ಸೋರುತಿಹುದು ಅಂಧ  ಮಕ್ಕಳ ಶಾಲೆ ಮೇಲ್ಛಾವಣಿ
ಮೈಸೂರು

ಸೋರುತಿಹುದು ಅಂಧ ಮಕ್ಕಳ ಶಾಲೆ ಮೇಲ್ಛಾವಣಿ

November 22, 2021

ಮೈಸೂರು, ನ.18(ಜಿಎ)- ಮೈಸೂರಿನ ತಿಲಕ್ ನಗರದಲ್ಲಿರುವ ಅಂಧ ಮಕ್ಕಳ ಶಾಲೆಯು ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮತ್ತಷ್ಟು ಶಿಥಿಲಗೊಂಡು. ಮೇಲ್ಛಾ ವಣಿ ಸೋರುತ್ತಿದ್ದು, ವಿದ್ಯಾರ್ಥಿಗಳು ಆತಂಕದಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ.

ನಿರಂತರ ಮಳೆಗೆ ಮೈಸೂರು ನಗರದಲ್ಲಿರುವ ಕೆಲವು ಹಳೆಯ ಕಟ್ಟಡಗಳು ಕುಸಿಯು ತ್ತಿದ್ದು, ಅದರ ಪಟ್ಟಿಗೆ ಈ ಕಟ್ಟಡವೂ ಸೇರಿ ಬಿಡುವುದೇ ಎಂಬ ಆತಂಕ ಎದುರಾಗಿದೆ. ಮಕ್ಕಳು ಮಲಗುವ ಕೋಣೆ ಮತ್ತು ಊಟ ಮಾಡುವ ಸ್ಥಳದ ಮೇಲ್ಛಾವಣಿಯ ಕೆಲ ಹೆಂಚುಗಳು ಒಡೆದು ಮಳೆ ನೀರು ಸೋರುತ್ತಿದೆ. ಮಳೆ ನೀರು ಗೋಡೆಗಳಿಗೆ ಇಳಿದು ಸಂಪೂರ್ಣ ವಸ್ತಿಯಾಗಿದೆ. ಎರಡು ವರ್ಷಗಳ ಹಿಂದೆ ನಿರ್ಮಿಸಿರುವ ಶೌಚಾಲಯ, ಸ್ನಾನÀ ಗೃಹದ ಕಟ್ಟಡ ಗೋಡೆಗಳು ಈಗಾಗಲೇ ಬಿರುಕು ಬಿಟ್ಟಿದೆ.

2018ರಲ್ಲಿ ಶಾಲೆಯ ದುರಸ್ತಿ ಮಾಡಲು 43ಲಕ್ಷ ರೂ. ಬಿಡು ಗಡೆಯಾಗಿತ್ತು. ಅದರಲ್ಲಿ ನೂತನ ಶೌಚಾಲಯ, ಸ್ನಾನ ಗೃಹ ಮಾತ್ರ ನಿರ್ಮಾಣ ಮಾಡಲಾಗಿತ್ತು. ಆದರೆ ಹೆಂಚುಗಳ ಬದಲಾವಣೆ ಮಾತ್ರ ಮಾಡಲಾಗಿರಲಿಲ್ಲ. ಶೌಚಾಲಯ, ಸ್ನಾನ ಗೃಹ ಕಾಮಗಾರಿಯನ್ನು ಬೇಕಾಬಿಟ್ಟಿ ಮಾಡಿ ರುವುದರಿಂದ ಈಗಾಗಲೇ ಕಟ್ಟಡಗಳ ಗೋಡೆಗಳು ಬಿರುಕು ಬಿಡುತ್ತಿದ್ದು ಅದು ಸಹ ಅಪಾಯದ ಸ್ಥಿತಿಯಲಿದೆ. 1901ರಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡವು ಅಳಿವಿ ನಂಚಿನಲ್ಲಿದ್ದು, ಮಳೆ ಬಂದರೆ ವಿದ್ಯಾರ್ಥಿಗಳು ಊಟ ಮಾಡಲು ಮತ್ತು ಮಲಗಲು ಪರದಾಡ ಬೇಕಾದ ಸ್ಥಿತಿ ಇಲ್ಲಿದೆ. ಮೊದಲೇ ಹೇಳಿ ಕೇಳಿ ಇದು ಅಂಧ ಮಕ್ಕಳ ಶಾಲೆ. ಇದರ ಬಗ್ಗೆ ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳಿಗೆ ನಿರ್ಲಕ್ಷ್ಯ.

ಅಡುಗೆ ಮನೆಯ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು ಈ ಸ್ಥಳದಲ್ಲಿ ದುರಸ್ತಿ ಮಾಡುವ ಸಂದರ್ಭದಲ್ಲಿ ಮೇಲ್ಚಾವಣಿಯ ಭಾಗಕ್ಕೆ ಟೈಲ್ಸ್ ಅಳವಡಿಸಲಾಗಿದೆ. ಇದರಿಂದ ಮಳೆ ಬಂದಾಗ ಬಿರುಕುಗಳಿಂದ ನೀರು ಸುರಿದು ವಸ್ತಿ ಹಿಡಿಯುತ್ತಿದೆ. ಬೀಮ್‍ಗಳಿಂದ ಕೂಡಿರುವ ಗೋಡೆಗಳು ಯಾವಾಗ ಬೇಕಾದರೂ ಕುಸಿಯುವ ಆತಂಕವಿದೆ. ಇಂತಹ ಭಯದ ನಡುವೇ ಅಡುಗೆ ಮಾಡುವ ಸ್ಥಿತಿ ಇದೆ. ಕಟ್ಟಡ ದುರಸ್ತಿಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಳೆದ ಹಲವಾರು ತಿಂಗಳಿನಿಂದÀ ಶಾಲೆಯ ಅಧೀಕಕ್ಷರು ಪತ್ರ ಬರೆಯುತ್ತಿದ್ದರೂ ಇದುವರೆಗೂ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

Translate »