ಕೊರೊನಾ ಸಂತ್ರಸ್ತರ ನೆರವಿಗೆ ವೃದ್ಧಾಪ್ಯ ವೇತನದಲ್ಲಿ 500 ರೂ. ನೀಡಿದ ಹಿರಿಯ ಜೀವ
ಮೈಸೂರು

ಕೊರೊನಾ ಸಂತ್ರಸ್ತರ ನೆರವಿಗೆ ವೃದ್ಧಾಪ್ಯ ವೇತನದಲ್ಲಿ 500 ರೂ. ನೀಡಿದ ಹಿರಿಯ ಜೀವ

May 30, 2020

ಮೈಸೂರು, ಮೇ 29(ಎಂಟಿವೈ)- ನಗರದ ವೃದ್ಧೆ ಯೊಬ್ಬರು ತಾವೇ ಕಷ್ಟದಲ್ಲಿದ್ದರೂ ಕೊರೊನಾ ಸಂತ್ರಸ್ತರಿಗೆ ನೆರವಾಗಲು ಸಂಸ್ಥೆಯೊಂದಕ್ಕೆ ತಮ್ಮ ವೃದ್ಧಾಪ್ಯ ವೇತನದಿಂದಲೇ 500 ರೂ. ನೀಡುವ ಮೂಲಕ ಹೃದಯ ವೈಶಾಲ್ಯ ಪ್ರದರ್ಶಿಸಿದ್ದು, ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಜನರು ತತ್ತರಿಸಿದ್ದು, ಹಲವರು ಊಟಕ್ಕೂ ಪರ ದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬಸ್, ರೈಲು ನಿಲ್ದಾಣ ಸೇರಿ ದಂತೆ ವಿವಿಧೆಡೆ ನಿರಾಶ್ರಿತರಾಗಿದ್ದವರ ಪಾಡು ಹೇಳ ತೀರದ್ದಾಗಿತ್ತು. ಇದರ ನಡುವೆ ಮಕ್ಕ ಳಿಂದ ಪ್ರತ್ಯೇಕಿ ಸಲ್ಪಟ್ಟ ಹಿರಿಯ ನಾಗರೀಕರು ಹೊಟ್ಟೆ ತುಂಬಿಸಿಕೊಳ್ಳಲು ಪಟ್ಟ ಪಾಡು ಅಷ್ಟಿಷ್ಟಲ್ಲ.

ಮೈಸೂರಿನ ಚೆÀನ್ನಗಿರಿಕೊಪ್ಪಲು ನಿವಾಸಿ, 70 ವರ್ಷದ ಕಮಲಮ್ಮ ತಾವೇ ಕಡುಕಷ್ಟದಲ್ಲಿದ್ದರೂ ಇತರರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ತಮಗೆ ಸರ್ಕಾರದಿಂದ ಬರುವ ವೃದ್ಧಾಪ್ಯ ವೇತನದ ಹಣದಲ್ಲೇ 500 ರೂ. ನೆರವು ನೀಡುವ ಮೂಲಕ ಮಾದರಿ ಎನಿಸಿದ್ದಾರೆ. ಪತಿ ನಿಧನಾನಂತರ ಚೆನ್ನಗಿರಿ ಕೊಪ್ಪಲಿನಲ್ಲಿ ವಾಸಿ ಸುತ್ತಿರುವ ಕಮಲಮ್ಮ ಸ್ವಾವಲಂಬಿಯಾಗಿ ಬದುಕ ಬೇಕೆಂಬ ಹಠ ಹೊಂದಿದ ಹಿರಿಯ ಜೀವ. ಇಬ್ಬರು ಗಂಡು ಮಕ್ಕಳಿದ್ದರೂ ಪ್ರತ್ಯೇಕವಾಗಿ ವಾಸಿಸುತ್ತಿರುವ ಇವರು, ಐದಾರು ಮನೆಗಳಲ್ಲಿ ಕೆಲಸ ಮಾಡಿ ಜೀವನದ ಬಂಡಿ ಸಾಗಿಸಲು ಬೇಕಾದಷ್ಟು ಸಂಪಾದಿಸುತ್ತಿದ್ದರು. ಮೈಸೂರಲ್ಲಿ ಲಾಕ್‍ಡೌನ್ ಜಾರಿಯಾದ ಬಳಿಕ ಮನೆ ಗೆಲಸಕ್ಕೆ ಸೇರಿಸಿಕೊಳ್ಳದ ಕಾರಣ ಮನೆ ಯಲ್ಲಿಯೇ ದಿನದೂಡುತ್ತಿದ್ದರು. ಕೆಲವು ದಿನ ಊಟ, ತಿಂಡಿಗೆ ತಾವೇ ವ್ಯವಸ್ಥೆ ಮಾಡಿಕೊಂಡಿದ್ದರು. ಮೂರು ತಿಂಗ ಳಿಂದ ಸರ್ಕಾರದ ವೃದ್ಧಾಪ್ಯ ವೇತನವೂ ಬಾರ ದಿದ್ದಾಗ ಕಷ್ಟಕ್ಕೆ ಸಿಲುಕಿದರು. ಇವರ ಕಷ್ಟ ಗಮನಿಸಿದ ಸ್ಥಳೀಯರೊಬ್ಬರು ರೋಟರಿ ಹೆರಿಟೇಜ್ ಕ್ಲಬ್ ಸದಸ್ಯರಿಗೆ ಮಾಹಿತಿ ನೀಡಿದ್ದರು.

