ಹೊರ ಜಿಲ್ಲೆ ಮೌಲ್ಯಮಾಪಕರ ಆರೋಗ್ಯ ಸುರಕ್ಷತೆಗೆ ಒತ್ತು ನೀಡಿ, ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿ
ಮೈಸೂರು

ಹೊರ ಜಿಲ್ಲೆ ಮೌಲ್ಯಮಾಪಕರ ಆರೋಗ್ಯ ಸುರಕ್ಷತೆಗೆ ಒತ್ತು ನೀಡಿ, ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿ

June 4, 2020

ಮೈಸೂರು, ಜೂ.3(ಪಿಎಂ)- ಬೆಂಗಳೂರಿನಲ್ಲಿ ಜೂ.5ರಿಂದ ಆರಂಭವಾಗುವ ದ್ವಿತೀಯ ಪಿಯುಸಿ ವಿಜ್ಞಾನ ವಿಷಯಗಳ ಉತ್ತರ ಪತ್ರಿಕೆ ಮೌಲ್ಯಮಾಪ ನಕ್ಕೆ ಹೊರ ಜಿಲ್ಲೆಗಳಿಂದ ಬರುವ ಉಪನ್ಯಾಸಕರಿಗೆ ವಾಸ್ತವ್ಯ, ಊಟೋಪಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸ ಬೇಕು. ಜೊತೆಗೆ ಮೌಲ್ಯಮಾಪನಕ್ಕೆ ಹಾಜರಾಗದವರಿಗೆ ವಿನಾಯಿತಿ ನೀಡುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಕೋರಿದ್ದಾರೆ.

ಈ ಸಂಬಂಧ ಸಚಿವರಿಗೆ ಪತ್ರ ಬರೆದಿರುವ ಪರಿ ಷತ್ ಸದಸ್ಯ ಮರಿತಿಬ್ಬೇಗೌಡ, ಹೊರ ಜಿಲ್ಲೆಗಳಿಂದ ಮೌಲ್ಯಮಾಪನಕ್ಕೆ ಬರುವವರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯು ಬೆಂಗಳೂರಿನಲ್ಲಿ ಆರೋಗ್ಯ ಸುರಕ್ಷತೆಗೆ ಹೆಚ್ಚು ಒತ್ತು ನೀಡಿ, ವಾಸ್ತವ್ಯ ಹಾಗೂ ಊಟೋಪ ಚಾರದ ವ್ಯವಸ್ಥೆ ಕಡ್ಡಾಯವಾಗಿ ಕಲ್ಪಿಸಬೇಕು. ಮೌಲ್ಯ ಮಾಪನ ಕಾರ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲದವರಿಗೆ ಒತ್ತಡ ಹೇರದೇ ಸಂಪೂರ್ಣ ವಿನಾಯಿತಿ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ವಿಜ್ಞಾನ ವಿಷಯ ಮೌಲ್ಯಮಾಪನ ಸಂಬಂಧ ಶೇ.60 ರಷ್ಟು ಮಹಿಳಾ ಉಪನ್ಯಾಸಕರು ಕಾರ್ಯ ನಿರ್ವಹಿಸು ವವರಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮೌಲ್ಯ ಮಾಪಕರು ಬೆಂಗಳೂರಿಗೆ ಬಂದು ಕನಿಷ್ಠ 10-12 ದಿನಗಳ ಕಾಲ ಮೌಲ್ಯಮಾಪನ ಕಾರ್ಯದಲ್ಲಿ ತೊಡ ಗಿಸಿಕೊಳ್ಳುವುದು ಕೊರೊನಾ ಆತಂಕದ ಸನ್ನಿವೇಶ ದಲ್ಲಿ ಖಂಡಿತ ಕಷ್ಟಸಾಧ್ಯ. ಬಂಧುಗಳು, ಸ್ನೇಹಿತರ ಮನೆ, ಲಾಡ್ಜ್, ಪಿಜಿಗಳಲ್ಲಿ ವಾಸ್ತವ್ಯ ಕಷ್ಟವಿದೆ.

ಸುಗಮ ಸಾರಿಗೆ ಹಾಗೂ ರೈಲು ಸೌಲಭ್ಯವಿಲ್ಲದೆ, ಮೌಲ್ಯಮಾಪಕರು ಭಯಭೀತರಾಗಿದ್ದಾರೆ. ಈ ಸಂಬಂಧ ಜೂ.2ರಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರನ್ನು ಶಾಸಕರಾದ ಸಂಕನೂರು, ಪುಟ್ಟಣ್ಣರವರೊಂದಿಗೆ ಭೇಟಿ ಮಾಡಿ ಮೌಲ್ಯಮಾಪ ಕರ ಸಮಸ್ಯೆ ಹಾಗೂ ಸುಗಮ ಮೌಲ್ಯಮಾಪನದ ಕುರಿತು ಚರ್ಚಿಸಲಾಯಿತು. ನಿರ್ದೇಶಕರು ಸಾಕಷ್ಟು ವಿವರಣೆ ನೀಡಿ, ಬೆಂಗಳೂರಿನಲ್ಲೇ ಮೌಲ್ಯಮಾಪನ ಕಾರ್ಯ ನಡೆಸಲೇಬೇಕಾದ ಅನಿವಾರ್ಯತೆ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ಇಲಾಖೆ ಮೂಲಕ ಮೌಲ್ಯ ಮಾಪಕರಿಗೆ ಆರೋಗ್ಯ ಸುರಕ್ಷತೆ, ವಾಸ್ತವ್ಯ ಹಾಗೂ ಊಟೋಪಚಾರದ ವ್ಯವಸ್ಥೆ ಯಲ್ಲಿ ಯಾವುದೇ ತೊಡಕಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮರಿತಿಬ್ಬೇಗೌಡ ವಿನಂತಿಸಿದ್ದಾರೆ.

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯದಲ್ಲಿ ಈಗಾಗಲೇ ಭಾಗವಹಿಸಿರುವ ಮೌಲ್ಯ ಮಾಪಕರ ಆರೋಗ್ಯ ಸುರಕ್ಷತೆ ಮತ್ತು ಸುಗಮ ಮೌಲ್ಯ ಮಾಪನ ಸಂಬಂಧ ನಾನು ಪತ್ರ ಬರೆದು ಕೆಲವು ಸಲಹೆಗಳನ್ನು ನೀಡಿದ್ದೆ. ಆದರೂ ಅದನ್ನು ಪರಿಶೀಲಿಸಿ, ಸೂಕ್ತ ಬದಲಾವಣೆ ಮಾಡದ ಹಿನ್ನೆಲೆ ಯಲ್ಲಿ ಮೌಲ್ಯಮಾಪಕರು ಅನೇಕ ಸಮಸ್ಯೆ ಎದುರಿಸು ವಂತಾಯಿಲ್ಲದೆ, ಮೌಲ್ಯ ಮಾಪನಕ್ಕೆ ಅಡ್ಡಿ ಉಂಟಾ ಯಿತು. ಇದನ್ನು ತಾವು ಗಮನಿಸಿರುವುದಾಗಿ ಭಾವಿಸಿ ದ್ದೇನೆ ಎಂದು ಸಚಿವರ ಗಮನ ಸೆಳೆದಿದ್ದಾರೆ.

Translate »