ಮಕ್ಕಳು ಸೇರಿ 7 ಮಂದಿ ಸಾವು
ಮೈಸೂರು

ಮಕ್ಕಳು ಸೇರಿ 7 ಮಂದಿ ಸಾವು

January 4, 2021

ಮಡಿಕೇರಿ,ಜ.3-ಕೊಡಗು ಜಿಲ್ಲೆಗೆ ಬರುತ್ತಿದ್ದ ಮದುವೆ ದಿಬ್ಬಣ ಬಸ್‍ವೊಂದು ಇಳಿಜಾರಿನಲ್ಲಿ ಬ್ರೇಕ್ ವಿಫಲಗೊಂಡು ಮನೆಯೊಂದರ ಮೇಲೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 7 ಮಂದಿ ಮೃತಪಟ್ಟ ಘಟನೆ ಕೇರಳದ ಕಾಸರಗೋಡು ಪಾಣತ್ತೂರು ಪೆರಿಯಾರಂ ಬಳಿ ನಡೆದಿದೆ.

ಮೃತರನ್ನು ಆದರ್ಶ್(12), ಶ್ರೇಯಸ್(13), ರವಿ ಚಂದ್ರನ್(40), ರಾಜೇಶ್(45), ಸುಮತಿ(50), ಜಯ ಲಕ್ಷ್ಮಿ(39) ಮತ್ತು ಶಶಿ(35) ಎಂದು ಗುರುತಿಸಲಾಗಿದೆ. ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಕೂಡ ಮೃತಪಟ್ಟಿದ್ದು, ಸಾವನ್ನಪ್ಪಿದವರ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಗಾಯಾಳು ಗಳ ಪೈಕಿ 10 ಮಂದಿಯ ಸ್ಥಿತಿ ಗಂಭೀರವಾಗಿದೆ. ಬಸ್ ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರಿಗೂ ತೀವ್ರ ತರಹದ ಗಾಯಗಳಾಗಿದ್ದು, ಅವರÀನ್ನು ಕಾಞಂಗಾಡು ಸರ್ಕಾರಿ ಆಸ್ಪತ್ರೆ ಹಾಗೂ ಮಂಗಳೂರು ಆಸ್ಪತ್ರೆಗಳಿಗೆ ದಾಖಲಿ ಸಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ವಿವರ: ಕೊಡಗು ಜಿಲ್ಲೆಯ ಕರಿಕೆ ಗ್ರಾಮ ಪಂಚಾ ಯಿತಿಯಲ್ಲಿ ವಾಟರ್‍ಮೆನ್ ಆಗಿ ಕೆಲಸ ನಿರ್ವಹಿಸುವ ಪ್ರಶಾಂತ್ ಅವರ ವಿವಾಹ ಕೊಡಗಿನ ಕರಿಕೆ ಸಮೀಪದ ಚೆತ್ತುಕಾಯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಮದುವೆ ಸಮಾ ರಂಭಕ್ಕೆ ವಧುವಿನ ಊರಾದ ಈಶ್ವರ ಮಂಗಲದಿಂದ ಖಾಸಗಿ ಬಸ್‍ನಲ್ಲಿ ಸುಳ್ಯಾದ ಆಲೆಟ್ಟಿ ಮೂಲಕ ಕೇರಳದ ಪಾಣ ತ್ತೂರು ಮಾರ್ಗವಾಗಿ ದಿಬ್ಬಣ ಬಸ್‍ನಲ್ಲಿ 60 ಮಂದಿ ಆಗಮಿಸುತ್ತಿದ್ದರು ಎನ್ನಲಾಗಿದೆ. ಮದುವೆ ವಧು ಮತ್ತು ಕೆಲವರು ಬೇರೊಂದು ಟೆಂಪೋ ಟ್ರ್ಯಾವಲರ್ ವಾಹನದಲ್ಲಿ ಇತ್ತ ಕಡೆ ಬರುತ್ತಿದ್ದು, ಈ ವಾಹನವನ್ನು ಬಸ್ ಹಿಂಬಾಲಿಸುತ್ತಿತ್ತು ಎನ್ನಲಾಗಿದೆ. ಕಲ್ಲಪಳ್ಳಿ-ಪಾಣತ್ತೂರು ರಸ್ತೆಯ ಪೆರಿಯಾರಂ ಎಂಬ ಸ್ಥಳದ ಇಳಿಜಾರು ರಸ್ತೆಯಲ್ಲಿ ಬಸ್, ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಮರಕ್ಕೆ ಅಪ್ಪಳಿಸಿದೆ. ಬಳಿಕ ಮನೆಯೊಂದರ ಮೇಲೆ ಉರುಳಿ ಬಿದ್ದು ದುರ್ಘಟನೆ ಸಂಭವಿಸಿದೆ. ಘಟನೆ ಬಗ್ಗೆ ಕಾಞಂಗಾಡು ಪೊಲೀಸರು ಪ್ರಕರಣ ದಾಖಲಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Translate »