ರೋಟರಿ ಹೆರಿಟೇಜ್ ಕ್ಲಬ್ ಅಧ್ಯಕ್ಷ ತಲಕಾಡು ಮಂಜುನಾಥ್ ನೇತೃತ್ವದ ತಂಡದ ಸದಸ್ಯರು ಕಮಲಮ್ಮ ಅವರ ಮನೆ ಬಾಗಿಲಿಗೆ ಪ್ರತಿದಿನ ಆಹಾರ ಪೊಟ್ಟಣ ನೀಡಲಾರಂಭಿಸಿದರು. 15 ದಿನದ ಹಿಂದೆ ಬ್ಯಾಂಕ್ ಖಾತೆಗೆ ವೃದ್ಧಾಪ್ಯ ವೇತನದ ಹಣ ಜಮಾ ಆಗಿರುವುದನ್ನು ಅರಿತ ಕಮಲಮ್ಮ, 1 ತಿಂಗಳ ಹಣ ವನ್ನು ರೋಟರಿ ಹೆರಿಟೇಜ್ ಕ್ಲಬ್‍ಗೆ ನೀಡಲು ನಿರ್ಧ ರಿಸಿದ್ದಾರೆ. ಸ್ಥಳೀಯ ಮುಖಂಡ ಮಹದೇವು ಅವ ರಿಗೆ ಹೇಳಿ ರೋಟರಿ ಹೆರಿಟೇಜ್ ಕ್ಲಬ್ ಸದಸ್ಯರನ್ನು ಕರೆಸಿಕೊಂಡಿದ್ದಾರೆ. ಸಂತ್ರಸ್ತರ ಸೇವಾ ಕಾರ್ಯಕ್ಕೆ ಬಳಸಿಕೊಳ್ಳಿ ಎಂದು 500 ರೂ. ನೀಡಲು ಮುಂದಾ ಗಿದ್ದಾರೆ. ಆದರೆ ಕ್ಲಬ್ ಸದಸ್ಯರು ವಿನಯವಾಗಿಯೇ ನಿರಾಕರಿಸಿ, ನಿಮ್ಮ ಖರ್ಚಿಗೇ ಬೇಕಾಗುತ್ತದೆ, ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರೂ ಒಪ್ಪದ ಕಮಲಮ್ಮ ಬಲವಂತವಾಗಿ ದೇಣಿಗೆ ನೀಡಿದ್ದಾರೆ.

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಹಲವು ದಿನ ಆಹಾರ ಪೊಟ್ಟಣ ಪಡೆದಿದ್ದಕ್ಕೆ ಪ್ರತಿ ಯಾಗಿ ಹಾಗೂ ಯಾರಿಗೂ ಹೊರೆಯಾಗ ಬಾರದು ಎಂದು ದೇಣಿಗೆ ನೀಡಿ ಸ್ವಾವಲಂಬಿ ಬದುಕು ಪ್ರದರ್ಶಿಸಿದ್ದಾರೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

Translate »