ದಲಿತ, ರೈತ, ಜನಪರ ವಿರೋಧಿಗಳ ಪಾರಂಪರಿಕ ದೌರ್ಜನ್ಯ ತಡೆಗೆ ಸಾಂಸ್ಕøತಿಕ ಚಳವಳಿ ಅಗತ್ಯ
ಮೈಸೂರು

ದಲಿತ, ರೈತ, ಜನಪರ ವಿರೋಧಿಗಳ ಪಾರಂಪರಿಕ ದೌರ್ಜನ್ಯ ತಡೆಗೆ ಸಾಂಸ್ಕøತಿಕ ಚಳವಳಿ ಅಗತ್ಯ

November 22, 2021

ಮೈಸೂರು,ನ.21(ಪಿಎಂ)-ದಲಿತ, ರೈತ ಮತ್ತು ಜನ ಪರ ವಿರೋಧಿಗಳ ಪಾರಂಪರಿಕ ಕ್ರೌರ್ಯ, ದೌರ್ಜನ್ಯ ಮತ್ತು ಅಸಮಾನತೆ ಕಿಂಚಿತ್ತೂ ಕಡಿಮೆಯಾದಂತೆ ತೋರುತ್ತಿಲ್ಲ. ಹೀಗಾಗಿ ನಮಗೆ ತಾಯ್ನಾಡು ಎಂಬುದು ಇಲ್ಲಿಲ್ಲ ಎಂಬ ಹಿನ್ನೆಲೆಯಲ್ಲಿ ಸಾಂಸ್ಕøತಿಕ ಚಳವಳಿ ಪ್ರಾರಂಭವಾಗಬೇಕಿದೆ ಎಂದು ಪ್ರಗತಿಪರ ಚಿಂತಕ ಡಾ.ಎಸ್.ತುಕಾರಾಂ ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಲ್‍ಬಿ ರಸ್ತೆಯ ಇಂಜಿನಿಯರ್ ಗಳ ಸಂಸ್ಥೆ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಮೈಸೂರು ವತಿಯಿಂದ `ಸಂವಿ ಧಾನದ ಆಶಯಗಳು ಮತ್ತು ದಲಿತರ ಮುಂದಿರುವ ಸವಾಲುಗಳು’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಡಾ.ಅಂಬೇಡ್ಕರ್ ಅವರನ್ನೇ ಸಹಜ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದ ಈ ಸಮಾಜ ಅವರ ಅನುಯಾಯಿಗಳಾದ ತಳ ವರ್ಗಕ್ಕೆ ಆ ಅವಕಾಶ ನೀಡಲು ಇಚ್ಛಿಸುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಇಂದಿನ ಎಲ್ಲಾ ವಿದ್ಯಮಾನಗಳನ್ನು ಗಮನಿಸಿ, ಅಂಬೇಡ್ಕರ್ ಅವರು ಕೇಳಿದ ಪ್ರಶ್ನೆಗಳನ್ನೇ ಮತ್ತೆ ಕೇಳಬೇಕಿದೆ. ನಮಗೆ ತಾಯ್ನಾಡು ಎಂಬುದು ಇದೆಯೇ? ಎಂದು ಪ್ರಶ್ನಿ ಸುವ ಅನಿವಾರ್ಯ ಮತ್ತೆ ಎದುರಾಗಿದೆ ಎಂದರು.
ಪ್ರಸ್ತುತ ಜಾತೀಯತೆ ತನ್ನ ಸ್ವರೂಪ ಬದಲಿಸಿ ಕೊಂಡಿದೆ. ಜಾತಿ ಹೆಸರಿನಲ್ಲಿ ಅಸ್ಪøಶ್ಯತೆ ಆಚರಣೆ ಯಲ್ಲಿ ಇಲ್ಲವಾದರೂ ಊಟ-ಬಟ್ಟೆ ಹಿನ್ನೆಲೆಯಲ್ಲಿ ಅದು ತನ್ನ ಸ್ವರೂಪ ಬದಲಿಸಿಕೊಂಡಿದೆ. ನೀವು ಯಾವ ಜಾತಿ ಎಂದು ಕೇಳುವ ಬದಲು, ನೀವು ವೆಜ್ಜಾ ಅಥವಾ ನಾನ್ ವೆಜ್ಜಾ ಎಂದು ಕೇಳುತ್ತಾರೆ. ಇಂತಹ ನೂರು ಉದಾಹರಣೆ ಕೊಡಬಹುದು ಎಂದು ಬೇಸರ ವ್ಯಕ್ತಪಡಿಸಿದರು.

ಫ್ಯಾಸಿಸ್ಟ್ ಶಕ್ತಿಗಳು ಸಾಂಸ್ಕøತಿಕ, ನೈತಿಕವಾಗಿ ಆಕ್ರ ಮಿಸುವ ಎಲ್ಲಾ ಕಲೆಗಳನ್ನು ಕರಗತ ಮಾಡಿಕೊಂಡಿವೆ. ಶಿಬಿರಗಳ ಮೂಲಕ ಫ್ಯಾಸಿಸ್ಟ್ ಮನೋಧರ್ಮ ರೂಪಿಸಿ, ಅವರಿಗೆ ಜನಪ್ರತಿನಿಧಿ ಸ್ಥಾನ ಕಲ್ಪಿಸಿ ಕೊಡುತ್ತಾರೆ. ಎಲ್ಲಾ ರಾಜಕೀಯ ಮತ್ತು ಫ್ಯಾಸಿಸ್ಟ್ ಶಕ್ತಿಗಳು ದಲಿತ ಚಳವಳಿ ಛಿದ್ರಗೊಂಡಿದೆ ಎಂದು ನಿರ್ಧರಿಸಿವೆ. ಇದನ್ನು ಸುಳ್ಳು ಎಂದು ಚಳವಳಿ ಮೂಲಕ ಸಾಬೀತುಪಡಿಸಬೇಕಿದೆ ಎಂದು ಹೇಳಿದರು.

ಸೇನೆ ಇಲ್ಲದ ದಳಪತಿಗಳು: ದಲಿತ ಸಮುದಾಯದ ರಾಜಕಾರಣಿಗಳು ಎಲ್ಲಾ ಪಕ್ಷಗಳಲ್ಲಿದ್ದಾರೆ. ಅವರಲ್ಲಿ ಬಹುತೇಕರು ಸೇನೆ ಇಲ್ಲದ ದಳಪತಿಗಳಂತೆ. ಇವರಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇದರಿಂದ ಹೊರತಾಗಿ ದ್ದಾರೆ ಎಂದು ಡಾ.ತುಕಾರಾಂ ತಿಳಿಸಿದರು. ದಸಂಸ ರಾಜ್ಯ ಸಂಸ್ಥಾಪಕ ಸಂಯೋಜಕ ವಿ.ನಾಗರಾಜು ಕಾರ್ಯ ಕ್ರಮ ಉದ್ಘಾಟಿಸಿದರು. ಚಿಂತಕ ಬಸವರಾಜ ದೇವ ನೂರ, ಮೈಸೂರು ವಿವಿ ಅಂಬೇಡ್ಕರ್ ಅಧ್ಯಯನ ಕೇಂದ್ರದ ಡಾ.ಎಸ್.ನರೇಂದ್ರಕುಮಾರ್, ದಸಂಸ ರಾಜ್ಯ ಸಂಯೋಜಕ ಹೆಚ್.ಎನ್.ಅಣ್ಣಯ್ಯ, ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ಮತ್ತಿತರರಿದ್ದರು.

Translate »