ವಿದ್ಯುತ್ ಶಾರ್ಟ್ ಸಕ್ರ್ಯೂಟ್: ಕಬ್ಬು ಬೆಂಕಿಗಾಹುತಿ
ಚಾಮರಾಜನಗರ

ವಿದ್ಯುತ್ ಶಾರ್ಟ್ ಸಕ್ರ್ಯೂಟ್: ಕಬ್ಬು ಬೆಂಕಿಗಾಹುತಿ

March 7, 2020

ಚಾಮರಾಜನಗರ,ಮಾ.6-ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗಾಹುತಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ತಾಲೂಕಿನ ಹೊಂಡರ ಬಾಳು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಗಳಾದ ಶ್ರೀನಿವಾಸ ಶೆಟ್ಟಿ ಹಾಗೂ ಸರೋಜಮ್ಮ ಅವರಿಗೆ ಸೇರಿದ 3 ಎಕರೆ ಜಮೀನಿ ನಲ್ಲಿ ಬೆಳೆದಿದ್ದ ಕಬ್ಬ ಬೆಂಕಿಗಾಹುತಿಯಾಗಿರುವುದು. ಈ ಘಟನೆಯಿಂದ ರೈತರಿಗೆ ಸುಮಾರು 10ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ವಿದ್ಯುತ್ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಟಾವಿಗೆ ಬಂದಿದ್ದ ಕಬ್ಬು ಹಾಗೂ ನೀರಾವರಿ ಸಾಮಾಗ್ರಿ, ಕೊಳವೆ ಬಾವಿ ಮತ್ತು ಮೋಟರ್‍ಗಳು ಬೆಂಕಿಗೆ ಆಹುತಿಯಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ರೈತ ಶ್ರೀನಿವಾಸಶೆಟ್ಟಿ ತಿಳಿಸಿದ್ದಾರೆ.

Translate »