ಹಾಸನ: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್.ಪ್ರಕಾಶ್ ಬೆಂಬಲಿಸಿ ರಾಕಿಂಗ್ ಸ್ಟಾರ್ ಯಶ್ ತೆರೆದ ವಾಹನ ದಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಒಂದು ಪಕ್ಷದ ಪರ ಚುನಾವಣಾ ಪ್ರಚಾರ ಮಾಡುತ್ತಿಲ್ಲ. ಆದರೇ ಉತ್ತಮ ವ್ಯಕ್ತಿ ಪರ ಪ್ರಚಾರ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಜನಪರ ಉತ್ತಮ ಕೆಲಸ ಮಾಡುವವರು ಯಾವ ಪಕ್ಷದವರೇ ಆಗಿರಲಿ ಅವರ ಪರ ವಾಗಿ ನಾನು ಪ್ರಚಾರ ಮಾಡುತ್ತೇನೆ. ಹಾಗೇ ಜನರು ಕೂಡ ಅಂತಹವರನ್ನು ಗುರುತಿಸಿ ಮತ ಹಾಕಬೇಕು ಎಂದು ಮನವಿ ಮಾಡಿದರು.
ಮನಸ್ಸು ಮಾಡಿದರೇ ರಾಜ್ಯದ ಯಾವ ಕ್ಷೇತ್ರದಲಾದರೂ ಚುನಾವಣೆಯಲ್ಲಿ ನಾನು ನಿಲ್ಲಬಹುದು. ಆದರೇ ರಾಜಕೀಯ ಎಂದರೇ ಏನು ಎಂಬುದೇ ನನ್ನ ಪ್ರಶ್ನೆಯಾಗಿದೆ. ಆ ಬಗ್ಗೆ ಚಿಂತಿಸುವುದಿಲ್ಲ ಎಂದರು.
ಕೆಲ ಸಿದ್ಧಾಂತಕ್ಕಿಂತ ಜನ ಮುಖ್ಯ, ಜೊತೆಗೆ ವ್ಯಕ್ತಿ ಪ್ರಮುಖನಾಗುತ್ತಾನೆ. ಅನೇಕ ಪಕ್ಷಗಳು ಆಡಳಿತ ನಡೆಸಿ ಇಷ್ಟು ವರ್ಷವಾದರೂ ಜನತೆ ಇಂದೂ ಕೂಡ ಮೂಲಭೂತ ಸೌಕರ್ಯದ ಕೊರತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಜನರಿಗೆ ಪ್ರತಿನಿತ್ಯ ಅವಶ್ಯಕವಾಗಿರುವ ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಸೇರಿದಂತೆ ಪ್ರಮುಖ ಅಭಿವೃದ್ಧಿಗಳ ಬಗ್ಗೆ ಗಮನ ನೀಡಿ ಹೆಚ್ಚಿನ ಒತ್ತು ಕೊಡುವವರು ಯಾರಿ ದ್ದಾರೆಯೋ ಅವರು ಮುಖ್ಯಮಂತ್ರಿ ಆದರೆ ಅನುಕೂಲವಾಗುತ್ತದೆ. ಜಾತಿ ಎಂಬುದು ಎಲ್ಲೆಡೆ ವ್ಯಾಪಿಸಿದೆ. ಹೀಗಿರುವಾಗ ರಾಜ ಕೀಯದಲ್ಲಿ ಜಾತಿ ರಾಜಕೀಯ ಮಾಡು ವುದರ ಬಗ್ಗೆ ನಾನು ಏನನ್ನೂ ಹೇಳು ವುದಿಲ್ಲ ಎಂದು ಹೇಳಿದರು.
ಮತ್ತೊಬ್ಬ ಚಲನಚಿತ್ರ ನಾಯಕ ನಟ ರವಿಗೌಡ, ಅಭ್ಯರ್ಥಿ ಹೆಚ್.ಎಸ್. ಪ್ರಕಾಶ್ ಸೇರಿದಂತೆ ಜೆಡಿಎಸ್ ಮುಖಂಡ ರು ಹಾಗೂ ನೂರಾರು ಕಾರ್ಯ ಕರ್ತರು, ಸಾರ್ವಜನಿಕರು ಪಾಲ್ಗೊಂಡು, ಹೇಮಾವತಿ ಪ್ರತಿಮೆ ಬಳಿ ಯಿಂದ ಹೊರಟ ರೋಡ್ ಶೋ ನಗರದ ಕಸ್ತೂರಬಾ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು