ಅಂತರಸಂತೆ: ಕಾಡಿನಿಂದ ಆಹಾರವನ್ನರಸಿ ನಾಡಿಗೆ ಬರುವಾಗ ಕಂದಕಕ್ಕೆ ಬಿದ್ದು ಆನೆ ಸಾವನ್ನಪ್ಪಿರುವ ಘಟನೆ ದಮ್ಮನಕಟ್ಟೆ ಹಾಡಿಯಲ್ಲಿ ಸಂಭವಿಸಿದೆ.
ರಾಜೀವ್‍ಗಾಂಧಿ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಅಂತರಸಂತೆ ಅರಣ್ಯ ವ್ಯಾಪ್ತಿಯ ದಮ್ಮನಕಟ್ಟೆ ಹಾಡಿಯ ಪಕ್ಕದಲ್ಲಿ ರಾತ್ರಿ ಆಹಾರ ಹುಡುಕಿಕೊಂಡು ಬಂದ ಗಂಡಾನೆ ಕಂದಕ ದಾಟುವಾಗ ಬಿದ್ದು ಸಾವನ್ನಪ್ಪಿದೆ. ಬೆಳಿಗ್ಗೆ ಹಾಡಿಯ ಜನರು ಆನೆ ಬಿದ್ದಿರುವ ಬಗ್ಗೆ ಅರಣ್ಯಾಧಿ ಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಆಗಮಿಸಿದ ಎಸಿಎಫ್ ಪೂವಯ್ಯ ಸ್ಥಳ ಪರಿಶೀಲಿಸಿ, ನಂತರ ಕಂದಕದಿಂದ ಆನೆ ದೇಹವನ್ನು ಹೊರತೆಗೆದು ಮರಣೋ ತ್ತರ ಪರೀಕ್ಷೆ ನಡಸಲಾಯಿತು.
ಈ ಸಂದರ್ಭದಲ್ಲಿ ವೈದ್ಯರಾದ ಡಾ. ಮುಜೀದ್, ಡಿ.ಬಿ.ಕುಪ್ಪೆ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ವನ ಪಾಲಕರಾದ ಕುಮಾರ್, ಆಂಥೋನಿ, ದೊಡ್ಡಪ್ಪಾಜಿ ಇದ್ದರು.