ನ್ಯಾ.ಸದಾಶಿವ ಆಯೋಗದ ವರದಿ; ಒಳಮೀಸಲಾತಿ ಮೊದಲು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಲಿ
ಮೈಸೂರು

ನ್ಯಾ.ಸದಾಶಿವ ಆಯೋಗದ ವರದಿ; ಒಳಮೀಸಲಾತಿ ಮೊದಲು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಲಿ

September 15, 2020

ಮೈಸೂರು, ಸೆ.14(ಪಿಎಂ)-ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಹಾಗೂ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಮುಂದಾಗದೇ, ಮೊದಲು ಈ ಸಂಬಂಧ ಕನಿಷ್ಠ 6 ತಿಂಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಲು ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ಆದಿಕರ್ನಾಟಕ ಮಹಾಸಭಾ ಒತ್ತಾಯಿಸಿದೆ.

ಈ ಸಂಬಂಧ ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಮಾಜಿ ಮೇಯರ್ ಹಾಗೂ ಮಹಾಸಭಾದ ಅಧ್ಯಕ್ಷ ಪುರುಷೋತ್ತಮ್, ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಯಾಗಬೇಕೆಂದು ರಾಜ್ಯದ ಉದ್ದಗಲಕ್ಕೂ ಇಂದು ಚರ್ಚೆಯಾಗುತ್ತಿದೆ. ಈ ವಿಚಾರ ಮುಂದಿಟ್ಟುಕೊಂಡು ಪರಿಶಿಷ್ಟ ಜಾತಿಯ ಎಡಗೈ ಮತ್ತು ಬಲಗೈ ಸಮುದಾಯಗಳ ನಡುವೆ ರಾಜಕೀಯ ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿಗೆ ನಿಗದಿಗೊಳಿಸಿರುವ ಮೀಸಲಾತಿ ಯನ್ನೇ ಹಂಚಿಕೆ ಮಾಡಬೇಕೆಂದು ಎಲ್ಲಿಯೂ ದಾಖ ಲಾಗಿಲ್ಲ. ಎಡಗೈ ಮತ್ತು ಬಲಗೈ ಎರಡೂ ಸಮುದಾಯ ದವರು ಒಂದೇ ಕುಟುಂಬದ ಸಹೋದರರು. ಇಂತಹ ಸಮು ದಾಯಗಳನ್ನು ಒಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಯು ತ್ತಿದೆ. ನಾವು ಒಗ್ಗಟ್ಟಾಗಿದ್ದರೆ ರಾಜ್ಯದಲ್ಲಿ ನಮ್ಮದು ಪ್ರಬಲ ವಾದ ಜನಸಂಖ್ಯೆಯಾಗುತ್ತದೆ ಎಂಬ ಕಾರಣಕ್ಕೆ ಇಬ್ಭಾಗ ಮಾಡುವ ಹುನ್ನಾರ ನಡೆಸಲಾಗುತ್ತಿದೆ ಎಂದು ದೂರಿದರು.

ನಮ್ಮ ಎರಡೂ ಸಮುದಾಯಗಳ ನಾಯಕರು ಒಳ ಮೀಸಲಾತಿ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಆದರೆ ಬೇರೆ ಸಮುದಾಯದ ಕೆಲವರು ರಾಜಕೀಯ ಉದ್ದೇಶಕ್ಕಾಗಿ ಈ ವಿಚಾರ ಮುನ್ನೆಲೆಗೆ ತರುತ್ತಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಎರಡೂ ಸಮುದಾಯದ ಸಹೋದರರು ಉತ್ಪ್ರೇಕ್ಷೆಗೆ ಒಳಗಾಗಬಾರದು ಎಂದು ಮನವಿ ಮಾಡಿದರು.

