ಬಿಜೆಪಿ ನಾಯಕರಿಗೆ ಸಿದ್ಧಾಂತವಿಲ್ಲ, ಮತ್ತೊಬ್ಬರ ಮೇಲೆ ಹೇರುತ್ತಿದ್ದಾರೆ
ಹಾಸನ

ಬಿಜೆಪಿ ನಾಯಕರಿಗೆ ಸಿದ್ಧಾಂತವಿಲ್ಲ, ಮತ್ತೊಬ್ಬರ ಮೇಲೆ ಹೇರುತ್ತಿದ್ದಾರೆ

May 4, 2018

ಹಾಸನ:  ಬಿಜೆಪಿ ನಾಯಕ ರಿಗೆ ಯಾವುದೇ ಸಿದ್ಧಾಂತವಿಲ್ಲ, ಇನ್ನೊಬ್ಬರ ಸಿದ್ಧಾಂತವನ್ನು ನಮ್ಮ ಮೇಲೆ ಹೇರುವ ಕೆಲಸವನ್ನು ಮಾಡುತ್ತಿದ್ದು, ಮತದಾರರು ಯೋಚಿಸಿ ಮತ ಹಾಕಬೇಕು ಎಂದು ಬಹು ಭಾಷಾ ನಟ ಪ್ರಕಾಶ್ ರೈ ಮನವಿ ಮಾಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದಲ್ಲಿ ಗುರುವಾರ ಹಮ್ಮಿ ಕೊಳ್ಳಲಾಗಿದ್ದ ಸಂವಾದದಲ್ಲಿ ಮಾತನಾ ಡುತ್ತಾ, ಬಿಜೆಪಿ ಮತ್ತು ಸಂಘ-ಪರಿವಾರ ದವರು ದೇಶಕ್ಕಾಗಿ ಕೆಲಸ ಮಾಡದೇ ಇನ್ನೊಬ್ಬರ ಸಿದ್ಧಾಂತವನ್ನು ಮತ್ತೊಬ್ಬರಿಗೆ ಹೇರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಎಲ್ಲಾ ಧರ್ಮಗಳು ಇರುವುದು ಮತ್ತೊಬ್ಬರಿಗೆ ಒಳ್ಳೆಯದನ್ನು ಮಾಡುವುದಕ್ಕೆ ಹೊರತು ಬೆಂಕಿ ಹಚ್ಚುವುದಕ್ಕಲ್ಲ ಎಂದು ಕಿಡಿ ಕಾರಿದರು. ಧರ್ಮವನ್ನು ಸರ್ಕಾರದಿಂದ ಮತ್ತು ರಾಜಕೀಯದಿಂದ ದೂರವಿಡಬೇಕು. ಸಾರ್ವಜ ನಿಕರು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಂಡು ಅದನ್ನು ಈಡೇರಿಸುವ ಕೆಲಸ ರಾಜಕಾರಣ ಗಳು ಮಾಡಬೇಕು. ಪ್ರಶ್ನೆ ಮಾಡುವ ಹಕ್ಕನ್ನು ದಮನ ಮಾಡುವ ಪ್ರವೃತ್ತಿ ಹೊಂದಿರುವ ಬಿಜೆಪಿ ಬದಲಿ ಮಾಡಬೇಕು. ಪ್ರತಿ ಮತದಾರನು ಮತ ಹಾಕುವ ಮುನ್ನ ಯೋಚಿಸಿ ಮತ ಹಾಕಬೇಕು. ಇದರಿಂದ ದೇಶ ಮತ್ತು ರಾಜ್ಯದ ಭವಿಷ್ಯ ಅಡಗಿದೆ ಎಂದರು.

