ಮೈಸೂರು,ಆ.24(ಎಂಟಿವೈ)- ಜಿಲ್ಲಾಧಿಕಾರಿಗಳ ಆದೇಶದಂತೆ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ಪಾಲಿಕೆ ವತಿಯಿಂದಲೇ ನೇರವಾಗಿ ವೇತನ ಜಮೆ ಮಾಡುವಂತೆ ಆಗ್ರಹಿಸಿ ಮೈಸೂರು ಪಾಲಿಕೆ ಕಚೇರಿ ಬಳಿ ಆ.26ರಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಮುಂದಿನ ಕೌನ್ಸಿಲ್ ಸಭೆಯಲ್ಲಿ ಪೌರಕಾರ್ಮಿಕರ ಖಾತೆಗೆ ವೇತನ ಜಮೆ ಮಾಡುವ ನಿರ್ಧಾರ ಕೈಗೊಳ್ಳ ದಿದ್ದರೆ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಹೋರಾಟ ನಡೆಸಲು ನಿರ್ಧರಿಸಿರುವುದಾಗಿ ಮೈಸೂರು ನಗರ ಪಾಲಿಕೆ ಖಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾ ಸಂಘದ ರಾಜ್ಯಾಧÀ್ಯP್ಷÀ ನಾರಾಯಣ ಎಚ್ಚರಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಅನುದಾನದ ಅಡಿಯಲ್ಲಿ ನೇಮಕವಾಗಿರುವ ಪೌರಕಾರ್ಮಿಕÀರ ಬ್ಯಾಂಕ್ ಖಾತೆಗೆ ಪಾಲಿಕೆ ವತಿ ಯಿಂದಲೇ ವೇತನ ಪಾವತಿಸುವಂತೆ ಜಿಲ್ಲಾಧಿಕಾರಿ ಗಳು ಆದೇಶ ನೀಡಿ 5 ತಿಂಗಳಾಗಿದೆಯಾದರೂ ಪಾಲಿಕೆ ಇನ್ನೂ ಪೌರಕಾರ್ಮಿಕರ ಖಾತೆಗೆ ವೇತನ ಜಮೆ ಮಾಡದೆ ನಿರ್ಲಕ್ಷಿಸಿದೆ ಎಂದು ಆರೋಪಿಸಿದ ಅವರು, ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಮೈಸೂರು ನಗರ ಪಾತ್ರ ವಾಗಲು ಪೌರಕಾರ್ಮಿಕರ ಪಾತ್ರ ಮಹತ್ವ ಪಡೆದಿದೆ. ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಹಿತ ಕಾಯಲು ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆಗ¸್ಟïನಿಂದಲೇ 1563 ಮಂದಿಗೂ ನೇರ ವೇತನ ಪಾವತಿ ಪೌರಕಾರ್ಮಿಕರ ಖಾತೆಗೆ ಜಮಾ ಆಗಬೇಕು. 231 ಒಳಚರಂಡಿ ಕಾರ್ಮಿಕರಿಗೂ ನೇರವೇತನ ನೀಡಲು ಕೌನ್ಸಿಲ್ ಒಪ್ಪಿಗೆ ಪಡೆಯಬೇಕೆಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿ ಭಟನೆ ನಡೆಸಲು ನಿರ್ಧರಿಸಲಾಗಿದೆ. 2017ರಲ್ಲಿ ರಾಜ್ಯ ಸರ್ಕಾರ ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರನ್ನು ನಿಯೋಜಿಸಿಕೊಳ್ಳದೆ, ನೇರ ವೇತನ ಪಾವತಿ ಮತ್ತು ಪಾಲಿಕೆ ಅನುದಾನದಡಿಯಲ್ಲಿ ಆಯ್ಕೆಮಾಡಿಕೊಂಡು ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳೇ ನೇರವಾಗಿ ವೇತನ ಪಾವತಿ ಮಾಡುವಂತೆ ಆದೇಶ ಹೊರಡಿಸಿತ್ತು. ಆದರೆ ಮೈಸೂರು ಮಹಾನಗರ ಪಾಲಿಕೆ ಸರ್ಕಾರದ ಆದೇಶ ವನ್ನು ಉಲ್ಲಂಘಿಸಿದೆ. ಕಳೆದ ಮಾರ್ಚ್‍ನಲ್ಲಿಯೂ ಜಿಲ್ಲಾಧಿಕಾರಿಗಳು ಪೌರಕಾರ್ಮಿಕರ ಖಾತೆಗೆ ವೇತನ ಜಮೆ ಮಾಡುವಂತೆ ಆದೇಶ ಹೊರಡಿಸಿದ್ದರೂ ಯಾವುದೇ ಕ್ರಮವಹಿಸಿಲ್ಲ ಎಂದು ಆರೋಪಿಸಿದರು.
ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಲು ಈಗಾಗಲೇ ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ. ಆದರೆ ಅಲ್ಲಿಂದ ಕೌನ್ಸಿಲ್‍ಗೆ ಕಡತ ಹೋಗಿಲ್ಲ. ಜೊತೆಗೆ ಕೌನ್ಸಿಲ್ ಸಭೆÉಯಲ್ಲಿ ವಿಷಯ ಚರ್ಚೆಯನ್ನೂ ಮಾಡುತ್ತಿಲ್ಲ. ಪಾಲಿಕೆಯ ಈ ನಿಲುವಿನ ಹಿಂದೆ ಖಾಸಗಿ ಗುತ್ತಿಗೆ ದಾರರ ಲಾಬಿ ಇದೆ. ಹಾಗಾಗಿ ಪಾಲಿಕೆ ಗುತ್ತಿಗೆ ದಾರರ ಲಾಬಿಗೆ ಮಣಿದಿದೆ. ಕೂಡಲೇ ಪಾಲಿಕೆ ಪೌರಕಾರ್ಮಿಕರಿಗೆ ವೇತನ ನೇರ ಪಾವತಿ ಮಾಡುವ ಸಂಬಂಧÀ ಕೌನ್ಸಿಲ್ ಸಭೆ ಕರೆದು, ಒಪ್ಪಿಗೆ ನೀಡಬೇಕು ಎಂದು ನಾರಾಯಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರಪಾಲಿಕೆ ಖಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾ ಸಂಘದ ಉನ್ನತ ಸಮಿತಿ ಅಧ್ಯP್ಷÀ ಎನ್.ಮಾರ, ಅಧ್ಯP್ಷÀ ಜಿ.ಮಹದೇವ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ರಾಜ್ಯ ಉಪಾಧ್ಯಕ್ಷ ಆರ್.ಶಿವಣ್ಣ, ಮೋಹನ್‍ಕುಮಾರ್ ಉಪಸ್ಥಿತರಿದ್ದರು.