ಮೈಸೂರು ಶ್ರೀ ಸುತ್ತೂರು ಶಾಖಾಮಠದಲ್ಲಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ
ಮೈಸೂರು

ಮೈಸೂರು ಶ್ರೀ ಸುತ್ತೂರು ಶಾಖಾಮಠದಲ್ಲಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ

August 25, 2020

ಮೈಸೂರು, ಆ. 24- ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಶನಿವಾರ ದಂದು ಪರಿಸರ ಸ್ನೇಹಿ ಅರಿಷಿಣ ಗಣೇಶ ನನ್ನು ಪ್ರತಿಷ್ಠಾಪಿಸಿ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಸ್ನೇಹಿ ಅರಿಷಿಣ ಗಣೇಶನ ಸ್ಥಾಪನೆಗೆ ಕರೆ ನೀಡಿತ್ತು. ಅರಿ ಷಿಣದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಮತ್ತು ವೈರಾಣುಗಳನ್ನು ಕೊಲ್ಲುವ ವಿಶೇಷ ಗುಣಗಳಿರುವುದರಿಂದ ಅರಿಷಿಣ ದಲ್ಲಿ ತಯಾರಿಸಿದ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಶ್ರೀಮಠದ ಗುರುಕುಲ ಸಾಧಕರು ಮತ್ತು ಸೇವಾ ಸಿಬ್ಬಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Translate »