ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ: ಹೈಸ್ಕೂಲ್ ಶಿಕ್ಷಕರಿಗೆ ತರಬೇತಿ
ಮೈಸೂರು

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ: ಹೈಸ್ಕೂಲ್ ಶಿಕ್ಷಕರಿಗೆ ತರಬೇತಿ

June 4, 2020

ಮೈಸೂರು, ಜೂ.3(ಆರ್‍ಕೆ)-ಜೂನ್ 25ರಿಂದ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿರುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಮೈಸೂರಿನ ಗುಡ್ ಷೆಫರ್ಡ್, ಭಾರತೀಯ ವಿದ್ಯಾಭವನ, ಪಡು ವಾರಹಳ್ಳಿ ಸರ್ಕಾರಿ ಶಾಲೆ ಸೇರಿದಂತೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಬಹುತೇಕ ಪ್ರೌಢ ಶಾಲೆಗಳಲ್ಲಿ ಶಿಕ್ಷಕರು ಆನ್‍ಲೈನ್‍ನಲ್ಲಿ ಜûೂಮ್ ಆ್ಯಪ್, ಯು-ಟ್ಯೂಬ್ ಮೂಲಕ ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ(ಉತ್ತರ) ಡಿ.ಉದಯಕುಮಾರ್, ಇಂದು ಮೈಸೂರಿನ ಗುಡ್ ಷೆಫರ್ಡ್ ಶಾಲೆಗೆ ತೆರಳಿ ಆನ್‍ಲೈನ್ ತರಗತಿಯ ಪ್ರಗತಿ ಪರಿಶೀಲನೆ ನಡೆಸಿದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿರುವ ವಿದ್ಯಾಥಿಗಳಿಗೆ ಪ್ರತೀ ವಿಷಯಕ್ಕೆ ಅರ್ಧ ತಾಸಿ ನಂತೆ ಶಿಕ್ಷಕರು ಪಾಠ ಮಾಡುತ್ತಿದ್ದು, ಪರೀಕ್ಷೆಗೆ ತಯಾರಿ ನಡೆಸುವುದು, ಸಂಭವನೀಯ ಪ್ರಶ್ನೆಗಳಿಗೆ ಉತ್ತರಿಸುವ ಸುಲಭ ಮಾರ್ಗದ ಬಗ್ಗೆಯೂ ಶಿಕ್ಷಕರು ಹೇಳಿಕೊಟ್ಟು, ವಿದ್ಯಾರ್ಥಿ ಗಳ ಡೌಟ್ ಅನ್ನು ಇತ್ಯರ್ಥಗೊಳಿಸುತ್ತಿರುವುದು ಪರಿಶೀಲನೆ ವೇಳೆ ತಿಳಿಯಿತು.

ಲಾಕ್‍ಡೌನ್‍ನಿಂದ ಬಾಕಿ ಉಳಿದಿರುವ ಪಠ್ಯ ಕ್ರಮವನ್ನು ಪೂರ್ಣಗೊಳಿಸುವುದು, ಕ್ಲಿಷ್ಟ ಪಾಠಗಳನ್ನು ಪುನಃ ಹೇಳಿಕೊಟ್ಟು ಮನನ ಮಾಡುವ ಬಗ್ಗೆಯೂ ಕ್ಷೇತ್ರ ಶಿಕ್ಷ ಣಾಧಿಕಾರಿಗಳು ಶಿಕ್ಷಕರಿಗೆ ತರಬೇತಿ ನೀಡಿದರು. ಬಿಇಓ(ದಕ್ಷಿಣ) ಎನ್.ಜಯಂತಿ, ಗುಡ್ ಷೆಫರ್ಡ್ ಕಾನ್ವೆಂಟ್ ಮ್ಯಾನೇಜರ್ ಪ್ರೀತಿ ಜೋಸೆಫ್, ಮುಖ್ಯೋಪಾಧ್ಯಾಯಿನಿ ಸಿ.ಎಲ್.ಬೀನಾ ಹಾಗೂ ಇತರರು ಪರಿಶೀಲನೆ ವೇಳೆ ಉಪಸ್ಥಿತರಿದ್ದರು.

Translate »