ಡ್ರಗ್ಸ್ ದಂಧೆ: ಮೈಸೂರು ನಗರ, ಜಿಲ್ಲೆಯಾದ್ಯಂತ ಕಟ್ಟೆಚ್ಚರ
ಮೈಸೂರು

ಡ್ರಗ್ಸ್ ದಂಧೆ: ಮೈಸೂರು ನಗರ, ಜಿಲ್ಲೆಯಾದ್ಯಂತ ಕಟ್ಟೆಚ್ಚರ

September 15, 2020

ಮೈಸೂರು, ಸೆ.14(ಆರ್‍ಕೆ)- ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದ ತನಿಖೆ ತೀವ್ರಗೊಂಡಿ ರುವ ಹಿನ್ನೆಲೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ರೆಸಾರ್ಟ್ ಮತ್ತು ರೆಸ್ಟೋರೆಂಟ್‍ಗಳ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತ ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು, ಕೇರಳ-ಕರ್ನಾಟಕ ಗಡಿಯ ಬಾವಲಿ ಚೆಕ್‍ಪೋಸ್ಟ್‍ನಲ್ಲಿ ವಾಹನಗಳ ತಪಾಸಣೆ ತೀವ್ರಗೊಳಿಸಿರುವುದಲ್ಲದೆ, ರೆಸಾರ್ಟ್‍ಗಳ ಮೇಲೆ ನಿಗಾ ಇಟ್ಟಿದ್ದೇವೆ ಎಂದು ತಿಳಿಸಿದರು.

ಹೊರಗಡೆಯಿಂದ ಡ್ರಗ್ಸ್ ತಂದು ರೆಸಾರ್ಟ್‍ಗಳಲ್ಲಿ ಸೇವನೆ ಮಾಡಿದರೆ ಅಥವಾ ಡ್ರಗ್ಸ್ ಸಂಬಂಧ ಯಾವುದೇ ಸುಳಿವು ದೊರೆತರೆ, ಆರೋಪಿ ಜೊತೆಗೆ ರೆಸಾರ್ಟ್ ಮಾಲೀ ಕರನ್ನೂ ಆರೋಪಿಯನ್ನಾಗಿ ಮಾಡಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡ ಲಾಗಿದೆ. ಅದಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

ತಡರಾತ್ರಿ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ. ಅಂತರರಾಜ್ಯ ಡ್ರಗ್ ಮಾಫಿಯಾ ಪತ್ತೆಗೂ ವ್ಯಾಪಕ ಶೋಧ ನಡೆಯುತ್ತಿದೆ ಎಂದು ಎಸ್‍ಪಿ ಸಿ.ಬಿ.ರಿಷ್ಯಂತ್ ತಿಳಿಸಿದರು.

ಕಬಿನಿ ಮತ್ತು ಬೈಲಕುಪ್ಪೆ ಭಾಗದ ರೆಸಾರ್ಟ್‍ಗಳ ಮೇಲೆ ಆಯಾ ಸರಹದ್ದಿನ ಠಾಣಾ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರೆಸ್ಟೋರೆಂಟ್‍ಗಳಲ್ಲೂ ಶೋಧ ನಡೆಸಿ ಪರಿಶೀಲನೆ ನಡೆಸುವ ಜತೆಗೆ ಆಯಾ ರೆಸಾರ್ಟ್‍ಗಳ ಮಾಲೀಕರಿಗೂ ತಿಳುವಳಿಕೆ ನೀಡಲಾಗಿದೆ ಎಂದರು. ಅದೇ ರೀತಿ ಮೈಸೂರು ನಗರದಲ್ಲೂ ಪೊಲೀಸರು ನಿಗಾ ವಹಿ ಸಿದ್ದು, ಸಂಪರ್ಕ ರಸ್ತೆಗಳ ಚೆಕ್‍ಪೋಸ್ಟ್‍ಗಳಲ್ಲಿ ಸಂಶಯಾಸ್ಪದ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಗುತ್ತಿದೆ. ಗಾಂಜಾ, ಅಫೀಮು, ಡ್ರಗ್ಸ್‍ನಂತಹ ಮಾದಕ ವಸ್ತುಗಳ ಸಾಗಣೆ, ಸೇವನೆ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Translate »