ಸ್ವಾತಂತ್ರ ಬಂದ ಮೇಲೆ ರಾಜಕೀಯ ಎಲ್ಲಾ ಪಕ್ಷಗಳು ಮೋಸ ಮಾಡಿವೆ. ತುರ್ತು ಪರಿಸ್ಥಿತಿಯ ದುರಂತವನ್ನು ಕಂಡಿದ್ದೇವೆ. 70 ವರ್ಷಗಳ ರಾಜಕೀಯ ನೋಡಿದರೇ ಬಹುಸಂಖ್ಯಾತ ಪ್ರಜೆಗಳು ಅಲ್ಪಸಂಖ್ಯಾತ ರಾಗಿರುವುದನ್ನು ಕಾಣುತ್ತಿದ್ದೇವೆ. ಇಂತಹ ಪರಿಸ್ಥಿತಿಗೆ ಪ್ರಜೆಗಳು ಕೂಡ ಕಾರಣರಾಗಿ ದ್ದಾರೆ. ಇವೆಲ್ಲಾ ಒಂದೆರೆಡು ದಿನಗಳಲ್ಲಿ ಬದಲಾಗುವುದಿಲ್ಲ. ನನ್ನ ಮಕ್ಕಳು ಮತ್ತು ಹೆಂಡತಿ ಜೊತೆ ಇದ್ದರೇ ಏನೇನೋ ಬಣ್ಣ ಕಟ್ಟಿ ನನ್ನ ವೈಯಕ್ತಿಕ ವಿಚಾರವನ್ನು ಕೆಣಕುವುದು ಸರಿಯಲ್ಲ. ಬಿಜೆಪಿಯವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಯಾವ ಧರ್ಮದವರನ್ನೂ ಬಲವಂತವಾಗಿ ಮತಾಂತರ ಮಾಡಬಾರದು. ಅದು ಅನಾ ಚಾರ. ಧರ್ಮ ಎಂಬುದು ಮನೆಯಲ್ಲಿ ಮಾತ್ರ ಇರಬೇಕು. ಹೊರಗೆ ಬಂದಾಗ ಪ್ರದರ್ಶನ ಮಾಡಬಾರದು. ಎಲ್ಲರೂ ಕಳ್ಳರೇ ಆದರೇ ಅದರೊಳಗೆ ದೊಡ್ಡ ಮತ್ತು ಸಣ್ಣ ಕಳ್ಳ ಎಂಬುದು ಇದೆ. ನಾನು ಯಾವಾಗಲು ನೇರ ವಾಗಿ ಇರಲು ಇಷ್ಟಪಡುತ್ತೇನೆ. ಹಾಗೇ ಯಾವ ಪಕ್ಷದ ಪರ ಪ್ರಚಾರ ಮಾಡಲು ಹೋಗುತ್ತಿಲ್ಲ. ನನಗೆ ಈಗಾಗಲೇ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ. ಇನ್ನೂ ಹೆಚ್ಚಿನ ಪ್ರಚಾರದ ಅಗತ್ಯ ಇಲ್ಲ ಎಂದರು.

ಮಾತೆತ್ತಿದರೆ ಸಾಕು, ನನ್ನ ವಿರುದ್ಧ ಟ್ವೀಟ್ ಮಾಡುವ ಸಂಸದ ಪ್ರತಾಪ್ ಸಿಂಹ ಅವರ ನಡೆಗೆ ಕಿಡಿಕಾರಿದ ರೈ, ನನ್ನಂತೆಯೇ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ರಜನಿ ಕಾಂತ್ ಸೇರಿದಂತೆ ಅನೇಕರಿಗೆ ಎರಡೆರಡು ಹೆಸರುಗಳಿವೆ. ಅವರನ್ನೂ ಇವರು ಕೇಳು ತ್ತಾರಾ? ಎಂದು ಪ್ರಶ್ನೆ ಮಾಡಿದರು. ಅವರು ಒಬ್ಬ ಸಂಸದ, ಜನರಿಂದ ಆಯ್ಕೆಯಾಗಿ ದ್ದಾರೆ. ಅವರ ಆಗು ಹೋಗುಗಳಿಗೆ ಮೊದಲು ಸ್ಪಂದಿಸುವುದನ್ನು ಬಿಟ್ಟು ಟ್ವೀಟ್‍ನಲ್ಲೇ ಕಾಲ ಹರಣ ಮಾಡುವುದು ಬೇಡ. ನನ್ನ ಹೋರಾಟಕ್ಕೆ ಅನೇಕ ಕ್ಷೇತ್ರದ ತಜ್ಞರು ಸೇರಿದ್ದಾರೆ. ಮೂರು ಸಾವಿರ ಜನರ ಒಂದು ಟೀಂ ಮಾಡಿ ಸಜ್ಜಾಗು ತ್ತಿದ್ದೇನೆ ಎಂದು ಹೇಳಿದರು. ಪತ್ರಕರ್ತರ ಕೆಲ ಪ್ರಶ್ನೆಗಳಿಗೆ ಪ್ರಕಾಶ್ ರೈ ಕೋಪದಿಂದಲೇ ಉತ್ತರಿಸಿ, ನಂತರ ಬೆಣ್ಣೆ ಸವರುವ ಕೆಲಸ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.
ಸಂವಾದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಬಂದ ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ಜಿಲ್ಲಾ ಪತ್ರಕರ್ತರ ಸಂಘ ದಿಂದ ಶಾಲು ಹೊದಿಸಿ, ಹಾರ ಹಾಕಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ವೇಳೆ ರಾಷ್ಟ್ರೀಯ ಪತ್ರಕರ್ತರ ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ಮದನ್‍ಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿನಾ ಕಲಗೂಡು, ಉಪಾಧ್ಯಕ್ಷ ಅತೀಖ್ ಉರ್ ರೆಹಮನ್, ಖಜಾಂಚಿ ಪ್ರಕಾಶ್, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಸನ್ನ ಕುಮಾರ್ ಇತರರು ಪಾಲ್ಗೊಂಡಿದ್ದರು.

Translate »