ರಕ್ಷಣೆ, ಸೂಕ್ತ ಪರಿಹಾರ ನೀಡಿ: ಆಶಾ ಕಾರ್ಯಕರ್ತೆಯರ ಮನವಿ
ಮೈಸೂರು

ರಕ್ಷಣೆ, ಸೂಕ್ತ ಪರಿಹಾರ ನೀಡಿ: ಆಶಾ ಕಾರ್ಯಕರ್ತೆಯರ ಮನವಿ

May 30, 2020

ಮೈಸೂರು, ಮೇ 29(ಆರ್‍ಕೆಬಿ)- ಲಾಕ್‍ಡೌನ್ ಸಂದರ್ಭ `ಮುಂಚೂಣಿ ವಾರಿಯರ್ಸ್’ ಆಶಾ ಕಾರ್ಯ ಕರ್ತೆಯರ ಮೇಲೆ ದೈಹಿಕ ಹಲ್ಲೆ ಮಾಡಿದವರನ್ನು ಶಿಕ್ಷಿಸಿ, ಹಲ್ಲೆಗೊಳಗಾದ ಕಾರ್ಯಕರ್ತೆಯರಿಗೆ ಸೂಕ್ತ ಪರಿಹಾರ ನೀಡಿ ಎಂಬ ಬೇಡಿಕೆಗಳನ್ನು ಆಶಾ ಕಾರ್ಯಕರ್ತೆಯರು ಸರ್ಕಾರದ ಮುಂದಿಟ್ಟಿದ್ದಾರೆ.

`ಆಶಾ ಸಂರಕ್ಷಣಾ ದಿನ’ದ ರಾಜ್ಯವ್ಯಾಪಿ ಹೋರಾ ಟದ ಅಂಗವಾಗಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಮೈಸೂ ರಿನಲ್ಲಿ ನೂರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಶುಕ್ರವಾರ ಡಿಸಿ ಕಚೇರಿ ಬಳಿ ಜಮಾವಣೆಗೊಂಡು ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಆಗ್ರಹಿಸಿ ದರು. ಆಶಾಕಾರ್ಯಕರ್ತೆಯರು ಕೋವಿಡ್-19 ಜಾಗೃತಿ ಕಾರ್ಯಕ್ಕೆ ಮಾರ್ಚ್‍ನಿಂದ ನಿಯೋಜನೆ ಗೊಂಡಿದ್ದು, ಮಾಸಿಕ 10 ಸಾವಿರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿ ಟೈಸರ್, ಗ್ಲೌಸ್‍ಗಳನ್ನು ಪೂರೈಸಬೇಕು. ಆಶಾ ಕಾರ್ಯ ಕರ್ತೆಯರ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ನೀಡಬೇಕು. ಮದ್ಯ ನಿಷೇದಿಸಬೇಕು. 50 ಲಕ್ಷ ರೂ. ವಿಮೆ ಸೌಲಭ್ಯ ವನ್ನು ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ವಿಸ್ತರಿಸ ಬೇಕೆಂದು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಯಡಿ ಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ತಹಶೀಲ್ದಾರ್ ಬೋರಯ್ಯ ಅವರಿಗೆ ಸಲ್ಲಿಸಿದರು. ಈ ಸಂದರ್ಭ ಸಂಘದ ನಗರ ಅಧ್ಯಕ್ಷೆ ಜಿ.ಎಸ್. ಸೀಮಾ, ಸುನೀತಾ, ಕೋಮಲಾ, ವೀಣಾ, ಕುಮಾರಿ, ಪಿ.ಎಸ್.ಸಂಧ್ಯಾ, ಎಐಯುಟಿಯುಸಿ ಜಿಲ್ಲಾ ಕಾರ್ಯ ದರ್ಶಿ ಚಂದ್ರಶೇಖರ ಮೇಟಿ ಇನ್ನಿತರರಿದ್ದರು.

Translate »