ಬೆಂಗಳೂರು, ಅ.5- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್‍ಗೆ ಕೊರೊನಾ ಸೋಂಕು ದೃಢ ಪಟ್ಟಿದ್ದು, ಸದ್ಯ ಹೋಂ ಕ್ವಾರಂಟೈನ್‍ಗೆ ಒಳಗಾಗಿ ದ್ದಾರೆ. ಇಂದು ತಮ್ಮ ಫೇಸ್‍ಬುಕ್ ಮತ್ತು ಟ್ವಿಟರ್ ಅಕೌಂಟ್‍ನಲ್ಲಿ ಈ ವಿಚಾರ ವನ್ನು ಸುರೇಶ್‍ಕುಮಾರ್ ತಿಳಿಸಿದ್ದಾರೆ. ನನಗೆ ರೋಗದ ಯಾವುದೇ ಲಕ್ಷಣ ಗಳಿಲ್ಲ. ಆದರೂ ಕೊವಿಡ್-19 ಸೋಂಕು ಇರುವುದರಿಂದ ವೈದ್ಯರ ಸಲಹೆಯ ಮೇರೆಗೆ ಹೋಂ ಕ್ವಾರಂಟೈನ್ ಆಗು ತ್ತಿದ್ದೇನೆ. ಯಾವುದೇ ಆತಂಕವಿಲ್ಲ ಎಂದಿದ್ದಾರೆ. ಸಚಿವ ಸುರೇಶ್‍ಕುಮಾರ್ ಅವರು ಇತ್ತೀಚೆಗೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಕಾರ್ಯನಿಮಿತ್ತ ಭೇಟಿ ಕೊಡುತ್ತಲೇ ಇದ್ದಾರೆ. ಎರಡು ದಿನಗಳ ಹಿಂದಷ್ಟೇ ಚಾಮರಾಜನಗರದ ಹನೂರು ತಾಲೂಕಿಗೆ ಭೇಟಿ ನೀಡಿದ್ದರು. ಮೆದಗ ಲಾಣೆ, ಇಂಡಿಗನತ್ತ, ತೊಳಸಿನಕೆರೆ ಗ್ರಾಮಗಳಿಗೆ ತೆರಳಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದರು. ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಜಾನು ವಾರು ಮೇವು ಸೇರಿ ಹಲವು ವಿಚಾರ ಗಳ ಬಗ್ಗೆ ಹಳ್ಳಿಗರು ಸಚಿವರಿಗೆ ಅಹ ವಾಲು ಸಲ್ಲಿಸಿದ್ದರು. ಕಳೆದ ವಾರದಿಂ ದಲೂ ಬೀದರ್, ಮುದ್ದೇನಹಳ್ಳಿ ಸೇರಿ ಕೆಲವೆಡೆ ಪ್ರವಾಸ ಮಾಡುತ್ತಲೇ ಇದ್ದಾg