ಪ್ರಮುಖ 3 ಪಕ್ಷಗಳು ನಮ್ಮ ಎರಡೂ ಸಮುದಾಯ ಗಳಿಗೆ ಸೂಕ್ತ ರಾಜ ಕೀಯ ಸ್ಥಾನಮಾನ ನೀಡಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದರೂ ನ್ಯಾಯ ಸಮ್ಮತವಾಗಿ ಮೀಸಲಾತಿ ಈವರೆಗೆ ಅನುಷ್ಠಾನಗೊಂಡಿಲ್ಲ. ಪರಿಶಿಷ್ಟ ಜಾತಿಗೆ ಕಲ್ಪಿಸಿರುವ ಶೇ.15ರಷ್ಟು ಮೀಸಲಾತಿಯ ಪ್ರಯೋಜನ ಅಸ್ಪøಶ್ಯತೆ ನೋವುಂಡ ಜಾತಿಗಳಿಗೆ ಸೀಮಿತ ವಾಗಬೇಕು. ಆದರೆ ಸ್ಪøಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಿ ನಮ್ಮನ್ನು ಹಕ್ಕಿನಿಂದ ವಂಚಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸ್ಪøಶ್ಯ ಜಾತಿಗಳಿಗೆ ಮೀಸ ಲಾತಿ ನೀಡಬೇಕೆಂದಿದ್ದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಆದರೆ ಹಾಗೆ ಮಾಡದೇ ನಮಗೆ ಅನ್ಯಾಯ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನಿರ್ಣಯ: ಸೆ.12ರಂದು ಮೈಸೂರಿನ ಉರಿಲಿಂಗ ಪೆದ್ದಿಮಠದಲ್ಲಿ ರಾಜ್ಯ ಆದಿಕರ್ನಾಟಕ ಮಹಾಸಭಾ ಪದಾಧಿಕಾರಿಗಳು, ಹಿರಿಯ ಮುಖಂಡರು, ಸಾಹಿತಿ ಗಳು, ಚಿಂತಕರು ಹಾಗೂ ವಿದ್ಯಾರ್ಥಿ ಮುಖಂಡರು ಸಭೆ ಸೇರಿ ನ್ಯಾ.ಸದಾಶಿವ ಆಯೋಗದ ವರದಿ ಹಾಗೂ ಒಳಮೀಸಲಾತಿ ಜಾರಿ ಕುರಿತು ಕೆಲ ನಿರ್ಣಯ ಕೈಗೊಳ್ಳ ಲಾಗಿದೆ ಎಂದು ಪುರುಷೋತ್ತಮ್ ತಿಳಿಸಿದರು.

ಭಂತೇ ಬೋದಿದತ್ತ ಹಾಗೂ ಜ್ಞಾನಪ್ರಕಾಶ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸದಾಶಿವ ಆಯೋಗದ ವರದಿ ಸಂಬಂಧ ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸ ಬೇಕು. ಜನಸಂಖ್ಯೆ, ಉದ್ಯೋಗ ಮತ್ತು ವಿದ್ಯಾರ್ಹತೆ ಅನ್ವಯ ಸೌಲಭ್ಯಗಳ ಅಂಕಿ-ಅಂಶಗಳನ್ನು ವರದಿಯಲ್ಲಿ ಸೇರಿಸಬೇಕು. ಒಳಮೀಸಲಾತಿ ಸಂವಿಧಾನಬದ್ಧ ವಾಗಿದೆಯೇ? ಎಂದು ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಒತ್ತಾಯಿಸಲು ತೀರ್ಮಾನಿಸ ಲಾಗಿದೆ ಎಂದರು. ಮೈಸೂರು ಎಪಿಎಂಸಿ ಮಾಜಿ ಅಧ್ಯಕ್ಷ ಜವರಪ್ಪ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಎಸ್.ಮರಿದೇವಯ್ಯ, ಮಹಾಸಭಾದ ಸಂಚಾ ಲಕ ಸೋಮಯ್ಯ ಮಲೆಯೂರು ಗೋಷ್ಠಿಯಲ್ಲಿದ್ದರು.

Translate »