ಹಾಸನ: ಜೂಜಾಡುತ್ತಿದ್ದ ಹದಿನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 20 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಹಾಸನದ ಬೂವನಹಳ್ಳಿ ಸ್ವಾಮಿ(43), ಆದರ್ಶನಗರದ ಸುರೇಶ್(35), ಕುವೆಂಪು ನಗರದ ಶರತ್‍ಕುಮಾರ್(24), ಮಡೆನೂರು ಪದ್ಮರಾಜ್(39), ಆಡುವಳ್ಳಿ ಮಂಜು (32), ಗುಡ್ಡೇಹಳ್ಳಿ ಕೊಪ್ಪಲು ಗೋಪಾಲ (40), ಸಂತೇಪೇಟೆ ಶ್ರೀಕಾಂತ್(25), ವಲ್ಲಬಾಯಿ ರಸ್ತೆಯ ಸೈಯಾದ್ ಮೀರ್ (46), ಸಿಂಗೇನಹಳ್ಳಿಕೊಪ್ಪಲು ರಘು (33), ಬಸಟಿಕೊಪ್ಪಲು ರಘು(29), ಸತ್ಯಮಂಗಲ ರಮೇಶ್(40), ಶ್ರೀನಗರದ
ಕುಮಾರ(34), ದೇವಿನಗರದ ಜಯರಾಂ (35) ಹಾಗೂ ಪೆನ್‍ಷನ್ ಮೊಹಲ್ಲಾದ ರಮೇಶ್(37) ಬಂಧಿತ ಆರೋಪಿಗಳು.
ಮೇ 2ರಂದು ರಾತ್ರಿ 10ಗಂಟೆ ಸಮಯ ದಲ್ಲಿ ನಗರದ ಬಿಟ್ಟಗೌಡನಹಳ್ಳಿ ಪೆಟ್ರೋಲ್ ಬಂಕ್ ಹಿಂಭಾಗ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹಾಸನ ನಗರ ಠಾಣೆಯ ಪಿಎಸ್‍ಐ ಸುರೇಶ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ, ಪಣಕ್ಕಿಟ್ಟಿದ್ದ ಸುಮಾರು 20 ಸಾವಿರ ನಗದನ್ನು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.