ಚಿತ್ರದುರ್ಗ, ಜ.3- ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರ ಆರೋಗ್ಯದಲ್ಲಿ ಹಠಾತ್ತನೇ ಏರುಪೇರಾಗಿದ್ದು, ಅವ ರನ್ನು ಜೀರೋ ಟ್ರಾಫಿಕ್ ನಲ್ಲಿ ಚಿತ್ರದುರ್ಗದಿಂದ ಆಂಬುಲೆನ್ಸ್‍ನಲ್ಲಿ ಬೆಂಗ ಳೂರಿಗೆ ಕರೆದೊಯ್ದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಬೆಂಗಳೂರಿಗೆ ವಾಪಸ್ಸಾ ಗುತ್ತಿದ್ದಾಗ ಚಿತ್ರದುರ್ಗದ ಹೋಟೆಲ್ ನವೀನ್ ರೇಜನ್ಸಿಗೆ ಮಧ್ಯಾಹ್ನ ಊಟಕ್ಕೆ ಬಂದಿ ದ್ದರು. ಅವರು ಕಾರಿನಿಂದ ಇಳಿಯುವಾಗ ಏಕಾಏಕಿ ತೀವ್ರ ಅಸ್ವಸ್ಥರಾಗಿ ಪ್ರಜ್ಞೆ ತಪ್ಪಿದರು. ತಕ್ಷಣವೇ ಅವರನ್ನು ಚಿತ್ರ ದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಯಿತು. ಡಾ.ಅಭಿಷೇಕ್ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಗೌಡರು ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ವೈದ್ಯರ ಜೊತೆ ಮಾತನಾಡಿದ್ದಲ್ಲದೇ, ಜ್ಯೂಸ್ ಸೇವಿಸಿದರು. ಆ ನಂತರ ಅವರನ್ನು ಆಂಬುಲೆನ್ಸ್‍ನಲ್ಲಿ ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಹೆಬ್ಬಾಳ ಬಳಿಯಿರುವ ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಯಿತು. ಗೌಡರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಕ್ಷೇಮವಾಗಿದ್ದಾರೆ ಎಂದು ಸದಾನಂದಗೌಡರ ಪುತ್ರ ಕಾರ್ತಿಕ್‍ಗೌಡ ಮಾಧ್ಯಮಗಳಿಗೆ ತಿಳಿಸಿದರು.