಯಾವುದೇ ಆರೋಗ್ಯ ಸಮಸ್ಯೆ ಆಗುವುದಿಲ್ಲ. ರಕ್ತ ನೀಡುವುದ ರಿಂದ ರೋಗಿಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದಂತಾಗುತ್ತದೆ. ಹಾಗಾಗಿ ಭಯ, ಆತಂಕ ಬಿಟ್ಟು ಯುವಜನತೆ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

60 ವರ್ಷದವರೂ ರಕ್ತದಾನ ಮಾಡಬಹುದು: ಈ ಸಂದರ್ಭದಲ್ಲಿ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಅವರು, ಇದುವರೆಗೆ ಕೇವಲ 18ರಿಂದ 58 ವರ್ಷದವರು ಮಾತ್ರ ರಕ್ತ ನೀಡ ಬಹುದು ಎಂಬುದಿತ್ತು. ಆದರೆ ಈಗ ಕರ್ನಾಟಕ ಸ್ಟೇಟ್ ಬ್ಲಡ್ ಟ್ರಾನ್ಸ್‍ಫ್ಯೂಷನ್ ಸೆಂಟರ್ (ಕೆಎಸ್‍ಬಿಟಿಸಿ) ಇತ್ತೀ ಚೆಗೆ ನೀಡಿರುವ ಸೂಚನೆ ಪ್ರಕಾರ 45 ಕೆಜಿಗಿಂತ ಹೆಚ್ಚಿನ ತೂಕವುಳ್ಳ 18ರಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ ಎಂದರು. ಮೈಸೂರು `ರಕ್ತದ ಅಭಾವರಹಿತ ಜಿಲ್ಲೆ’ಯಾಗಲು ಯುವಜನರು ಮುಂದೆ ಬರಬೇಕು. ಸ್ವಯಂ ಪ್ರೇರಿತ ರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ವೈಹೆಚ್‍ಎ ರಾಜ್ಯ ಕಾರ್ಯಾಧ್ಯಕ್ಷ ಕೆ.ಪುರುಷೋತ್ತಮ್, ಮೈಸೂರು ಘಟಕದ ಅಧ್ಯಕ್ಷ ಎನ್.ಜಯರಾಂ, ಕಾರ್ಯದರ್ಶಿ ವರುಣ್ ಕಾರ್ತಿಕ್, ಗಂಗೋತ್ರಿ ಘಟಕದ ಅಧ್ಯಕ್ಷ ಜಗದೀಶ್, ಕಾರ್ಯ ದರ್ಶಿ ಪರಶಿವಮೂರ್ತಿ, ಸಂಘಟನಾ ಸಂಚಾಲಕಿ ಗೋಪಮ್ಮ, ಜೀವಧಾರ ರಕ್ತನಿಧಿ ಕೇಂದ್ರದ ಆಡಳಿತಾಧಿಕಾರಿ ಸ್ಯಾಮುವೆಲ್ ವಿಲ್ಸನ್, ಡಾ.ಕಿಶೋರ್ ಇನ್ನಿತರರಿದ್ದರು.

 

 

Translate »