ರಾಜ್ಯದಲ್ಲಿ ಭಜರಂಗಬಲಿ-ಜಿಹಾದಿ ನಡುವಿನ ಚುನಾವಣೆ ಬೇಲೂರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿಕೆ
ಹಾಸನ

ರಾಜ್ಯದಲ್ಲಿ ಭಜರಂಗಬಲಿ-ಜಿಹಾದಿ ನಡುವಿನ ಚುನಾವಣೆ ಬೇಲೂರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿಕೆ

May 4, 2018

ಬೇಲೂರು:  ಕರ್ನಾಟಕದ ವಿಧಾನಸಭಾ ಚುನಾವಣೆ ಸವಾಲಿನಂತಾಗಿದ್ದು, ಈ ಚುನಾವಣೆ ಭಜರಂಗಬಲಿ ಹಾಗೂ ಜಿಹಾದಿಗಳ ನಡುವಿನ ಚುನಾವಣೆಯಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ಪಟ್ಟಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ಸಂಕಲ್ಪ ಬಿಜೆಪಿ ಯದ್ದಾಗಿದ್ದು, ಇದಕ್ಕೆ ರಾಜ್ಯದ ಜನತೆ ಸಹಕಾರ ನೀಡಬೇಕಿದೆ. ಹಿಂದೂ ಭಾವನೆ ಗಳನ್ನು ಮೆಟ್ಟುವಂತಹ ಹಾಗೂ ಜಿಹಾದಿ ಭಾವನೆಗಳನ್ನು ಈ ಭಾಗದಲ್ಲಿ ಬಿತ್ತಿ ಜನರಲ್ಲಿ ಆತಂಕ ಉಂಟು ಮಾಡುವಂತಹ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಮನವಿ ಮಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ನೀವು ನೀಡುವ ಒಂದು ಮತ ಬಿ.ಎಸ್. ಯಡಿ ಯೂರಪ್ಪ ಅವರಿಗೆ ನೀಡಿದಂತೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಹೊಗಲಾಡಿ ಸಲು ಇದೊಂದು ಸದಾವಕಾಶ. ರಾಜ್ಯ ದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಕೇಂದ್ರದಿಂದ ಅನುದಾನ ತಂದು ಅಭಿವೃದ್ಧಿಗೆ ಅನುಕೂಲ ಆಗಲಿದೆ. ಪ್ರವಾಸಿ ಸ್ಥಳವಾದ ಬೇಲೂರನ್ನು ಅಭಿವೃದ್ಧಿಪಡಿಸುವಲ್ಲಿ ಬಿಜೆಪಿ ಆಸಕ್ತಿ ತಾಳಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಕುಸಿ ದಿದೆ. 23 ಹಿಂದೂ ಯುವಕರ ಕಗ್ಗೊಲೆ ಯಾಗಿದೆ. ದೇಶದ ಭದ್ರತೆಗೆ ಧಕ್ಕೆಯಾಗು ವಂತಹ ಎಲ್ಲಾ ಸೂಚನೆಗಳು ರಾಜ್ಯದ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಘೋಚರಿಸುತ್ತಿವೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯ ಸರ್ಕಾರ ಬೇಕೋ? ಅಥವಾ ಓವೈಸಿ ಬೆಂಬಲಿತ ಸರ್ಕಾರ ಬೇಕೋ? ಎನ್ನುವುದನ್ನು ಮತದಾರರು ನಿರ್ಧರಿಸಬೇಕಿದೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಹೆಚ್.ಕೆ. ಸುರೇಶ್ ಗೆಲುವು ಯಡಿಯೂರಪ್ಪ ಅವರ ಗೆಲುವು ಇದ್ದಂತೆ. ನಿಮಗೆ ಕಳ್ಳ-ಮಳ್ಳರ ಆಡಳಿತ ಬೇಕೋ? ಶುದ್ಧ ಬಿಜೆಪಿ ಆಡಳಿತ ಬೇಕೋ? ಎಂದು ಪ್ರಶ್ನಿಸಿದರು. ಬಿಜೆಪಿ ಗೆಲ್ಲಿಸಿದರೆ ಬೇಲೂರು ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು ಭರವಸೆ ನೀಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗ ರಮೇಶ್ ಹಾಗೂ ಬೇಲೂರು ಬಿಜೆಪಿ ಅಭ್ಯರ್ಥಿ ಹೆಚ್.ಕೆ.ಸುರೇಶ್ ಮಾತನಾಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಕೊರಟಿಕೆರೆ ಪ್ರಕಾಶ್, ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ, ಎಸ್ಸಿ, ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಪರ್ವತಯ್ಯ, ಜಿಪಂ ಮಾಜಿ ಸದಸ್ಯ ಈ.ಹೆಚ್.ಲಕ್ಷ್ಮಣ್, ಅಮಿತ್‍ಶೆಟ್ಟಿ, ಜೈಶೀಲಾ, ಜೈಶಂಕರ್, ರಾಜ್ಯ ಸಮಿತಿಯ ಜಿ.ಕೆ.ಕುಮಾರ್, ಪ್ರಮುಖರಾದ ಶಿವಕುಮಾರ್, ಅಭಿಗೌಡ ವಿವಿಧ ಸಮಿತಿ ಮುಖಂಡರು ಇದ್ದರು.

Translate »