ಮಧುಮಲೆ ಕಾಡಿನಲ್ಲಿ ಆನೆ ದಾಳಿ: ಸ್ಕೂಟರ್ ಸವಾರ ಸ್ವಲ್ಪದರಲ್ಲಿ ಪಾರು
ಮೈಸೂರು

ಮಧುಮಲೆ ಕಾಡಿನಲ್ಲಿ ಆನೆ ದಾಳಿ: ಸ್ಕೂಟರ್ ಸವಾರ ಸ್ವಲ್ಪದರಲ್ಲಿ ಪಾರು

October 23, 2020

ಗುಂಡ್ಲುಪೇಟೆ, ಅ.22- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿ ರುವ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿ ರುವ ಮಸಿನಗುಡಿ ತೆಪ್ಪಕಾಡು ರಸ್ತೆಯಲ್ಲಿ ಸಲಗವೊಂದು ದ್ವಿಚಕ್ರವಾಹನ ಸವಾರರೊಬ್ಬರ ಮೇಲೆ ಗುರುವಾರ ದಾಳಿ ಮಾಡಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಬೃಹದಾಕಾರದ ಆನೆಯು ದಾಳಿ ನಡೆಸಿದಾಗ ಸ್ಕೂಟರ್ ಸವಾರ ರಸ್ತೆಯಲ್ಲಿ ಹೋಗುತ್ತಿದ್ದ ಜೀಪೆÇಂದನ್ನು ಏರಿ ಪಾರಾಗಿದ್ದಾರೆ. ಸವಾ ರರನ್ನು ರಕ್ಷಿಸಿದ ಜೀಪಿನಲ್ಲಿದ್ದವರು ಘಟನೆ ಯನ್ನು ಚಿತ್ರೀಕರಣ ಮಾಡಿದ್ದಾರೆ.

ದಾಳಿ ನಡೆಸಿದ ನಂತರವೂ ಆನೆ ರಸ್ತೆ ಬದಿಯಲ್ಲೇ ಸುಮಾರು ಹೊತ್ತು ನಿಂತಿತ್ತು. ಹಾಗಾಗಿ ರಸ್ತೆಯಲ್ಲಿ ಬಿದ್ದಿದ್ದ ಸ್ಕೂಟರ್ ಅನ್ನು ತೆಗೆಯುವುದಕ್ಕಾಗಿ, ಜೀಪಿನಲ್ಲಿ ಇದ್ದವರು ರಸ್ತೆಯಲ್ಲಿ ಭಾರೀ ವಾಹನಗಳನ್ನು ತಡೆದು ನಂತರ ಸ್ಕೂಟರ್ ಬಳಿ ನಿಲ್ಲಿಸುವಂತೆ ಮನವಿ ಮಾಡಿದರೂ ಕೆಲವರು ಸ್ಪಂದಿ ಸಲಿಲ್ಲ. ಅಂತಿಮವಾಗಿ ಬೊಲೆರೊದಲ್ಲಿ ಬಂದವರು, ರಸ್ತೆಯಲ್ಲಿದ್ದ ಸ್ಕೂಟರ್ ಅನ್ನು ಅಲ್ಲಿಂದ ತೆಗೆದರು. ಇಂತಹ ಘಟನೆಗಳು ರಾತ್ರಿ ಸಂಚಾರ ಮಾಡುವಾಗ ಹೆಚ್ಚಾಗಿ ಸಂಭ ವಿಸುತ್ತವೆ. ರಸ್ತೆ ಬದಿಯಲ್ಲಿ ಆನೆ ಇನ್ನಿತರ ಕಾಡು ಪ್ರಾಣಿಗಳು ಇದ್ದಾಗ ದೂರದಲ್ಲಿಯೇ ವಾಹನಗಳನ್ನು ನಿಧಾನ ಮಾಡಬೇಕು. ಪ್ರಾಣಿಗಳು ರಸ್ತೆ ದಾಟುವ ಭರದಲ್ಲಿ ದಾಳಿ ಮಾಡುವ ಸಂಭವ ಹೆಚ್ಚಿರುತ್ತದೆ.

 

 

Translate »