ಮೈಸೂರಿನ ಪಡುವಾರಹಳ್ಳಿ ಜನಹಿತ  ವಿವಿಧೋದ್ದೇಶ ಸಹಕಾರ ಸಂಘಕ್ಕೆ ಆಯ್ಕೆ
ಮೈಸೂರು

ಮೈಸೂರಿನ ಪಡುವಾರಹಳ್ಳಿ ಜನಹಿತ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಆಯ್ಕೆ

November 22, 2021

ಮೈಸೂರು, ನ.21(ಎಸ್‍ಪಿಎನ್)- ಮೈಸೂರು ನಗರದ ಪಡುವಾರಹಳ್ಳಿಯ ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ 7 ಸಾಮಾನ್ಯ ಹಾಗೂ 1 ಹಿಂದುಳಿದ ನಿರ್ದೇ ಶಕ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದು, ಐದು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಎನ್ ಚಂದ್ರ ಶೇಖರ್(115), ರಾಘವ್ ಎಂ.ಗೌಡ (115), ಎಂ.ಭೈರಪ್ಪ (111), ಎಂ. ಸೋಮಣ್ಣ (107), ಟಿ.ಸೋಮು(102), ಈ. ಲೋಕೇಶ್ವರ್ (101), ಕೃಷ್ಣಕುಮಾರ್ (93) ಹಾಗೂ ಹಿಂದುಳಿದ ವರ್ಗಗಳ ವಿಭಾಗದಿಂದ ಬಿ.ಸಂದೇಶ್,(89) ಆಯ್ಕೆಯಾಗಿದ್ದಾರೆ.
ಒಟ್ಟು 13 ಸ್ಥಾನದಲ್ಲಿ 2 ಸಾಮಾನ್ಯ ಮಹಿಳಾ ವಿಭಾಗದಲ್ಲಿ ಕಮಲಾ ಮತ್ತು ಮಹಾಲಕ್ಷ್ಮಿ. ಪ.ಜಾತಿಗೆ ಕೆ.ಸುರೇಶ್, ಪ. ಪಂಗಡಕ್ಕೆ ಪ್ರದೀಪ್ ನಾಯಕ ಹಾಗೂ ಒಬಿಸಿಯಿಂದ ಬಿ.ಕುಮಾರ್ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

ನೂತನ ಆಡಳಿತ ಮಂಡಳಿಯ ನಿರ್ದೇ ಶಕರಿಗೆ ಗ್ರಾಮಾಭ್ಯುದಯ ಟ್ರಸ್ಟ್ ಅದ್ಯಕ್ಷ ಮಹದೇವಸ್ವಾಮಿ, ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ, ದಿ ಮೈಸೂರು ಕೋ ಆಪ ರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ. ಉಮಾ ಶಂಕರ್, ಉಪಾಧ್ಯಕ್ಷ ಪಡುವಾರಹಳ್ಳಿ ಎಂ. ರಾಮಕೃಷ್ಣ, ನಿರ್ದೇಶಕ ಜೆ.ಯೋಗೇಶ್, ಹೆಚ್.ಹರೀಶ್ ಕುಮಾರ್, ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎಸ್.ಬಿ. ಶಿವು, ಎಂ.ಎನ್.ಸ್ವರೂಪ್, ನಗರಪಾಲಿಕೆ ಸದಸ್ಯೆ ನಮ್ರತಾ ರಮೇಶ್, ಎಂ.ಚಿಕ್ಕ ವೆಂಕಟು ಇನ್ನಿತರರು ಅಭಿನಂದಿಸಿದರು.

Translate »