ಅನಂತಕುಮಾರ್ ಹೆಗಡೆ ಸೇರಿದಂತೆ ದೇಶದ 30 ಸಂಸದರಿಗೆ ಕೊರೊನಾ ಸೋಂಕು ದೃಢ!
ಮೈಸೂರು

ಅನಂತಕುಮಾರ್ ಹೆಗಡೆ ಸೇರಿದಂತೆ ದೇಶದ 30 ಸಂಸದರಿಗೆ ಕೊರೊನಾ ಸೋಂಕು ದೃಢ!

September 15, 2020

ನವದೆಹಲಿ, ಸೆ.14-ದೇಶದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದ್ದು, ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ ಕನಿಷ್ಠ 30 ಲೋಕಸಭಾ ಸದಸ್ಯರಿಗೆ ಮಾರಣಾಂತಿಕ ಕೊರೊನಾ ಸೋಂಕು ತಗುಲಿ ರುವುದು ದೃಢಪಟ್ಟಿದೆ. ಇಂದು ಪ್ರಾರಂಭವಾದ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ನಡೆಸಲಾದ ಕಡ್ಡಾಯ ಕೊರೊನಾ ಪರೀಕ್ಷೆಗಳಲ್ಲಿ 30 ಸಂಸದರಿಗೆ ಕೊರೊನಾ ತಗುಲಿರುವುದು ಖಚಿತ ವಾಗಿದೆ ಎನ್ನಲಾಗುತ್ತಿದೆ. ಸೋಂಕಿತರ ಪೈಕಿ 12 ಜನ ಬಿಜೆಪಿ ಸಂಸದರಾದರೆ, ವೈಎಸ್‍ಆರ್ ಕಾಂಗ್ರೆಸ್ ಪಕ್ಷದ 2, ಶಿವಸೇನೆಯ 2 ಹಾಗೂ ಓರ್ವ ಡಿಎಂಕೆ ಸಂಸದರಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಸೋಂಕು ಪೀಡಿತ ಸಂಸದರಿಗೆ ಸಂಸತ್ ಪ್ರವೇಶ ನಿರಾಕರಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.

ಕೊರೊನಾ ಕುರಿತು ಮುನ್ನೆಚ್ಚರಿಕಾ ಕ್ರಮವಾಗಿ ಈ ವರ್ಷದ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಸರ್ಕಾರ ಹಲವಾರು ಬದಲಾವಣೆಗಳನ್ನು ಘೋಷಿಸಿದ್ದು, ಸಂಸದರು, ಸಂಸತ್ತಿನ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಗೆ ಕಡ್ಡಾಯ ಕೊರೊನಾ ಪರೀಕ್ಷೆಗೆ ಒಳ ಗಾಗಬೇಕು ಎನ್ನಲಾಗಿತ್ತು. ಅಲ್ಲದೆ, ಸಂಸದರು ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು ಎಂದು ತಿಳಿಸಿದ್ದ ಕೇಂದ್ರ ಸರ್ಕಾರ ಸಂದರ್ಶಕರ ಆಗಮನಕ್ಕೂ ನಿರ್ಬಂಧ ಹೇರಿತ್ತು.

ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದರು. ಅಲ್ಲದೆ, ಸಂಸತ್ ಅಧಿವೇಶನ ಪ್ರಾರಂಭವಾಗುವ ಮೊದಲು 2 ದಿನಗಳ ಕಾಲ ಸಂಪೂರ್ಣ ವೈದ್ಯಕೀಯ ತಪಾಸಣೆ ಗಾಗಿ ಶನಿವಾರ ರಾತ್ರಿ ಅವರನ್ನು ಮತ್ತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿಂದೆ ಕರ್ನಾಟಕದಲ್ಲೂ ಸಹ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಕೊರೊನಾ ಸೋಂಕಿಗೆ ತುತ್ತಾಗಿ, ಚಿಕಿತ್ಸೆ ಪಡೆದು ಗುಣಮುಖರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

 

 

Translate »