ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಚುನಾವಣೆ ಮೈಸೂರು ನಗರದಲ್ಲಿ ಶೇ.33.64,  ಜಿಲ್ಲೆಯಲ್ಲಿ ಶೇ.42.77ರಷ್ಟು ಮತದಾನ
ಮೈಸೂರು

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಚುನಾವಣೆ ಮೈಸೂರು ನಗರದಲ್ಲಿ ಶೇ.33.64, ಜಿಲ್ಲೆಯಲ್ಲಿ ಶೇ.42.77ರಷ್ಟು ಮತದಾನ

November 22, 2021

ಮೈಸೂರು,ನ.21(ಆರ್‍ಕೆಬಿ)- ಕನ್ನಡಿ ಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾ ಧ್ಯಕ್ಷರ ಆಯ್ಕೆಗೆ ಭಾನುವಾರ ನಡೆದ ಚುನಾ ವಣೆಯಲ್ಲಿ ಮೈಸೂರು ನಗರದ 8 ಮತಗಟ್ಟೆ ಯಲ್ಲಿ 7,781 ಮತದಾರರ ಪೈಕಿ 2,618 ಮಂದಿ ಮತ ಚಲಾಯಿಸಿದ್ದಾರೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿರುವ 13, 760 ಮತದಾರರ ಪೈಕಿ 5,722 (ಶೇ.42. 77) ಮಂದಿ ಮತ ಚಲಾಯಿಸಿದ್ದಾರೆ.
ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜು, ಹುಣಸೂರಿನ ಮಿನಿ ವಿಧಾನಸೌಧ, ಹೆಚ್.ಡಿ.ಕೋಟೆಯ ಮಿನಿ ವಿಧಾನಸೌಧ, ಸರ ಗೂರಿನ ತಾಲೂಕು ಕಚೇರಿ, ಕೆ.ಆರ್.ನಗರ ತಾಲೂಕು ಕಚೇರಿ, ತಿ.ನರಸೀಪುರ ತಾಲೂಕು ಕಚೇರಿ, ಬನ್ನೂರು ನಾಡಕಚೇರಿ, ಪಿರಿಯಾ ಪಟ್ಟಣದ ಗೋಣಿಕೊಪ್ಪ ರಸ್ತೆ ಸರ್ಕಾರಿ ಪದವಿಪೂರ್ವ ಕಾಲೇಜು, ನಂಜನಗೂಡಿನ ಮಿನಿ ವಿಧಾನಸೌಧ ಮತಗಟ್ಟೆಗಳಲ್ಲಿ ಮತ ದಾರರು ತಮ್ಮ ಹಕ್ಕು ಚಲಾಯಿಸಿದರು.

21 ಮಂದಿ ಸ್ಪರ್ಧಿಸಿದ್ದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಳಿ ಬಣ್ಣದ ಮತಪತ್ರ, ಮೈಸೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪಿಂಕ್ ಬಣ್ಣದ ಮತ ಪತ್ರ ನೀಡಲಾಯಿತು. ಮೈಸೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವಕೀಲ ಕೆ.ಎಸ್.ನಾಗರಾಜು, ಬರಹ ಗಾರ ಬನ್ನೂರು ಕೆ.ರಾಜು, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಸ್ಪರ್ಧಿಸಿದ್ದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ 21 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.

ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆದ ಮತದಾನದಲ್ಲಿ ಬೆಳಗ್ಗೆ ಮತದಾನ ಮಂದ ಗತಿಯಿಂದಲೇ ಆರಂಭವಾಯಿತು. ಬೆಳಗ್ಗೆ 10 ಗಂಟೆವರೆಗೆ ಮೈಸೂರಲ್ಲಿ 242 ಮತ ದಾರರು, ಜಿಲ್ಲೆಯಲ್ಲಿ 693 ಮತದಾರರು ಮತ ಚಲಾಯಿಸಿದ್ದರು. ಮಧ್ಯಾಹ್ನ 12ರವ ರೆಗೆ ಮೈಸೂರಲ್ಲಿ 855, ಜಿಲ್ಲೆಯಲ್ಲಿ ಒಟ್ಟು 2421 ಮಂದಿ ಮತ ಚಲಾಯಿಸಿದ್ದರು. ಮಧ್ಯಾಹ್ನ 3ರವರೆಗೆ ಮೈಸೂರಲ್ಲಿ 1803 ಮಂದಿ ಹಾಗೂ ಜಿಲ್ಲೆಯಲ್ಲಿ 4233 ಮಂದಿ ಮತ ಚಲಾಯಿಸಿದ್ದರು. ಸಂಜೆ 4ಕ್ಕೆ ಮತ ದಾನ ಅಂತ್ಯಗೊಂಡಾಗ ಮೈಸೂರು ನಗರ ದಲ್ಲಿ 2618 ಮಂದಿ (ಶೇ.33.64ರಷ್ಟು) ಹಾಗೂ ಜಿಲ್ಲೆಯಲ್ಲಿ ಒಟ್ಟು 5722 ಮಂದಿ (ಶೇ.42.77ರಷ್ಟು) ಮತದಾನವಾಯಿತು.

ಹಿರಿಯ ಸಾಹಿತಿ ಸರಸ್ವತಿ ಸಮ್ಮಾನ್ ಪುರಸ್ಕøತ ಡಾ.ಎಸ್.ಎಲ್.ಭೈರಪ್ಪ, ಡಾ.ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ), ಟಿ.ವಿ.ವೆಂಕಟಾ ಚಲಶಾಸ್ತ್ರಿ, ಹಿ.ಡಿ.ರಾಮಚಂದ್ರೇಗೌಡ, ಎ.ವಿ. ನರಸಿಂಹಮೂರ್ತಿ, ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಸೇರಿದಂತೆ ಪರಷತ್ತಿನ ಇತರೆ ಸದಸ್ಯರು ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಮತ ಚಲಾಯಿಸಿ ದರು. ತಹಸೀಲ್ದಾರ್ ರಕ್ಷಿತ್ ಚುನಾವಣಾ ಧಿಕಾರಿಯಾಗಿದ್ದರು.

Translate »