ಚೆಕ್‍ಪೋಸ್ಟ್‍ಗಳಲ್ಲಿ ಮುಂದುವರೆದ ತಪಾಸಣೆ ಕಾರ್ಯ
ಮೈಸೂರು

ಚೆಕ್‍ಪೋಸ್ಟ್‍ಗಳಲ್ಲಿ ಮುಂದುವರೆದ ತಪಾಸಣೆ ಕಾರ್ಯ

June 4, 2020

ಮೈಸೂರು, ಜೂ. 3(ಆರ್‍ಕೆ)- ಕೊರೊನಾ ವೈರಸ್ ಹರಡದಂತೆ ತಡೆ ಯಲು ಮೈಸೂರು ನಗರ ಸಂಪರ್ಕ ಕಲ್ಪಿ ಸುವ ಎಲ್ಲಾ ಹೆದ್ದಾರಿ ಹಾಗೂ ಪ್ರಮುಖ ಜಿಲ್ಲಾ ರಸ್ತೆಗಳ ಚೆಕ್‍ಪೋಸ್ಟ್‍ಗಳಲ್ಲಿ ತಪಾ ಸಣೆ ಕಾರ್ಯ ಮುಂದುವರಿದಿದೆ.

ಲಾಕ್‍ಡೌನ್ ನಿರ್ಬಂಧ ಆದೇಶ ಹೊರ ಬಂದ ದಿನದಿಂದಲೇ ಆರಂಭವಾದ ಚೆಕ್ ಪೋಸ್ಟ್‍ಗಳ ತಪಾಸಣೆ ಲಾಕ್‍ಡೌನ್ ಸಡಿಲ ಗೊಂಡರೂ, ಮುಂದುವರಿದಿದ್ದು, ಪೊಲೀ ಸರು ಇದೀಗ ಹೊರರಾಜ್ಯಗಳ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳು ಹಾಗೂ ಅಂತರರಾಜ್ಯ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ವಹಿಸುತ್ತಿದ್ದಾರೆ.

ಅಂತಹ ವಾಹನ ತಡೆದು ಪ್ರಯಾಣಿಕ ರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದೀರಿ, ಉದ್ದೇಶ, ಹಿಂದಿ ರುಗುವ ದಿನಾಂಕ, ಮೊಬೈಲ್ ಮತ್ತು ಆಧಾರ್ ಸಂಖ್ಯೆ ಇತ್ಯಾದಿ ಮಾಹಿತಿ ಗಳನ್ನು ಕಲೆ ಹಾಕುತ್ತಿದ್ದಾರೆ. ಒಂದು ವೇಳೆ ದೇಹದ ಉಷ್ಣಾಂಶ ಹೆಚ್ಚಾಗಿದ್ದರೆ ಅಥವಾ ಅವರು ಹೊರ ರಾಜ್ಯದಿಂದ ಬಂದವ ರೆಂದು ಖಚಿತವಾದಲ್ಲಿ ಅಂತಹ ಪ್ರಯಾ ಣಿಕರನ್ನು ಫೆಸಿಲಿಟಿ ಕ್ವಾರಂಟೈನ್‍ಗೊಳ ಪಡಿಸುವ ಪ್ರಕ್ರಿಯೆ ಮುಂದುವರಿದಿದೆ.

ದಿನದ 24 ಗಂಟೆಯೂ ಮೂರು ಪಾಳಿ ಯಲ್ಲಿ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕೋವಿಡ್-19 ಚೆಕ್ ಪೋಸ್ಟ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಸ್ಥಳದಲ್ಲಿ ಮೂಲ ಸೌಕರ್ಯ ಒದಗಿಸಲಾಗಿದೆ. ಬೆಂಗಳೂರು, ಮೈಸೂರು ಹೆದ್ದಾರಿ, ಕೆಆರ್‍ಎಸ್ ರಸ್ತೆ, ಹುಣಸೂರು ರಸ್ತೆ, ಬೋಗಾದಿ ರಸ್ತೆ, ಹೆಚ್.ಡಿ. ಕೋಟೆ ರಸ್ತೆ, ನಂಜನಗೂಡು ರಸ್ತೆ, ತಿ.ನರಸೀಪು ರಸ್ತೆ, ಬನ್ನೂರು ರಸ್ತೆ ಹಾಗೂ ಮಹ ದೇವಪುರ ರಸ್ತೆಗಳಲ್ಲಿ ಚೆಕ್‍ಪೋಸ್ಟ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಆಯಾ ವ್ಯಾಪ್ತಿಯ ಪೊಲೀಸ್ ಠಾಣಾ ಸಿಬ್ಬಂದಿಗಳಲ್ಲಿ ತಪಾ ಸಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

Translate »