ಕಲ್ಯಾಣ ಮಂಟಪಗಳ ಪ್ರಸಕ್ತ ವರ್ಷದ ಕಂದಾಯ ಮನ್ನಾಕ್ಕೆ ಮನವಿ
ಮೈಸೂರು

ಕಲ್ಯಾಣ ಮಂಟಪಗಳ ಪ್ರಸಕ್ತ ವರ್ಷದ ಕಂದಾಯ ಮನ್ನಾಕ್ಕೆ ಮನವಿ

October 6, 2020

ಮೈಸೂರು, ಅ.5(ಎಸ್‍ಬಿಡಿ)- ಕಲ್ಯಾಣ ಮಂಟಪಗಳ ಪ್ರಸಕ್ತ ವರ್ಷದ ಕಂದಾಯ ರದ್ದುಪಡಿಸುವಂತೆ ಕೋರಿ ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ವತಿಯಿಂದ ಮೇಯರ್ ತಸ್ನೀಂ ಹಾಗೂ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರಿಗೆ ಮನವಿ ಸಲ್ಲಿಸಲಾಯಿತು.

ಕೊರೊನಾ ಪರಿಣಾಮದಿಂದಾಗಿ ಕಲ್ಯಾಣ ಮಂಟಪಗಳ ನಿರ್ವಹಣೆ ಕಷ್ಟವಾಗಿದೆ. ಮಾರ್ಚ್‍ನಿಂದ ಕಾಯ್ದಿರಿಸಿದ್ದ ಎಲ್ಲಾ ಸಮಾ ರಂಭಗಳೂ ರದ್ದಾಗಿರುವುದರಿಂದ ಮಾಲೀ ಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರ್ಯಕ್ರಮಗಳಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಜನ ಸೇರಲು ಅವಕಾಶವಿರುವುದರಿಂದ 2021ರ ಮಾರ್ಚ್‍ವರೆಗೂ ಕಲ್ಯಾಣ ಮಂಟಪಗಳಲ್ಲಿ ಕಾರ್ಯಕ್ರಮ ಮಾಡಲು ಯಾರೂ ಮುಂದೆ ಬರುವುದಿಲ್ಲ ಎಂದು ಅಲವತ್ತುಕೊಳ್ಳಲಾಗಿದೆ. ಕಲ್ಯಾಣ ಮಂಟಪ ದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮ ಗಳಿಗೂ ಜಿಎಸ್‍ಟಿ ಪಾವತಿಸಬೇಕು. ವಿದ್ಯುತ್, ನೀರಿನ ಶುಲ್ಕ, ಪಾಲಿಕೆ ಕಂದಾಯ, ಉದ್ದಿಮೆ ಪರವಾನಗಿ, ಉದ್ದಿಮೆ ತೆರಿಗೆ, ಆದಾಯ ತೆರಿಗೆ, ಬ್ಯಾಂಕಿನ ಸಾಲ, ಸಿಬ್ಬಂದಿಗೆ ವೇತನ ಇನ್ನಿತರ ವೆಚ್ಚ ಭರಿಸಲಾಗದೆ ಮಾಲೀಕರು ಕಂಗಾಲಾಗಿದ್ದಾರೆ. ಮೈಸೂರು ನಗರದಲ್ಲಿ ಮಾತ್ರ ದೊಡ್ಡ ಕಟ್ಟಡ ಹಾಗೂ ಕಲ್ಯಾಣ ಮಂಟಪಗಳನ್ನು ಸೂಪರ್ ಕಮ ರ್ಷಿಯಲ್ ಎಂದು ಘೋಷಿಸಿರುವುದು ಮತ್ತಷ್ಟು ಹೊರೆಯಾಗಿದೆ. ಹಾಗಾಗಿ ಪ್ರಸಕ್ತ ವರ್ಷದ ಕಂದಾಯವನ್ನು ರದ್ದು ಮಾಡುವು ದರ ಜೊತೆಗೆ ಇನ್ನು ಮುಂದೆ ಕಲ್ಯಾಣ ಮಂಟಪಗಳನ್ನು ಸೂಪರ್ ಕಮರ್ಷಿಯಲ್ ಎಂದು ಪರಿಗಣಿಸದೆ, ಸಾಮಾನ್ಯ ತೆರಿಗೆ ವಿಧಿಸಬೇಕೆಂದು ಮನವಿ ಮಾಡಲಾಗಿದೆ.

ನವೀಕರಣ ಕೈಬಿಡಿ: ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಹೋಟೆಲ್, ವಸತಿ ಗೃಹ, ಸ್ವೀಟ್ಸ್ ಅಂಗಡಿ, ಬೇಕರಿ ರೆಸ್ಟೋರೆಂಟ್ ಗಳ ವ್ಯವಹಾರ ಶೋಚನೀಯ ಸ್ಥಿತಿ ತಲುಪಿದೆ. ಈ ಸಂದರ್ಭದಲ್ಲಿ ಟ್ರೇಡ್ ಲೈಸನ್ಸ್ ಮಾಡಿ ಸಲು ಹಾಗೂ ನವೀಕರಿಸುವ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಬಡ್ಡಿ, ದಂಡವನ್ನು ವಿಧಿಸ ಲಾಗುತ್ತಿದೆ. ಸಿಆರ್ ಇಲ್ಲದ ಕಟ್ಟಡಗಳಿಗೆ ದುಪ್ಪಟ್ಟು ಕಂದಾಯ ವಸೂಲಿ ಮಾಡಲಾಗುತ್ತಿದೆ. ವ್ಯಾಪಾರಿಗಳಿಗೆ ನೆರವಾಗುವ ನಿಟ್ಟಿನಲ್ಲಿ 2019 -20ನೇ ಸಾಲಿನ ಲೈಸನ್ಸ್ ನವೀಕರಣ ಕೈಬಿಡ ಬೇಕು, ಬಡ್ಡಿ, ದಂಡ ವಸೂಲಿ ಮಾಡಬಾ ರದು ಎಂದು ಹೋಟೆಲ್ ಮಾಲೀಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

 

Translate »