ರಾಜ್ಯದಲ್ಲಿ ಅಸಂವಿಧಾನಿಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಕಾರ್ಯ ನಿರ್ವಹಣೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ
ಮೈಸೂರು

ರಾಜ್ಯದಲ್ಲಿ ಅಸಂವಿಧಾನಿಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಕಾರ್ಯ ನಿರ್ವಹಣೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ

June 4, 2020

ಬೆಂಗಳೂರು, ಜೂ.3(ಕೆಎಂಶಿ)- ಅಸಂವಿಧಾನಾತ್ಮಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಯಡಿಯೂರಪ್ಪ ಹೆಸರಿ ಗಷ್ಟೇ ಮುಖ್ಯಮಂತ್ರಿ, ಅವರ ಪುತ್ರ ವಿಜೆ ಯೇಂದ್ರ ಸಹಿ ಮಾಡುವುದು ಮತ್ತು ಆಡಳಿ ತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.

ವಿಜಯೇಂದ್ರರ ಹಸ್ತಕ್ಷೇಪದಿಂದ ಆಡಳಿತ ಪಕ್ಷದ ಶಾಸಕರು ಅಸಮಾಧಾನಗೊಂಡು, ಇದೀಗ ಬಂಡಾಯವಾಗಿ ಪರಿವರ್ತನೆಗೊಂಡಿದೆ. ಬಂಡಾಯ ಎದ್ದಿರುವವರಲ್ಲಿ ಕೆಲವು ಬಿಜೆಪಿ ಶಾಸಕರು ನನ್ನನ್ನು ಖುದ್ದಾಗಿ ಭೇಟಿ ಮಾಡಿ, ಮುಖ್ಯಮಂತ್ರಿ ಪುತ್ರನ ಆಡ ಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರಾಗಿ ಹುಡುಗನ ಮುಂದೆ ಹೋಗಿ, ಕೈಕಟ್ಟಿ ನಿಂತುಕೊಳ್ಳಬೇಕು. ಅವರ ಅನುಮತಿ ಇಲ್ಲದೆ, ಯಾವ ಕೆಲಸವೂ ನಡೆಯು ವುದಿಲ್ಲ. ಇದನ್ನು ನಾವು ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಯಡಿ ಯೂರಪ್ಪನವರ ವಿರುದ್ಧ ಬಂಡಾಯ ಶುರುವಾಗಿರುವುದೇ ಇಲ್ಲಿಂದ. ನಾವು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಸ್ವಪಕ್ಷೀಯ ಶಾಸಕರೇ ತಮ್ಮ ಸರ್ಕಾರವನ್ನು ಉರುಳಿಸಿದರೆ, ನಂತರ ಮುಂದೇನು ಮಾಡಬೇಕೆಂಬುದರ ಬಗ್ಗೆ ನಾವು ಯೋಚನೆ ಮಾಡುತ್ತೇವೆ. ಅವರ ಆಂತರಿಕ ಗಲಭೆಗೂ ನಮಗೂ ಸಂಬಂಧವಿಲ್ಲ ಎಂದರು.

ಯಡಿಯೂರಪ್ಪ ಸರ್ಕಾರದಲ್ಲಿ ಹಣಕಾಸು ವ್ಯವಹಾರ ತಿಳಿಯದವರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಚಿವ ಸೋಮಣ್ಣ ವಿರುದ್ಧ ಕಿಡಿಕಾರಿದರು. ಸೋಮಣ್ಣ ಅವರಿಗೆ ಆರ್ಥಿಕ ವ್ಯವಸ್ಥೆ ಬಗ್ಗೆ ಅಜ್ಞಾನ. ನಾನು ಮುಖ್ಯಮಂತ್ರಿಯಾಗಿದ್ದಾಗ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿದ್ದರು ಎಂದು ಸೋಮಣ್ಣ ಆರೋಪಿಸಿದ್ದಾರೆ. ನಮ್ಮ ಕಾಲದಲ್ಲಿ ಆರ್ಥಿಕ ಶಿಸ್ತಿನಲ್ಲಿ ರಾಜ್ಯ ಸರಕಾರ ಮೊದಲ ಸ್ಥಾನದಲ್ಲಿತ್ತು. ಸೋಮಣ್ಣ ರಾಜಕೀಯಕ್ಕಾಗಿ ಏನೇನೋ ಮಾತಾಡ್ತಾರೆ. ಸೋಮಣ್ಣ ಯಾವ ಆರ್ಥಿಕ ತಜ್ಞಾರಿ? ರಾಜ್ಯದ ಆರ್ಥಿಕ ಸ್ಥಿತಿ ಈಗ ದಿವಾಳಿಯಾಗಿದೆ. ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಇದು ಕರ್ನಾಟಕದ ಕಥೆ ಮಾತ್ರವಲ್ಲ, ಇಡೀ ದೇಶದ ಸ್ಥಿತಿಯೇ ಹೀಗಾಗಿದೆ.

ಕೊರೊನಾ ಬರೋದಕ್ಕಿಂತ ಮುಂಚೆಯಿಂದಲೂ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಸೋಮಣ್ಣನವರಿಗೆ ಸಂಸ್ಕೃತಿ ಇಲ್ಲ. ಬಿಜೆಪಿಯವರ ಹಾಗೆ ನಾನು ಕೀಳುಮಟ್ಟಕ್ಕೆ ಇಳಿಯಲ್ಲ. ನನ್ನ ಮತ್ತು ಡಿಕೆಶಿ ನಡುವೆ ಅತ್ಯುತ್ತಮ ಬಾಂಧವ್ಯ, ಸಂಬಂಧ ಇದೆ. ನಮ್ಮ ನಡುವೆ ಸರಿ ಇಲ್ಲ ಅನ್ನೋದೆಲ್ಲ ಶುದ್ಧ ಸುಳ್ಳು. ಎಚ್ಚರಿಕೆ ವಹಿಸಿದರೆ ಕೊರೊನಾ ಹರಡಲ್ಲ. ಕೊರೊನಾ ಬಗ್ಗೆ ತಿಳಿದುಕೊಳ್ಳುವುದು ಕಾಮನ್ ಸೆನ್ಸ್ ಎಂದು ತಿಳಿಸಿದರು.

Translate »