ಮೈಸೂರಲ್ಲಿ ದಸಂಸ ಪ್ರತಿಭಟನಾ ಧರಣಿ
ಮೈಸೂರು

ಮೈಸೂರಲ್ಲಿ ದಸಂಸ ಪ್ರತಿಭಟನಾ ಧರಣಿ

August 25, 2020

ಮೈಸೂರು,ಆ.24(ಆರ್‍ಕೆ)-ಉತ್ತರ ಪ್ರದೇ ಶದ ಲಕ್ಷ್ಮೀಪುರ ಕೇರಿ ಜಿಲ್ಲೆಯ ನೇಪಾಳದ ಗಡಿ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ನಂತರ ಕತ್ತು ಹಿಸುಕಿ ಅಮಾನವೀಯವಾಗಿ ಹತ್ಯೆಗೈದ ಕಾಮಾಂಧರನ್ನು ನೇಣಿಗೇರಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಮೈಸೂರಿನ ಜಿಲ್ಲಾಧಿಕಾರಿ ಬಳಿ ಪ್ರತಿಭಟನಾ ಧರಣಿ ನಡೆಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷ ಗಳಾದರೂ ಇಂತಹ ದುಷ್ಕøತ್ಯಗಳು ಆಗಿಂ ದಾಗ್ಗೆ ನಡೆಯುತ್ತಿರುವುದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಮಹಿಳೆ ಯರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ, ಪೋಕ್ಸೋದಂತಹ ಪರಿಣಾಮ ಕಾರಿ ಕಾನೂನು ಜಾರಿಯಲ್ಲಿದ್ದಾಗ್ಯೂ ಲೆಕ್ಕಿ ಸದೆ, ರಾಜಾರೋಷವಾಗಿ ಅತ್ಯಾಚಾರ, ಕೊಲೆ ನಡೆಯುತ್ತಿರುವುದು ಜನರಲ್ಲಿ ಆತಂಕ ಮೂಡಿ ಸಿದೆ ಎಂದು ಧರಣಿನಿರತರು ದೂರಿದರು.

ದಲಿತ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣ ಗಳ ನಿಯಂತ್ರಿಸಲು ಉತ್ತರಪ್ರದೇಶ ಸರ್ಕಾರ ವಿಫಲವಾಗಿರುವುದರಿಂದ ರಾಷ್ಟ್ರಪತಿಗಳು ಆ ಸರ್ಕಾರವನ್ನು ಅಮಾನತ್ತಿನಲ್ಲಿಡಬೇಕೆಂದು ಒತ್ತಾಯಿಸಿದರು. ದಸಂಸ ಜಿಲ್ಲಾ ಸಂಚಾಲಕ ರಾದ ಎಸ್.ನಾಗರಾಜು, ಡಿ.ಎನ್.ಬಾಬು, ಮಹದೇವ, ಮುಖಂಡರಾದ ಗುರುದತ್ ಮೂರ್ತಿ, ಎ.ಮಂಜುನಾಥ, ಮಂಜು ದ್ರಾವಿಡ, ರಾಮಚಂದ್ರ, ರಾಮಣ್ಣ, ಮಹೇಂದ್ರಕುಮಾರ್, ಹರೀಶ್‍ಕುಮಾರ್, ನವೀನ್‍ಕುಮಾರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿ ಕಚೇರಿ ಸಹಾ ಯಕರಿಗೆ ಮನವಿ ಪತ್ರ ಸಲ್ಲಿಸಿದರು.

Translate »